ಪುಸ್ತಕದ ಪುಟಗಳಲ್ಲಿ ದಾಖಲೆಯಾಗಿ ಉಳಿಯುವಂತಹ ಅವಿಸ್ಮರಣೀಯ ನೆನಪುಗಳು ಇರುವಂತೆ ಎಲ್ಲರ ಪ್ರಶಂಸೆಗೆ ಮಾದರಿಯಂತೆ ಇರಲಿ
ಉಸಿರು ಇರುವವರೆಗೂ ನಿನ್ನ ನಾಲ್ಕು ದಿನದ ಬದುಕು ಹೀಗಿರಬೇಕು ಎಂದರೆ ವರ್ಷಗಳೇ ಕಳೆದರು ನೆನಪಿನಲ್ಲಿ ಸದಾಕಾಲ ಉಳಿಯುವಂತೆ ಮನದಲಿರಲಿ
ಜನ್ಮದಾತರಾಗಿ ನಮ್ಮ ಉದರದಲ್ಲಿ ಜನಿಸಿದ ಭಾಗ್ಯವೇ ನಮ್ಮದು ಎಂದು ಹೆತ್ತವರು ಮೆಚ್ಚುವಂತೆ ಗುರುಹಿರಿಯರು ಹಾರೈಸಿ ಹೊಗಳುವಂತೆ ಬದುಕಿನಲ್ಲಿರಲಿ
ಕಷ್ಟಸುಖಗಳಲಿ ಎಲ್ಲರ ಜೋತೆಯಾಗಿ ಬಂಧು ಮಿತ್ರರೂಡನೆ ಹೆದರದಿರಿ ನಾನಿರುವೆ ನಿಮ್ಮ ಜೋತೆಯಲಿ ಎಂದು ಸಂತೈಸುವ ಕೈಗಳನು ಎಂದೆಂದಿಗೂ ಮರೆಯಲಾರೆನು ಎನ್ನುವಂತೆ
ಜೀವನದಲ್ಲಿ ಸಿಗಲಿ.
ರಾಧಾ ಹನುಮಂತಪ್ಪ ಟಿ.
ಹರಿಹರ