ಹಸಿರಿನ ಪ್ರಕೃತಿಯೇ ನೀನೇಕೆ ಮೌನಿಯಾಗಿರುವೆ?
ಹಸಿರೆಲೆಯೋಳ್ ಉಸಿರೇ ತುಂಬಿರಲು
ನೀನೇಕೆ ಸುಮ್ಮನಿರುವೇ
ಹಚ್ಚ ಹಸಿರಿನವಳು
ಸ್ವಚ್ಛ ಮನಸ್ಸಿನವಳು
ನೀನೇಕೆ ಮೌನಿಯಾಗಿರುವೆ?
ಹಸಿರೇ ನೀ ಬೇರಾದೆ, ಕಾಂಡವಾದೆ, ಎಲೆಯಾದೆ,
ಹೂವಾದೆ,ಕಾಯಾದೆ ಹಣ್ಣಾದೆ,
ಮಳೆಯ ಚಕ್ರವಾದೆ ಮನುಷ್ಯನ ಉಸಿರಾಾದೆ
ನೀನೇಕೆ ಮೌನಿಯಾಗಿರುವೆ?
ಹಸಿರ ಒಡಲಿನೂಳ್ ಉಸಿರನ್ನು ತುಂಬಿರುವೆ
ಕಸಿವಿಸಿ ಬದುಕಿಗೆ ಕಿಸೆಯೂ ನೀನಾಗಿರುವೇ
ಕಸವನ್ನು ರಸ ಮಾಡಿ ರಸದೂಳ್ ಸ್ವಾದ ತುಂಬುವ
ಸ್ವಚ್ಛ ಮನಸ್ಸಿನ ತಂಪು ಗಾಳಿಯೇ
ನೀನೇಕೆ ಮೌನಿಯಾಗಿರುವೆ?
ಪಕ್ಷಿಗಳಿಗೆ ತಾಯಾಸರೆ ನೀ
ಪ್ರಾಣಿಗಳ ಪಕ್ಕೆಲುಬಿಗೆ ಉಡಿಯಾದೆ ನೀ
ಹಸಿರಿನ ಪರಿಸರವೇ ಕೀಟಗಳ ಹಸಿವನ್ನು ನೀಗಿಸಿ
ಉಸಿರು ತುಂಬಿರುವೆ ಜೀವಗಳಿಗೆ ಜೀವ
ತುಂಬಿರುವ ಪರಿಸರವೇ
ನೀನೇಕೆ ಮೌನಿಯಾಗಿರುವೆ?
ಪ್ರಾಣಿಗಳ ಕರುಳು ಬಳ್ಳಿಯಾಗಿರುವೆ
ಪಕ್ಷಿಗಳ ರೆಕ್ಕೆಗಳಿಗೆ ಬಲವಾಗಿರುವೆ
ಸಕಲ ಜೀವಿಗಳ ಆಧಾರ ಸ್ತಂಭವಾಗಿರುವೆ
ಓ ಹಸಿರ ಪರಿಸರವೇ
ನೀನೇಕೆ ಮೌನಿಯಾಗಿರುವೆ?
ನಾನೆಂಬ ಅಹಂನಿಂದ ಬೀಗುವ
ನರನ ಹುಟ್ಟಡಗಿಸುವ ಶಕ್ತಿ ನಿನ್ನಲ್ಲಿರುವುದು
ಮಾತೇ ಬರದ ಮೂಕ ಜಂತುಗಳಿಗೆ
ಸಕಲವು ಜೊತೆಯಿರುವೆ
ಅವುಗಳ ಮೂಕ ವೇದನೆ ಕೇಳುವ ಹೇ ಪರಿಸರವೇ
ನೀನೇಕೆ ಮೌನಿಯಾಗಿರುವೆ?
ಹಸಿರಾಗು ಉಸಿರಾಗು ಸಕಲ ಜೀವರಾಶಿಗಳ
ಉಳಿವಿಗಾಗಿ
ಒಳಿತಿಗಾಗಿ ನೀ ಎದ್ದು ನಿಲ್ಲು ಓ ನನ್ನ
ಪರಿಸರವೇ
ನೀನೇಕೆ ಮೌನಿಯಾಗಿರುವೆ?
–ದೇವೇಂದ್ರಮ್ಮ ಬಿ ಕೋಟಗೇರಾ
9986685140