ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಕಂಪನಿಯು ಸೆಪ್ಟೆಂಬರ್ 5ರಂದು 1:1 ಅನುಪಾತದಲ್ಲಿ ಬೋನಸ್ ಷೇರು ನೀಡಲು ಅಧಿಕೃತವಾಗಿ ಒಪ್ಪಿಗೆ ನೀಡಿದೆ.
ಈ ಕಂಪನಿಯು ಸೆಪ್ಟೆಂಬರ್ 2017ರ ಬಳಿಕ ಮೊದಲ ಬಾರಿಗೆ ಬೋನಸ್ ಷೇರು ನೀಡುತಿದ್ದು. ಇದು ಅರ್ಹ ರಿಲಯನ್ಸ್ ಷೇರುದಾರರು ಮಾತ್ರ ಒಂದು ಷೇರಿಗೆ ಮತ್ತೊಂದು ಷೇರು ಉಚಿತವಾಗಿ ಪಡೆಯುತ್ತಾರೆ.
.ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಷೇರುದಾರರಿಗೆ ಬಂಪರ್ ಗುಡ್‌ನ್ಯೂಸ್ ಕೊಟ್ಟಿದೆ. ಇತ್ತೀಚೆಗೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಲಾಗಿದ್ದ ಬೋನಸ್ ಷೇರು ವಿತರಣೆಗೆ ರಿಲಯನ್ಸ್ ಇಂಡಸ್ಟ್ರೀಸ್ ಬೋರ್ಡ್ ಅನುಮೋದನೆ ನೀಡಿದೆ. ಈ ಮೂಲಕ ರಿಲಯನ್ಸ್ ಇಂಡಸ್ಟ್ರೀಸ್‌ನಲ್ಲಿ ಷೇರು ಹೊಂದಿರುವವರಿಗೆ ಬೋನಸ್ ಷೇರು ಸಿಗಲಿದೆ
ಬೋನಸ್ ಷೇರು ಘೋಷಿಸಿದ ರಿಲಯನ್ಸ್ ಇಂಡಸ್ಟ್ರೀಸ್, ಒಂದು ಷೇರಿಗೆ ಮತ್ತೊಂದು ಬೋನಸ್!
2017ರ ಬಳಿಕ ಮೊದಲ ಬಾರಿಗೆ ಬೋನಸ್ ಷೇರು ವಿತರಿಸುತ್ತಿದೆ ರಿಲಯನ್ಸ್ ಇಂಡಸ್ಟ್ರೀಸ್
ಷೇರು ಬಂಡವಾಳ 50,000 ಕೋಟಿಗೆ ಹೆಚ್ಚಿಸಲು ಆರ್‌ಐಎಲ್ ಪ್ರಸ್ತಾಪ
Ink
ರಿಲಯನ್ಸ್ ಇಂಡಸ್ಟ್ರೀಸ್ ದೇಶದ ಅತ್ಯಂತ ಮೌಲ್ಯಯುತ ಲಾರ್ಜ ಕ್ಯಾಪ್ ಕಂಪನಿಯಾಗಿದ್ದು, ಇದು ಮೊದಲ ಸ್ಥಾನದಲ್ಲಿದೆ. ಬೋನಸ್ ಷೇರು ಕುರಿತಾಗಿ ರೆಕಾರ್ಡ್ ದಿನಾಂಕವನ್ನು ಸದ್ಯದಲ್ಲೇ ಘೋಷಿಸುವ ಸಾಧ್ಯತೆಯಿದೆ. ರೇಕಾರ್ಡ್ ದಿನಾಂಕದ ಕುರಿತಾಗಿ ಮಾಹಿತಿಯನ್ನು ಪ್ರತ್ಯೇಕವಾಗಿ ತಿಳಿಸಲಾಗುವುದು” ಎಂದು ಆರ್‌ಐಎಲ್ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ತಿಳಿಸಿದೆ.
ಕಂಪನಿಯ ಅಧಿಕೃತ ಷೇರು ಬಂಡವಾಳ 50,000 ಕೋಟಿಗೆ ಹೆಚ್ಚಿಸಲು ಆರ್‌ಐಎಲ್ ಪ್ರಸ್ತಾಪ
ರಿಲಯನ್ಸ್ ಇಂಡಸ್ಟ್ರೀಸ್ ಕಂಪನಿಯ ಬೋರ್ಡ್ ಇದೇ ವೇಳೆಯಲ್ಲಿ ಕಂಪನಿಯ ಅಧಿಕೃತ ಷೇರು ಬಂಡವಾಳವನ್ನು 15,000 ಕೋಟಿ ರೂಪಾಯಿಗೆ ಹೆಚ್ಚಿಸಲು ಪ್ರಸ್ತಾವನೆಯನ್ನು ಸಹ ಅನುಮೋದಿಸಿದೆ.
5ನೇ ಬಾರಿಗೆ ಬೋನಸ್ ಷೇರು ವಿತರಿಸುತ್ತಿದೆ ಆರ್‌ಐಎಲ್
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಇತಿಹಾಸದಲ್ಲಿ ಐದನೇ ಬಾರಿಗೆ ಬೋನಸ್ ಷೇರು ವಿತರಿಸುತ್ತಿದೆ. ಕಂಪನಯು ಈ ಹಿಂದೆ 1983 ರಲ್ಲಿ 1997, 2009 ಮತ್ತು 2017ರಲ್ಲಿ ಬೋನಸ್ ಷೇರು ನೀಡಿತ್ತು.
ಒಂದು ವರ್ಷದಲ್ಲಿ 23.3 ಪರ್ಸೆಂಟ್ ರಿಟರ್ನ್’
ರಿಲಯನ್ಸ ಇಂಡಸ್ಟ್ರೀಸ್ ಲಿಮಿಟೆಡ್ ಇವತ್ತಿಗೆ ಸರಿಯಾಗಿ ಒಂದು ವರ್ಷದ ಹಿಂದಕ್ಕೆ ಹೋಲಿಸಿದ್ರೆ, 15.3 ಪರ್ಸೆಂಟ್ ರಿಟರ್ನ್ ನೀಡಿದೆ. ಅದ್ರಲ್ಲೂ ಕಳೆದ ಒಂದು ವರ್ಷದಲ್ಲಿ 23.3 ಪರ್ಸೆಂಟ್ ರಿಟರ್ನ್ ಕೊಟ್ಟಿದೆ.
ಇತ್ತೀಚೆಗೆ ನಡೆದಂತಹ ಆರ್‌ಐಎಲ್ ಕಂಪನಿಯ 47ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಕಂಪನಿಯ ಬೆಳವಣಿಗೆ ಮತ್ತು ವಿಸ್ತರಣೆಯನ್ನು ಹೆಚ್ಚಿಸಲು ಭಾರತದ ಅತಿದೊಡ್ಡ ಕಂಪನಿಯನ್ನು ಡೀಪ್ ಟೆಕ್ ಮತ್ತು ನ್ಯೂ ಎನರ್ಜಿ ಶಕ್ತಿಯಾಗಿ ಪರಿವರ್ತಿಸುವ ಮಹತ್ವಾಕಾಂಕ್ಷೆಯ ದೃಷ್ಟಿಕೋನವನ್ನು ಅನಾವರಣಗೊಳಿಸಿದರು.
Disclaimer : ಇಲ್ಲಿ ಒದಗಿಸಿದ ಮಾಹಿತಿಯನ್ನು ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಮಾರುಕಟ್ಟೆಯ ಅಪಾಯಗಳಿಗೆ ಒಳಪಟ್ಟಿರುತ್ತದೆ ಎಂಬುದನ್ನು ಇಲ್ಲಿ ತಿಳಿಸುವುದು ಮುಖ್ಯವಾಗಿದೆ. ಹೂಡಿಕೆದಾರರಾಗಿ, ಹಣವನ್ನು ಹೂಡಿಕೆ ಮಾಡುವ ಮೊದಲು ಯಾವಾಗಲೂ ತಜ್ಞರನ್ನು ಸಂಪರ್ಕಿಸಿ.
ಕಲ್ಯಾಣ ಸಿರಿಗನ್ನಡ ಅಂತರ್ಜಾಲ ತಾಣವು ಯಾವುದೇ ಹಣವನ್ನು ಹೂಡಿಕೆ ಮಾಡಲು ಯಾರಿಗೂ ಸಲಹೆ ನೀಡುವುದಿಲ್ಲ ಹಾಗೂ ನಿಮ್ಮ ಹೂಡಿಕೆಗೆ ಲೇಖಕರಾಗಲಿ ಅಥವಾ ಕಲ್ಯಾಣ ಸಿರಿಗನ್ನಡ ತಾಣವಾಗಲಿ ಜವಾಬ್ದಾರವಲ್ಲ.
ಈ ಪತ್ರಿಕೆ ನಿಮ್ಮ ನೇತೃತ್ವ ಮತ್ತು ಮಾರ್ಗದರ್ಶನ ದಲ್ಲಿ ಇನ್ನೂ ಎತ್ತರಕ್ಕೆ ಬೆಲೆಯಲಿ ….
ಶುಭ ವಾಗಲಿ ……
.