ಏನೈತಿ ಈ ಜಗದಾಗ
ಹೋಗೋದೈತಿ ನಾಲ್ಕು ಮಂದಿ ಹೆಗಲುಮ್ಯಾಗ/
ಕಾಲು ಮಡಚಿ ಕೂರೋದೈತಿ
ಕಂಬವಿಲ್ಲದ ಮನೆಯೊಳಗ/
ನಾನು ನನ್ನದು ಅನತೀಯಲ್ಲ
ಅಲ್ಲಿಂದ ಏನು ತಂದೀದಿ/
ಏನೆಲ್ಲ ಪಡೆದರೂ ನೀ ಎಲ್ಲಾದು ಇಲ್ಲಿಂದ/
ಮೂರು ದಿನದ ಸಂತೆ ಇದು
ಊರೂರ ತಿರುಗೋದೈತಿ
ಸಂತೆ ಮುಗಿದ ಮೇಲೆ ಗಂಟು ಮೂಟೆ ಕಟ್ಟೋದೈತಿ//
ಆಷ್ಟು ಕೊಟ್ಟೆ ಇಷ್ಟು ಕೊಟ್ಟೆ ಅನತೀಯಲ್ಲ
ನೀ ಕೊಟ್ಟಿದ್ದಾದರೂ ಏನೈತಿ
ಏನೆಲ್ಲ ಕೊಟ್ಟರೂ ನೀ ಎಲ್ಲದೂ ಅವನದೆ ಐತಿ/
ಗಳಿಸಿ ಗಳಿಸಿ ಇಟ್ಟೀನಿ ಅಂತೀದಿ ನೀ
ನೀ ಗಳಿಸಿದ್ದಾದರೂ ಏನೈತಿ/
ನೀ ಗಳಸಿದ್ದೆಲ್ಲಾ ಅವನದೇ ಐತಿ
ಹುಚ್ಚು ಭ್ರಾಂತಿ ನಿನದೈತಿ/
ಬದುಕೊಂದು ಜಟಕಾ ಬಂಡಿ
ನಡೆಸಬೇಕು ನೀ ಸತ್ಸಂಗ ದ ಎತ್ತು ಹೂಡಿ/
ಭವಮುಕ್ತನಾಗಲು ನೀ ಶಿವಧ್ಯಾನ ಮಾಡೋದೈತಿ/
ದೇವರ ದೇವನ ಜಪವ ಮಾಡಿ ಕೈವಲ್ಯ ಪಡೆಯೋದೈತಿ/
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ ತಾ.ಮುಂಡರಗಿ ಜಿ.ಗದಗ
ಮೊ- 9972431963