ತಾಯ ನಾಡ ಕರುಳ
ನುಡಿಯ ಭಾಷೆ ಪಸರಿಸೆ
ಎಲ್ಲೆಡೆ ಕನ್ನಡ ಕನ್ನಡ

ಕಂದನ ಮೊದಲ ತೊದಲ
ನುಡಿಯಲಿ ಮತ್ತೆ ಮತ್ತೆ
ಕೇಳಲಿ ಕನ್ನಡ ಕನ್ನಡ

ಹೆಣ್ಣಿನ ಅಂದ ಚಂದವ
ಹೊಗಳಿ ವರ್ಣಿಸಿ ಕೇಳೆ
ಚಂದ ಕನ್ನಡ ಕನ್ನಡ

ಪ್ರಕೃತಿ ಸೊಬಗ ಅಂದವ
ಪೋಣಿಸಿ ಹೇಳೇ ಚೆಂದ
ಕನ್ನಡ ಕನ್ನಡ

ಬೀಸುವ ಗಾಳಿಯಲ್ಲಿ
ಸಾಗಿ ಸಾಗಿ ಬರಲಿ
ಕನ್ನಡ ಕನ್ನಡ

ಹರಿವ ನದಿಯ
ಜುಳು ಜುಳು ಶಬ್ದ
ಕೇಳಲಿ ಕನ್ನಡ ಕನ್ನಡ

ಆಕಳ ಕೊರಳ
ಗೆಜ್ಜೆನಾದ ಕೇಳಲಿ
ಕನ್ನಡ ಕನ್ನಡ

ಜಿ.ಆರ್ ಬಸವರಾಜೇಶ್ವರಿ

ಸರ್ಕಾರಿ ಪ್ರೌಢಶಾಲೆ ಹಗರಿ ಗಜಾಪುರ. ಹಗರಿ ಗಜಾಪುರ ಪೋಸ್ಟ್ ಹರಪನಹಳ್ಳಿ ತಾಲೂಕು ವಿಜಯನಗರ ಜಿಲ್ಲೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ