ಅಂದು ಪ್ರೇಮಿಗಳು ದಂಪತಿಗಳಾಗಿದ್ದರು.
ದಂಪತಿಗಳು ಬೆಚ್ಚಿಬಿದ್ದರು!
ಗೂಂಡಾಗಳು ನುಗ್ಗಿದರು!
ಅಮರ್ ಗುಂಡಗಳ ಜೊತೆ ಕೆಲ ಸಮಯ ಫೈಟ್ ಮಾಡಿದನು.
ಕೊನೆಗೆ ಸೋತಿದ್ದನು.
ಚಾಕು ವಾರ್ ಮಾಡಿದರು.
ಜ್ಯೋತಿ ಹೌಹಾರಿ ಅರಚಿದಳು.
ಕಾಮ ಪಿಪಾಸಿ ಗುಂಡಾಗಳು ಸಾಮೂಹಿಕ ಅತ್ಯಾಚಾರವೆಸಗಿ ಜಾಗ ಖಾಲಿ ಮಾಡಿದರು.
ತುಂಬ ಹೊತ್ತಿನ ನಂತರ ಈಗ ಪ್ರಜ್ಞೆ ಬಂದಿತ್ತು.
“ಅಮರ್… ” ಎನ್ನುತ್ತಾ ಅವನನ್ನು ಅಪ್ಪಿಕೊಂಡಳು ಜ್ಯೋತಿ.
“ಜ್ಯೋತಿ… ನಿನಗೆ.. ಏನು ಆಗಿಲ್ಲತಾನೆ?”
“ನನ್ನ ಬಾಳಿನ ಜೊತೆ ಆ ಕಾಮುಕ ರಾಕ್ಷಸರು ಚೆಲ್ಲಾಟ ಆಡಿದ್ದಾರೆ. ನನ್ನ ಶೀಲ ಅಪವಿತ್ರಗೊಂಡಿದೆ. ಈ ನಮ್ಮ ಪ್ರೇಮ ಅಧ್ಯಯನ ಅಳಿಸಿ ಹೋಗಿದೆ. ಇನ್ನು ನಾನು ಬದುಕುಳಿಯಲು ಸಾಧ್ಯವಿಲ್ಲ ಅಮರ್…”
“ನೀನೇನು ಹೇಳುತ್ತಿದ್ದೀಯ ಜ್ಯೋತಿ! ಆ ಕಾಮುಕ ರಾಕ್ಷಸರಂದೇಕೆ ಆ ದೇವರಿಂದಲೂ ನಮ್ಮಿಬ್ಬರನ್ನು ಬೇರ್ಪಡಿಸಿಸಲಾಗದು ಜ್ಯೋತಿ. ಈ ಕಚಡ ಪಾಪಿ ಪ್ರಪಂಚವನ್ನು ನಾನು ಬಿಡಲ್ಲ ಜ್ಯೋತಿ. ನೀನು ಧೈರ್ಯ ತಂದುಕೊಳ್ಳು ಚಿನ್ನಾ! ನಿನ್ನ ದೇಹ ಅಪವಿತ್ರಗೊಂಡರೆನಂತೆ, ದೇಹ- ಶೀಲಗಿಂತಲೂ ಈ ನಮ್ಮ ಪವಿತ್ರ ಪರಿಶುದ್ಧ ಪ್ರೀತಿ ದೊಡ್ಡದು ಕಣೆ ಬಂಗಾರ. ಈ ಅನುರಾಗ ಅಳಿಸದು ಜ್ಯೋತಿ… ನೀನು ಸಮಾಧಾನ ತಂದುಕೊಳು ಜ್ಯೋತಿ!”ಎಂದು ಸಮಧಾನ ಪಡಿಸುತ್ತಿದ್ದರೆ ಜ್ಯೋತಿ ಅವಳು , ವತ್ತರಿಸಿ ಬರುತ್ತಿದ್ದ ದುಃಖ ತಡೆದುಕೊಳ್ಳಲಾಗದೆ ಅವನ ಎದೆಯಲ್ಲಿ ಮುಖ ಇರಿಸಿ ಅಳುತ್ತಿದ್ದಳು.
ಸಮಯ ಉರುಳುತ್ತಿತ್ತು.
***
ಮಾರನೇ ದಿನವೇ ಅಮರ್, ಆ ನಾಲ್ಕು ಜನ ಕಾಮುಕ ರಾಕ್ಷಸರನ್ನು ನಡು ರಸ್ತೆಯಲ್ಲಿ ಹುಚ್ಚು ನಾಯಿಗಳಿಗೆ ಓಡಾಡಿಸಿ ಹೊಡೆದಂತೆ ಮಚ್ಚಿನಿಂದ ಕೊಚ್ಚಿಹಾಕಿ ಬಲು ವಿಕೃತವಾಗಿ ಸೇಡು ತೀರಿಸಿಕೊಂಡಿದ್ದನು.
ಲಾಯರ್ ಜ್ಯೋತಿ ತುಂಬ ಹೋರಾಡಿ ತನ್ನ ಗಂಡ ಅಮರ್ ನಿರಪರಾಧಿ ಎಂದು ಕೋರ್ಟಿನಲ್ಲಿ ಪ್ರೂವ್ ಮಾಡಿದಳು.
ಅಮರ- ಜ್ಯೋತಿ… ನಡೆದ ಆ ಕೊಳಕು ಘಟನೆಯನ್ನು ಮರೆತು ಈಗ ಹೊಸ ಬಾಳು ಪ್ರಾರಂಭಿಸಿದ್ದಾರೆ.
ಅವರ ಹೊಸ ಬಾಳಿಗೆ ನಾವು ಶುಭ ಹಾರೈಸೋಣ.
ಆಲ್ ದಿ ಬೆಸ್ಟ್…!
ಜಿ.ಎಲ್.ನಾಗೇಶ. ಬಸವಕಲ್ಯಾಣ