ಭಗವಾನ ಬುದ್ಧ
ತಥಾಗತ: ಗೌತಮ ಬುದ್ಧ ಭಗವಾನರು
ವಿಶ್ವದ ಮನುಕುಲಕ್ಕೆ ಮಾದರಿಯಾಗಿ ಯರು
ಅತಿ ಆಸೆಗಳಿಗೆ ಮೊರೆ ಹೋಗುವರು
ದುಃಖ ದುಮ್ಮಾನಕ್ಕೆ ತಾವೇ ಕಾರಣಯೆನ್ನುವರು.
ಮೋಸ ವಂಚನೆ ದ್ರೋಹ ಸುಲಿಗೆ ಮಾಡುವವರು
ಕರ್ಮದ ಫಲಗಳನ್ನು ತಾವೇ ಉಣುಯೆನ್ನುವರು.
ಪ್ರಾಣಿ ಪಕ್ಷಿಗಳಿಗೆ ಅನುಕಂಪ ತೋರಿಸುವವರು
ಬಾಳಲ್ಲಿ ಸುಖ ಶಾಂತಿ ಸಮೃದ್ಧಿ ಇದೆ ಎನ್ನುವರು.
ಆಡಂಬರ ಜೀವನವು ಎತಕೆ ಎನ್ನುವರು
ಅದಕ್ಕೆ ಉದಾಹರಣೆಗೆಯು ನಾನೇಯೆನ್ನುವರು
ಮಾತೃ ಪಿತ್ರೋಗಳಿಗೆ ನಿತ್ಯ ಪೂಜೆ ಗೈಯೆನ್ನುವರು.
ಸಕಲ ಜೀವ ಜಂತುಗಳಿಗೆ ದಯ ತೋರುಯೆನ್ನುವರು.
ಧ್ಯಾನ ಜಪತಪಗಳನ್ನು ಮಾಡು ಎನ್ನುವರು
ಆತ್ಮಕ್ಕೆ ಸುಖ- ಶಾಂತಿಯು ಕೊಡುಯೆನ್ನುವರು
ನಾನು ಯಾರೆಂದು ತಿಳಿದುಕೊಳ್ಳು ಎನ್ನುವರು
ಅರಿವೇ ಗುರುವೆಂದು ಬದುಕುಯೆನ್ನುವರು.
– ರವಿ ಎಸ್. ಮೋಘಾ, ಕಿಣ್ಣಿ ಸಡಕ ತಾ.ಕಮಲಾಪುರ ಜಿ.ಕಲಬುರಗಿ.