ಮೂರ್ತಿಗಳನ್ನ ಪೂಜಿಸದೆ
ಮಾನವೀಯತೆ ಪೂಜಿಸುವೆ ನಾ
ಕಾಲ್ಪನಿಕ ದೇವರ ನಂಬದೆ
ಬುದ್ಧ,ಬಸವ,ಅಂಬೇಡ್ಕರ್ ಓದುವೆ
ನಾ
ಎದೆ ತಟ್ಟಿ ಹೇಳುವೆ
ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ

ವೇದ ಪುರಾಣ ಓದದೆ
ಶಿವಾಜಿ ಮಹಾರಾಜರನ್ನ ಓದುವೆ ನಾ
ಕಲ್ಲಿಗೆ ಕೈ ಮುಗಿಯದೆ
ಫುಲೇ ಶಾಹು ಒಡೆಯರ್ ಗೆ ತಲೆ ಬಾಗುವೆ ನಾ
ಎದೆ ತಟ್ಟಿ ಹೇಳುವೆ
ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ

ಹಿಂದೂ ಮುಸ್ಲಿಂ ಶಿಖ ಎನ್ನದೆ
ಮನುಷ್ಯನೆಂದು ಬದುಕುವೆ ನಾ
ಪೂಜೆ ಮಂತ್ರ ಹವನ ಲೆಕ್ಕಿಸದೆ
ಶ್ರಮದ ಮೇಲೆ ನಂಬಿಕೆ ಇಡುವೆ ನಾ
ಎದೆ ತಟ್ಟಿ ಹೇಳುವೆ
ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ

ಬೆಕ್ಕು ಅಡ್ಡ ಬಂತೆಂದು ನಿಲ್ಲದೆ
ಅಮಾವಾಸ್ಯೆ ಕೆಟ್ಟದಿನವೆಂದು ಹೇಳದೆ
ಕಾಗೆ ಅಪಶಕುನ ವೇನ್ನದೆ
ಮುಢನಂಬಿಕೆಗಳನ್ನ ಧಿಕ್ಕರಿಸಿ
ಎದೆ ತಟ್ಟಿ ಹೇಳುವೆ
ಸುಳ್ಳು ತ್ಯೆಜಿಸುವ ನಾಸ್ತಿಕ್ ನಾ

ಎಮ್ ಎನ್ ವಾಕಪಟೆ
ಉಪನ್ಯಾಸಕರು ಸರಕಾರಿ ಪದವಿ ಪೂರ್ವ ಕಾಲೇಜು, ಚಿಕ್ಕೋಡಿ ಜಿಲ್ಲೆ :ಬೆಳಗಾವಿ

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ