Oplus_131072

 

ಅರೆ ಇದೇನಿದು ! ಪುಟ್ಟಕ್ಕನ ಮಕ್ಕಳು ಧಾರವಾಹಿ ಹೆಸರು ಕೇಳಿದ್ದೇವೆ ಇದು ಎಂಥದ್ದು ಮಂಜಮ್ಮನ ಮಕ್ಕಳು ಎಂದು ನೀವೂ ಯೋಚಿಸುತ್ತಿರಬಹುದು ಅಲ್ಲವೇ ! ನಿಮ್ಮ ಊಹೆಗೂ ಮೀರಿದ ಸಾಧನೆಯ ಕಥೆಯಿದು . ಯಲಿವಾಳ ಇದು ಧಾರವಾಡ ಜಿಲ್ಲೆಯ ಕುಂದಗೋಳ ತಾಲ್ಲೂಕಿನ ಪುಟ್ಟ ಹಳ್ಳಿ ಇಲ್ಲಿ ಕ್ಷೌರಿಕ ಕೆಲಸ ಮಾಡುವ ಯಲ್ಲಪ್ಪ ಕಡು ಬಡವ ಅವರ ಮೂರು ಜನ ಮಕ್ಕಳು ಒಬ್ಬರ ಹೆಸರು ದೇವಕ್ಕ ಇನ್ನೊಬ್ಬಳು ಮಂಜಕ್ಕ ಮತೊಬ್ಬ ತಮ್ಮ ಪ್ರಭು ಬಡವರಾಗಿದ್ದರಿಂದ
ದೇವಕ್ಕನ ಮದುವೆ ಯನ್ನು ಮಾಡಿ ತನ್ನ ಭಾರವನ್ನು ಕಡಿಮೆ ಮಾಡಿಕೊಂಡಿದ್ದರು ಇನ್ನೊಬ್ಬರ ಹೆಸರು ಮಂಜಕ್ಕ
ಯಲ್ಲಪ್ಪ ನದು ಕುಡಿತದ ಚಟವಿದ್ದರಿಂದ ಮನೆಯ ಭಾರವನ್ನು ಅವರ ಹೆಂಡತಿಯಾದ ಶಾಂತಮ್ಮ ವಹಿಸಿಕೊಂಡಿದ್ದರು ತಮ್ಮ ಪ್ರಭು ಬಾಲ್ಯ ಕಳೆಯುವ ಹೊತ್ತಿಗೆ ಅನಾರೋಗ್ಯದಿಂದ ತಂದೆ ಯಲ್ಲಪ್ಪ ತೀರಿಕೊಂಡರು ಅಕ್ಷರಶಃ ಸಂಸಾರದ ಪೂರ್ಣ ಭಾರ ಶಾಂತಕ್ಕನ ಮೇಲೆ ಬಿದ್ದಿತು ಆಚಾರವಂತಳು ವಿಚಾರವಂತಳು ಆದ ಶಾಂತಕ್ಕ ಹಾಗೂ ಹೀಗೂ ಮಾಡಿ ನವಿಲೂರಿಗೆ ಮಂಜಮ್ಮ ನ ಮದುವೆ ಮಾಡಿ ಕೈ ತೊಳೆದುಕೊಂಡಳು ಇಲ್ಲಿಂದ ಪ್ರಾರಂಭವಾಯಿತು ನೋಡಿ ಮಂಜ ಕ್ಕ ಬಡತನದ ಬೇಗೆಯಲ್ಲಿ ಬೇಯುತ್ತ ತನ್ನ ಸಂಸಾರದ ನೊಗ ಹೊತ್ತು ವರ್ಷಕ್ಕೆ ಒಂದು ಮಗು ಹೆತ್ತು ಅವರನ್ನು ಸಾಕುತ್ತಾ ಸಲಹು ತ್ತಾ ಸಂಸಾರದ ಗಾಡಿಯನ್ನು ಎಳೆಯುತ್ತಾ ಮುಂದೆ ಜೀವನ ಸಾಗಿಸುತ್ತಿದ್ದಳು ಇವರಿಗೆ ಅಂಗನವಾಡಿ ಸಹಾಯಕಿ ಹುದ್ದೆ ಸಿಕ್ಕಿತು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಗಂಡನ ದುಡಿಮೆ ಅಷ್ಟಕಷ್ಟೆ ಇದ್ದ ಸಂದರ್ಭದಲ್ಲಿ ಇದು ಅವರ ಪಾಲಿಗೆ ವರದಾನವಾಯಿತು ತಾಯಿ ಮಂಜಮ್ಮ ಮನಸ್ಸು ಮಾಡಿ ಮಕ್ಕಳಿಗೆ ಶಿಕ್ಷಣ ಕೊಡಿಸೋಣ ಎಂದು ಮಕ್ಕಳನ್ನು ಶಾಲೆಗೆ ಸೇರಿಸಿದರು. ಇತ್ತ ಕಡೆ ಕಾಯಕ ಮಾಡುತ್ತಾ ಜಾಸ್ತಿ ಓದದ ಮಂಜಮ್ಮ 8 ನೇ ತರಗತಿಗೆ ಮದುವೆಯಾಗಿ ಓದು ನಿಲ್ಲಿಸಿದ ದಿಟ್ಟ ಹೆಣ್ಣು ಮಗಳು ಗಂಡ ಹೇಗೆ ಇರಲಿ ಆತನೊಂದಿಗೆ ಸಂಸಾರ ಮಾಡಿ ಬದುಕಿಗೆ ಭರವಸೆ ಇಟ್ಟು ಆತನ ಮೇಲೆ ಪ್ರೀತಿ ವಿಶ್ವಾಸ ಹಾಗೂ ನಂಬಿಕೆ ಇಟ್ಟಿದ್ದಳು ಮಕ್ಕಳು ದೊಡ್ಡವರಾಗುತ್ತ ಬರುತ್ತಿದ್ದಂತೆ ಇವರಿಗೆ ಸಂಸಾರದ ತಾಪತ್ರಯ ಬರತೊಡಗಿತು ಮಂಜಮ್ಮ ದೃತಿಗೆಡದೆ ಸಂಸಾರದ ನೊಗವನ್ನು ಎಳೆಯುತ್ತಾ ತನ್ನ ಜೀವನವನ್ನು ನಡೆಸುತ್ತಾ ಮುಂದೆ ಸಾಗಿದಳು . ಹೆಣ್ಣು ಕುಂಟುಂಬದ ಕಣ್ಣು ಎಂದು ಕರೆಯುತ್ತಾರೆ ಆದುದರಿಂದ ಮಕ್ಕಳನ್ನು ಸರಕಾರಿ ಶಾಲೆಗೆ ಸೇರಿಸಿ ಚೆನ್ನಾಗಿ ಓದಿಸಿ ಬಾಳಿಗೆ ಭರವಸೆ ತಂದು ಕೊಂಡ ಮಂಜಮ್ಮ ಹಿಂದೆ ತಿರುಗಿ ನೋಡಲಿಲ್ಲ ಇವರ ಒಬ್ಬ ಮಗಳು ಈಗ ವೈದ್ಯ ವೃತ್ತಿ ಮಾಡುತ್ತಿದ್ದಾರೆ ಜನರ ಸೇವೆ ಮಾಡುತ್ತಾ ಬಡತನ ಕೇವಲ ವ್ಯಕ್ತಿಗೆ ಹೊರತು ಸಾದನೆ ಮಾಡುವವರಿಗೆ ಅಲ್ಲ ಎಂಬುದನ್ನು ತೋರಿಸಿ ಕೊಟ್ಟ ಧೀಮಂತೆ ಇನ್ನೊಬ್ಬ ಹೆಣ್ಣು ಮಗಳು ಎಲ್ ಎಲ್ ಬಿ ಓದುತ್ತಿದ್ದಾಳೆ ಅವಳು ಸಹ ಜಾಣೆ ಇವಳು ಸಹ ತನ್ನ ಕಾರ್ಯ ಮಾಡುತ್ತಾ ಬದುಕಿನಲ್ಲಿ ಯಶಸ್ಸು ಗಳಿಸಿದ್ದಾಳೆ ಇನ್ನೊಬ್ಬ ಮೂರನೇ ಮಗಳು ಸಿ ಡಿ ಪಿವೋ ಆಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೆಲಸ ಮಾಡುತ್ತಿದ್ದಾರೆ ಹಾಗೆಯೇ ಕೊನೆಯ ಮಗ ಈಗ ಪದವಿ ಓದುತ್ತಾ ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಾನೆ. ತುಂಬು ಸಂಸಾರ ಮಂಜಕ್ಕ ಇಂದಿಗೂ ಸಹ ಅಂಗನವಾಡಿ ಸಹಾಯಕ ಹುದ್ದೆ ಮಾಡುತ್ತಾಳೆ ಮಕ್ಕಳ ಯಶಸ್ಸು ಕಂಡು ಸಂತಸ ಪಡುತ್ತಿದ್ದಾಳೆ ಮತ್ತು ಮಗನ ಕಾಯಕ ನೋಡಿ ಆತನಿಗೆ ಮಾರ್ಗದರ್ಶನ ಮಾಡುತ್ತಾ ಯಶಸ್ಸಿನ ಅಲೆಯಲ್ಲಿ ತೇಲುತ್ತಾ ಬಡತನ ಮೆಟ್ಟಿ ನಿಂತ ಧೀರ ಮಹಿಳೆ ಆದುದರಿಂದ ನಾವು ತಿಳಿಯಬೇಕಾದ ಸಾರ ಇಷ್ಟೇ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ಹೋದಾಗ ಸುಖ ಬಂದಾಗ ಹಿಗ್ಗದೆ ದುಃಖ ಬಂದಾಗ ಕುಗ್ಗದೆ ಎಲ್ಲವನ್ನೂ ಎದುರಿಸಿ ಗೆಲುವು ಸಾಧಿಸುವ ಕಾಯಕ ಮಾಡಿದಾಗ ಯಶಸ್ಸು ಬೆನ್ನತ್ತಿ ಬರುತ್ತದೆ ಎಂಬುದು ಇವರ ಅಚಲ ನಂಬಿಕೆ ಆದುದರಿಂದ ಮಕ್ಕಳಿಗೆ ನಾವು ಸಾಧಕರ ಸಾಧನೆಗಳನ್ನು ಓದಿಸಬೇಕು ಕಲಿಸಬೇಕು ಅನುಸರಿಸಬೇಕು ಪ್ರಯತ್ನಿಸಬೇಕು ಅಂದಾಗ ಮಾತ್ರ ಪ್ರತಿಯೊಬ್ಬರೂ ಮಂಜಕ್ಕನಂತೆ ಬದುಕಿನಲ್ಲಿ ಲಯ ಕಂಡುಕೊಂಡು
ಯಶಸ್ಸಿನ ಶಿಖರ ತಲುಪಲು ಸಹಾಯಕವಾಗುತ್ತದೆ . ಮಂಜಕ್ಕನ ಈ ಸಾಧನೆಗೆ ಹ್ಯಾಂಡ್ಸ ಅಪ್ ಹೇಳಬೇಕು ಇತರರಿಗೆ ನಾವು ಮಾದರಿಯಾಗಿ ಬದುಕಿನಲ್ಲಿ ಸಾಧಿಸಿ ಇತರರಿಗೆ ಮಾದರಿಯಾಗಿ ಬದುಕಿದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂಬುದು ನನ್ನ ಅಭಿಪ್ರಾಯ ಆದುದರಿಂದ ಮಂಜಕ್ಕನ ಮಕ್ಕಳು ಎಲ್ಲರಿಗೂ ಮಾದರಿಯಾಗಲಿ ಯಶಸ್ಸಿನ ಕೀರ್ತಿಯನ್ನು ಗಳಿಸಲಿ ಎಂಬ ಸದಾಶಯ ನಮ್ಮದು

ಮಹೇಶ್ ಎಸ್ ಹೆಚ್
ಹೆಸರೂರ
ಸಾಹಿತಿಗಳು ಹವ್ಯಾಸಿ ಬರಹಗಾರರು ಶಿಕ್ಷಕರು
ತಾಲ್ಲೂಕು ಮುಂಡರಗಿ
ಜಿಲ್ಲೆ ಗದಗ

ಮಹೇಶ್ ಎಸ್ ಹೆಚ್ಹೆಸರೂರ ಸಾಹಿತಿಗಳು ಹವ್ಯಾಸಿ ಬರಹಗಾರರು ಶಿಕ್ಷಕರು ತಾಲ್ಲೂಕು ಮುಂಡರಗಿ ಜಿಲ್ಲೆ ಗದಗ
Oplus_131072

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ