ಇಂದು ನಾವು ಕಷ್ಟಕರವಾದ ಸನ್ನಿವೇಶದಲ್ಲಿ ಬದುಕುತ್ತಿದ್ದೇವೆ. ಏಕೆಂದರೆ ಇಲ್ಲಿ ಯಾವುದು ಸರಿಯಾಗಿ ನೆಡೆಯುತ್ತಿಲ್ಲ. ಎಲ್ಲ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ. ಇದಕ್ಕೆಲ್ಲ ನಾವೆ ಕಾರಣ ಎಂದು ಅಂದುಕೊಂಡರೆ ನಮಗೆ ನಮ್ಮ ಮೇಲೆಯೆ ಒಮ್ಮೆ ಅಸಹ್ಯ ಮೂಡುತ್ತದೆ. ಎಲ್ಲ ವ್ಯವಸ್ಥೆಗಳು ಸರಿಯಿದೆ ಎಂದು ಮುಂದಿನ ಜೀವನದ ಕನಸನ್ನು ಕಟ್ಟಿಕೊಳ್ಳುತ್ತಿರುವಾಗಲೆ ಈ ಇಡಿ ಜಗತ್ತನ್ನೆ ದಿಗ್ಬ್ರಮೆಗೊಳಿಸುವ ಮಹಾಮಾರಿಯೊಂದು ನಮ್ಮನ್ನು ಆವರಿಸಿರುವುದು ನಮ್ಮ ವಿಪರ್ಯಾಸವೆ ಸರಿ. ಅದ್ಯಾವುದೊ ಹಿಂದಿನ ಕಾಲದಲ್ಲಿ, ಬರುವ ರೋಗಗಳಿಗೆ ಔಷಧಿಗಳಿಲ್ಲದೆ ಸಾವಿಗಿಡಾಗುತ್ತಿದ್ದರು, ಒಂದುಬಾರಿ ಊರಿಗೆ ರೋಗ ಬಂತೆಂದರೆ ಸಾವಿರ ಸಾವಿರ ಹೆಣಗಳ ರಾಶಿಯೆ ಬಿದ್ದಿರುತ್ತಿದ್ದವು. ರೋಗಕ್ಕೆ ಮದ್ದು ಕಂಡುಹಿಡಿಯಲಾಗದೆ ಸಾವಿಗೆ ಶರಣಾಗುತ್ತಿದ್ದರು. ಆದರೆ ಇಂದು ಮತ್ತದೆ ಪರಿಸ್ಥಿತಿಯನ್ನು ಎದುರಿಸುವ ಸನ್ನಿವೇಶದಲ್ಲಿ ನಾವಿದ್ದೇವೆ. ನಮ್ಮ ದೇಶ ಅಭಿವೃದ್ಧಿ ಸಾಧಿಸುತ್ತಿರುವ ದೇಶವಾಗಿದೆ ಇಲ್ಲಿ ವಾಸಿಸುವ ಜನರಲ್ಲಿ 70% ರಷ್ಟು ಜನರು ಅಕ್ಷರಸ್ಥರೆ ಇದ್ದಾರೆ. ಅವರಲ್ಲಿ ಕೆಲವರಿಗೆ ಪ್ರಶಸ್ತಿಗಳು (ಪರಿಣಿತ ವಿಷಯ) ಲಭಿಸಿದೆ. ಹೀಗಿರುವಾಗಲು ನಮ್ಮಿಂದ ನಮ್ಮನು ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದು ನಮ್ಮ ತಪ್ಪಲ್ಲ. ಇಷ್ಟು ದಿನಗಳ ಕಾಲ ನಾವು ನಡೆದು ಬಂದ ದಾರಿಯ ತಪ್ಪು. ತನಗೆ ಎಲ್ಲಾ ಬೇಕು, ತಾನೆ ರಾಜನಾಗಿ ಎಲ್ಲರನ್ನು ಆಳಬೇಕು, ತನ್ನಿಂದಲೆ ಎಲ್ಲರು ಬದುಕಬೇಕು ಹೀಗೆ ಅತಿಯಾಸೆಯನ್ನು ಹೊಂದಿ ಪ್ರಕೃತಿಯ ಮಡಿಲಿಗೆ ಬೆಂಕಿ ಇಟ್ಟೆವಲ್ಲ ಅದು ನಾವು ಮಾಡಿರೊ ತಪ್ಪು. ನಾವು ಅಕ್ಷರಸ್ಥರು, ನಮಗೆ ಎಲ್ಲಾ ತಿಳಿಯುತ್ತದೆ, ನಮಗೆ ಸರಿ ತಪ್ಪುಗಳ ಕಲ್ಪನೆಯಿದೆ ಎಂದೆಲ್ಲ ಅನಕ್ಷರಸ್ಥರನ್ನು ದೋಷಿಸಿ ಸ್ವಾರ್ಥದ ದಾರಿ ಹಿಡಿದು ನೆಡೆದುಕೊಂಡು ಹೋಗಿದ್ದೆ ನಮ್ಮ ತಪ್ಪು. ಇಂದು ಈ ಮಹಾಮಾರಿಯಿಂದ ನಮ್ಮನ್ನು ರಕ್ಷಿಸಲು ಬೇರೆಯವರು ಯಾರೂ ತಮ್ಮ ಪ್ರಾಣವನ್ನು ಒತ್ತೆ ಇಟ್ಟಿದ್ದಾರೆ.
**********
ಅದೊಂದು ಕಾಲ ಸುತ್ತ ಮುತ್ತಲು ಹಸಿರಿನ ವಾತಾವರಣ ಬೆಳಗ್ಗೆ ಏಳುತ್ತಲೆ ಹಕ್ಕಿಗಳ ಚಿಲಿಪಿಲಿಯ ಗಾನ, ಕೋಳಿಯ ಕೂಗು ಎಲ್ಲರಿಗೂ ಸೂರ್ಯೋದಯದ ಸಂಕೇತ. ಸೂರ್ಯನ ಕಿರಣ ಮೈಯ ಮೇಲೆ ಬೀಳುತ್ತಲೇ ಆಲಸ್ಯ ಶಮನ. ಮನೆಯಲ್ಲಿ ಬೆಳೆದಿರುವ ತರಕಾರಿ ಹಣ್ಣುಗಳಿಂದ ಮಾಡಿದ ಅಡುಗೆ, ಅದನ್ನು ತಿಂದಾಗ ದೊರಕುವ ಖುಷಿ ಮತ್ತೆಲ್ಲೂ ದೊರಕಲಾರದು. ತಂಪಾದ ಗಾಳಿ, ಶುಭ್ರವಾದ ಬೆಳಕು ಎಲ್ಲಾಕಡೆಯಲ್ಲು ಸ್ವಚ್ಛಂದ ಪರಿಸರ. ಆದರೆ ಈ ವಾತಾವರಣದಲ್ಲಿ ಬೆಳೆದ ಕೆಲವರು ಅನಕ್ಷರಸ್ಥರು. ಆದರೂ ನಮ್ಮ ಜೀವನವನ್ನು ಸ್ವಚ್ಛಂದವಾಗಿ ಇಟ್ಟುಕೊಂಡಿದ್ದಾರೆ.
ಆದರೆ ಇದೊಂದು ಕಾಲ ಸುತ್ತಮುತ್ತಲು ಕಟ್ಟಡಗಳು ಕಾರ್ಖಾನೆಗಳು ಬೆಳಗ್ಗೆ ಏಳುತ್ತಲೆ ಫೋನ್ ನಿಂದ ಅಲಾರಾಂ ಶಬ್ಧ. ಅದು ಸೂರ್ಯ ನೆತ್ತಿಗೆ ಬಂದು ನಿಂತಿರುವ ಸಮಯ. ಮನೆಯಲ್ಲಿ ಹೋಟೆಲ್ನಿಂದ ತಂದು ಬಿಸಿ-ಬಿಸಿ ಮಾಡಿದ ಅಡುಗೆ, ಅದನ್ನು ತಿಂದಾಗಾ ದೊರಕುವ ಖುಷಿ ತಾತ್ಕಾಲಿಕ. ಅಲ್ಲಿಯ ವಾತಾವರಣ ಹೊಗೆ ಹೊಗೆ ಮಾಲಿನ್ಯ ಬರಿತ. ಎಲ್ಲಾ ಕಡೆಯಲ್ಲೂ ಕಲುಷಿತ ಪರಿಸರ ಎಲ್ಲೆಲ್ಲೂ ಮಾಲಿನ್ಯ. ಆದರೆ ಈ ವಾತಾವರಣದಲ್ಲಿ ವಾಸಿಸುವ ಜನರಲ್ಲಿ ಹಲವರು ಅಕ್ಷರಸ್ಥರು. ಆದರೂ ಜೀವನ ಮಾಲಿನ್ಯದಿಂದ ಕೂಡಿದೆ.
ಇದೆ ಹಳ್ಳಿಯ ಮತ್ತು ಹಿಂದಿನ ಕಾಲದ ಜೀವನಕ್ಕಿರುವ ವ್ಯತ್ಯಾಸ. ಇಲ್ಲಿ ನಮಗೆ ವಿಚಿತ್ರ ಎನಿಸುವುದು ಅಂದಿನ ಜನ ಅನಕ್ಷರಸ್ಥರಿದ್ದರೂ ಜೀವನ ನಡೆಸುವ ದಾರಿಯನ್ನು ಕಂಡುಕೊಂಡಿದ್ದರು. ಪರಿಸರವನ್ನು ದೇವರೆಂದು ಭಾವಿಸುತ್ತಿದ್ದರು ಇಂದಿನ ತಂತ್ರಜ್ಞಾನ ತಿಳಿಯದೆ ಇದ್ದರು ಯಾವ ಕಾಲದಲ್ಲಿ ಏನಾಗಬಲ್ಲದು ಎಂಬ ಸಾಮಾನ್ಯ ಜ್ಞಾನ ಉಳ್ಳವರಾಗಿದ್ದರು. ತನಗೆ ಯಾವುದೇ ತೊಂದರೆ ಬಂದರೂ ಪರವಾಗಿಲ್ಲ ನಾವೆಲ್ಲರೂ ಒಟ್ಟಾಗಿ ಬದುಕೋಣ ಎಂಬ ಭಾವನೆ ಇತ್ತು ತನ್ನ ಸುತ್ತಮುತ್ತಲಿನಲ್ಲಿ ಆಗುವ ಸಮಸ್ಯೆಯನ್ನು ಎಲ್ಲರೂ ತಮ್ಮ ಸಮಸ್ಯೆ ಎಂದು ಭಾವಿಸಿ ಬಗೆಹರಿಸುವ ಪದ್ಧತಿಗಳಿದ್ದವು ಅಕ್ಷರಬರದಿದ್ದರೇನು ಆರೋಗ್ಯಯುತ ಜೀವನ ನಡೆಸಲು ಕಲಿತುಕೊಂಡಿದ್ದರು ಅವರಿಗೆ ಎಲ್ಲವೂ ಗೊತ್ತಿತ್ತು ಒಂದು ಮರ ಕಡಿದರೆ ಆ ಜಾಗದಲ್ಲಿ 10 ಗಿಡಗಳನ್ನು ಬೆಳೆಸುತ್ತಿದ್ದರು ಆದರೆ ಇಂದು ನಾವೆಲ್ಲರೂ ಕರೆಸಿಕೊಳ್ಳುತ್ತಿರುವುದು ಅಕ್ಷರಸ್ಥರೆಂದು ಅದಕ್ಕೆ ಬೇರೆ ಬೇರೆ ತರಹದ ಡಿಗ್ರಿಗಳು ಆದರೆ ನಾವು ಮಾಡುವ ಕೆಲಸ ಮಾತ್ರ ಎಲ್ಲವನ್ನ ವಿನಾಶದ ಅಂಚಿಗೆ ತಳ್ಳುವ ಕೆಲಸ. ಅಕ್ಷರಸ್ಥರಾಗಿದ್ದರು ನಮ್ಮ ನಡುವಳಿಕೆಗಳು ಮಾತ್ರ ಎಲ್ಲರಿಗಿಂತಲೂ (ಅಂದರೆ ಹಿಂದಿನ ಕಾಲದ ಜನರಿಗಿಂತ) ಕೆಳಮಟ್ಟದ್ದು. ಒಂದು ಮರ ಕಡಿದರೆ ಆ ಜಾಗದಲ್ಲಿ ಹೊಸ ತಂತ್ರಜ್ಞಾನದಿಂದ ಇನ್ನೇನನ್ನೊ ಮಾಡುವ ಆಲೋಚನೆ ನಮ್ಮದು ಇದೆ ನಮಗೂ ನಮ್ಮ ಹಿಂದಿನವರಿಗೂ ಇರುವ ವ್ಯತ್ಯಾಸವಾಗಿದೆ. ನಾವೇನೊ ದೇಶವನ್ನು ಉದ್ಧಾರ ಮಾಡಬೇಕು ಎಂಬ ನಿಟ್ಟಿನಲ್ಲಿ ಅಕ್ಷರವನ್ನು ಕಲಿಯುತ್ತೇವೆ. ಆದರೆ ಅಭಿವೃದ್ಧಿ ಎಂಬ ಹೆಸರಿನಲ್ಲಿ ವಿನಾಶವನ್ನು ಮಾಡುತ್ತಿದ್ದೇವೆ ಹಾಗಾಗಿ ಈ ವಿಷಯವಾಗಿ ನಾವು ಸ್ವಲ್ಪ ಜಾಗೃತರಾಗಬೇಕಾಗಿದೆ ಏಕೆಂದರೆ ನಾವು”ಅಕ್ಷರಸ್ಥರು” ನಮಗೆ ಎಲ್ಲವೂ ಅರ್ಥವಾಗುತ್ತದೆ ಎಲ್ಲವನ್ನು ಅರಿತು ಮುಂದೆ ನಡೆಯುವ ಸಾಮರ್ಥ್ಯ ನಮಗಿದೆ. ನಮಗೆ ಅಭಿವೃದ್ಧಿ ಯಾವುದು ವಿನಾಶ ಯಾವುದು ಎಂಬ ಸ್ಪಷ್ಟವಾದ ಚಿತ್ರಣ ತಿಳಿದಿದೆ. ಹೀಗಿರುವಾಗ ಇನ್ನೂ ಎಚ್ಚೆತ್ತುಕೊಂಡಿಲ್ಲವಾದರೆ ನಮ್ಮ ಹಗ್ಗಕ್ಕೆ ನಾವೇ ತಲೆಕೊಟ್ಟು ನೇಣುಕಂಬಕ್ಕೆ ಬಿಗಿದುಕೊಂಡಂತೆ. ಹಾಗಾಗಿ ಹಾಗಾಗಬಾರದು ಎಂದಾದರೆ ಈ ನಿಟ್ಟಿನಲ್ಲಿ ನಾವೆಲ್ಲರೂ ಕೂಡ ಜಾಗೃತರಾಗೋಣ ನಾವು ಜಾಗೃತರಾಗುವ ಜೊತೆಗೆ ಎಲ್ಲರಲ್ಲು ಜಾಗೃತಿ ಮೂಡಿಸೋಣ.

ಮಧುರಾ ಎಲ್ ಭಟ್ಟ.
ಪತ್ರಿಕೋದ್ಯಮ ವಿದ್ಯಾರ್ಥಿನಿ
ಎಸ್ ಡಿ ಎಮ್ ಕಾಲೇಜ್ ಉಜಿರೆ. ಉ.ಕ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ