ಮನಸ್ಸಿನ ಮುಖಗಳು. (ಕವಿತೆ)
1
ನಾನು ಹುಟ್ಟಿದಾಗ
ನೀನು ಹುಟ್ಟಿದೆ
ಸದ್ದು ಗದ್ದಲವಿಲ್ಲದೆ!
ನಗು ಮೊಗದ ಚೆಲುವ ಸೂಸಿ.
ನನ್ನ ಬದುಕಿಗೆ ಕನಸ್ಸು ತುಂಬಿದ
ಮಲ್ಲಿಗೆ ಹೂವು ನೀನು !
2
ನಾನು ಬೆಳೆದಂತೆಲ್ಲ
ನೀನು ಬೆಳೆದೆ
ಕುತೂಹಲವು ಹೆಚ್ಚಾಗಿ
ಅವರಿವರಿಗೆ ಹೊಟ್ಟೆ ಕಿಚ್ಚಾಗಿ
ಹಟ ಚಂಚಲತೆಯ ಕಡಿವಾಣವಿಲ್ಲದ
ಕುದುರೆಯಂತಾದೆ ನೀನು.
3
ನಾನು ಯೌವನಕ್ಕೆರಿದಾಗ
ನನ್ನೇತ್ತರಕ್ಕೆ ಏರಿದೆ ನೀನು!
ಪ್ರೀತಿ, ಪ್ರೇಮ ಪ್ರಣಯದ
ವಾಸನೆಯು ಮೂಡಿಸಿ
ಸಿಹಿ ಮಕರಂದ ಉಂಟಾದ ಮೇಲೆ
ನನ್ನ ಬಿಟ್ಟು ಹೋಗದೆ ನಿಂತ
ಬರಿ,ಹುಟ್ಟೆ ನೀನು !
4
ರಸವಿಲ್ಲದ ಹುಟ್ಟೆಯಂತಾದ
ಬದುಕಿನೊಳಗೆ
ಬೆನ್ನು ಬಿಡದ ಬೇತಾಳನಂತೆ
ಆಸೆ-ಆಕಾಂಕ್ಷೆಗಳೊಂದಿಗೆ
ತಾನು ತನ್ನವರೆನ್ನದೆ
ದ್ವೇಷ-ಅಸೂಯೆಗಳ ಜೋತೆಗೂಡಿ
ಸದಾ, ‘ ಬುಸುಗುಟ್ಟುವ ‘
ಹಾವು ನೀನು !
– ಮಚ್ಚೇಂದ್ರ ಪಿ ಅಣಕಲ್.