Oplus_131072

ಸಾಂಸ್ಕೃತಿಕ ನೆಲೆಬೀಡು ಬೀದರ.

ಕಲ್ಯಾಣ ಕರ್ನಾಟಕದ ಸಾಹಿತ್ಯ ಬರುವ ಬೀದರ ಕಲೆ ಸಂಸ್ಕೃತಿ ಹಾಗೂ ಐತಿಹಾಸಿಕವಾಗಿ ಶತ ಶತಮಾನಗಳಿಂದಲೂ ಹೆಸರುವಾಸಿಯಾದ ಜಿಲ್ಲೆಯಾಗಿದೆ. ಈ ಶರಣ ಜಿಲ್ಲೆ ಸಾಹಿತ್ಯ, ಸಂಸ್ಕೃತಿ ಕಲೆಗಳಿಂದ ಬಹು ಮಹತ್ವ ಪಡೆದಿದೆ. ಪ್ರಾಚೀನ ಕಾಲದಿಂದ ಬೀದರ ವಿದುರನ ನಾಡೆಂದು ಕರೆಯಿಸಿಕೊಂಡಿದೆ. ಪ್ರಾಚೀನ ಶಿಲಾಯುಗದ ಕುರುಹುಗಳು ಇಲ್ಲಿ ದೊರಕಿವೆ.
ಹಳೆಗನ್ನಡ ಸಾಹಿತ್ಯಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ ಗದ್ಯಕೃತಿ ವಡ್ಡಾರಾಧನೆಯನ್ನು ರಚಿಸಿದ್ದು, ಈ ಜಿಲ್ಲೆಯ ಹಳ್ಳಿಖೇಡದಲ್ಲಿ, ವೈಶಿಷ್ಟ್ಯ ಪೂರ್ಣವಾದ ವಚನ ಸಾಹಿತ್ಯವನ್ನು ನೀಡಿದ ಬಸವಾದಿ ಶರಣರ ಕಾಯಕ, ಕ್ಷೇತ್ರವಾಗಿದೆ.

ಅನೇಕ ಸಾಮ್ರಾಜ್ಯಗಳನ್ನು ಮೆರೆದ ವೀರ ಭೂಮಿಯಾಗಿದೆ. ಅಧ್ಯಾತ್ಮದ ಅನುಭಾವಿಗಳ ಕವಿ-ಕಲಾವಿದರ ತೌರಾದ ಬೀದರ ಜಿಲ್ಲೆ ಕುಂತಳನಾಡು, ಅಟ್ಟಳೆನಾಡು, ಧರಿನಾಡು,
ಕಲ್ಯಾಣ ನಾಡು ಮುಂತಾದ ಹೆಸರುಗಳಿಂದ ಪ್ರಖ್ಯಾತಿಯನ್ನು ಪಡೆದಿದೆ. ಇಲ್ಲಿಯ ಸಾಂಸ್ಕೃತಿಕ ಇತಿಹಾಸವು ಉಜ್ವಲವಾಗಿದೆ. ಶರಣರು, ​​ಸಂತರು, ದಾಸರು, ಅನುಭಾವಿಗಳು, ಸೂಫಿಗಳು ಬಾಳಿ ಬದುಕಿದ ನಾಡಾಗಿದೆ.
ಈ ನೆಲದಲ್ಲಿ ನಿಜಮನ ಆಡಳಿತದಿಂದಾಗಿ ಉರ್ದು ಭಾಷೆಯ ಪ್ರಭಾವ ಎದ್ದು ಕಾಣುತ್ತದೆ. ಇದು ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿ ಭಾಗವಾಗದೆ ತೆಲುಗು ಮತ್ತು ಭಾಷೆಯಿಂದ ಈ ಭಾಗದ ಸಂಸ್ಕೃತಿಯ ಮೇಲೆ ದಟ್ಟ
ಪ್ರಭಾವ ಬೀರಿದೆ. ಹೀಗಾಗಿ ಇಲ್ಲಿನ ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿಯೂ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣುತ್ತೇವೆ. ಆದರೂ ಇಲ್ಲಿ ಅನೇಕ ಜನ ತತ್ವಪದಕಾರರು, ದೊಡ್ಡಾಟ ಆಡುವವರು, ಕೋಲಾಟ, ಗೊಂಬೆಯಾಟ, ಕಲ್ಲಿ ತುರಾಯಿ, ಲಾವಣಿ, ಶಾಹೇರಿ, ಜಾನಪದ ಕಥೆ, ಗಾದೆ, ಒಗಟು, ವಡಪುಗಳನ್ನು ರಚಿಸಿ ಹೇಳುತ್ತಾ ಬಂದಿರುವ ಜಾನಪದರು ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸಿಕೊಂಡು ಬಂದಿದ್ದಾರೆ. ಆ ಮೂಲಕ ಕನ್ನಡ ಸಾಹಿತ್ಯ ಸಂಸ್ಕೃತಿಗೆ ಒಂದು ಭದ್ರ ಬುನಾದಿಯನ್ನೂ ಹಾಕಿಕೊಟ್ಟಿದ್ದಾರೆ.ಮತ್ತು ಸಾಹಿತ್ಯ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೀದರ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದೆ.

ಇತಿಹಾಸ:
ಬೀದರ ಇಂದು ಶ್ರೀಮಂತ ಪ್ರದೇಶವೆಂದು ಕರೆಯಿಸಿಕೊಂಡರೂ ಸುಮಾರು ವರ್ಷಗಳಿಂದ ತನ್ನ ಐತಿಹಾಸಿಕತೆಯಿಂದ ತುಂಬಾ. ಮೌರ್ಯರು,
ಶಾತವಾಹನರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ಕಲಚೂರಿ ಓಬಹಮನಿ

ಸುಲ್ತಾನರು, ನಿಜಾಮರು ಹೀಗೆ ಅನೇಕ ಅರಸು ಮನೆತನಗಳ ಆಳ್ವಿಕೆಗೆ ಒಳಪಟ್ಟು,
ಆಯಾ ಸಂದರ್ಭದಲ್ಲಿ ಅಭಿವೃದ್ಧಿ ಕಂಡಿದೆ.
ಹಾಗೆ ಚಾರಿತ್ರಿಕ ಸ್ಮಾರಕಗಳನ್ನು
ನಿರ್ಮಿಸಿರುವುದನ್ನು ಕಾಣುತ್ತೇವೆ.
ಬೀದರದಲ್ಲಿ ನೋಡಬಹುದಾದ ಪ್ರಸಿದ್ಧ ಸ್ಮಾರಕಗಳಲ್ಲಿ ಬೀದರ
ಕೋಟೆ ಪ್ರಮುಖವಾದದ್ದು, ಇದನ್ನು ‘ಕ್ವಾಟಿ ಖಿಲ್ಲಾ’ ಎಂದೂ ಕರೆಯುತ್ತಾರೆ. ಇದನ್ನು ಬಹಮನಿ ಸುಲ್ತಾನ ಅಹ್ಮದಶಾಹ ವಲಿ ಎನ್ನುವ ರಾಜನು ಪ್ರವರ್ಧಮಾನಕ್ಕೆ ತಂದಿದ್ದಾನೆ
ಎಂದು ತಿಳಿದುಬರುತ್ತದೆ. ಈ ಕೋಟೆಯಲ್ಲಿ ರಂಗೀನ್ ಮಹಲ್, ತಖ್-ಎ-ಮಹಲ್,
ತರ್ಕಾಸ್ ಮಹಲ್, ಗಗನ್ ಮಹಲ್, ಸೋಲಾಕಂಬ ಮಜ್ಜಿದ, ಬಾರುದಖಾನ,
ಬೊಮ್ಮಗೊಂಡೇಶ್ವರ ಕೆರೆ, ವಸ್ತು ಸಂಗ್ರಾಹಾಲಯ ಕಣ್ಮನಗಳನ್ನು ಸೆಳೆಯುತ್ತವೆ.
ಬೀದರಿನ ಐತಿಹಾಸಿಕ ಸ್ಥಳಗಳೆಂದರೆ ಗವನ ಮಸಾ, ಅಷ್ಟೂರಿನ
ಗುಂಬಜಗಳು, ಸಬ್ಬಲ್ಬಾರಿದ ಗುಂಬಜಗಳು, ಬಸವಕಲ್ಯಾಣ ಕೋಟೆ
, ಭಾತಂಬ್ರಾ ಕೋಟೆ, ಭಾಲ್ಕಿ ಕೋಟೆ, ಗುರುನಾನಕ ಝರಾ, ದಕ್ಷಿಣ ಕಾಶಿಯಾದ ಮೈಲಾರ, ನರಸಿಂಹ ಸಂಸ್ಕೃತಿ ಸಂಸ್ಕೃತಿಯ ಇತಿಹಾಸವಿರುವ ಧಾರ್ಮಿಕ ಕ್ಷೇತ್ರಗಳು
, ಸಂಗಿಯ ಸಂಸ್ಕೃತಿಯ ಶಿವಲಿಂಗಪುರದ ಶಿವಮಂದಿರ .

ಸಾಂಸ್ಕೃತಿಕ ಪರಂಪರೆ:
ಕರ್ನಾಟಕ ರಾಜ್ಯದಲ್ಲಿ ಬೀದರ ಜಿಲ್ಲೆಯ ವ್ಯಾಪ್ತಿಯು ಚಿಕ್ಕದಾದರೂ ಇದು ಕರ್ನಾಟಕಕ್ಕೆ ಮುಕುಟ ಪ್ರಾಯವಾಗಿದೆ. ಅನೇಕ ಶತಮಾನಗಳ ಐತಿಹ್ಯ ಹಾಗೂ
ಉಜ್ವಲವಾದ ಸಾಂಸ್ಕೃತಿಕ ಪರಂಪರೆಯನ್ನು ಮೆರೆದ ಜಿಲ್ಲೆಯಾಗಿದೆ. ಕನ್ನಡದ ವೀರ
ಪರಂಪರೆಯ ಶ್ರೇಷ್ಠ ನಾಗರಿಕತೆಯ ತೊಟ್ಟಿಲಾಗಿ ಬೆಳೆದಿದೆ. ಅನೇಕ ಓಪನ್ನೆತನಗಳು

ಆಳ್ವಿಕೆಯಲ್ಲಿ ಇಲ್ಲಿಯ ಸಂಸ್ಕೃತಿಯು ಪ್ರಜ್ವಲಮಾನವಾಗಿ ಬೆಳಗಿದೆ. ವಿವಿಧ ಮತ,ಪಂಥಗಳ ಸ್ಮಾರಕಗಳು ಧರ್ಮ ಸಂಸ್ಕೃತಿಯ ಸಮನ್ವಯದ ಜೀವಂತ ಸಾಕ್ಷಿ.
ಶರಣರ ಸಂಸ್ಕೃತಿಯ ಪ್ರಮುಖ ಕೇಂದ್ರವಾದ ಕಲ್ಯಾಣದ ಬಗ್ಗೆ ಚೆನ್ನಬಸವಣ್ಣನವರ

ವಚನ ಹೀಗಿದೆ:
ಸ್ವತ್ತಿ ಸಮಸ್ತ ಪ್ರಶಸ್ತಿ ಸಹಿತ ಶ್ರೀವತ್ಕಲ್ಯಾಣ ಪರಮಹಾತ್ಮ ಎಂದೆಂದ”
ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯ ಹದಿನಾಲ್ಕು ಭುವನಕ್ಕೆ
ಕಳಸವೆಂದೆನಿಸುವ ರುದ್ರಲೋಕವೇ ಮರ್ತ್ಯಲೋಕಕ್ಕೆ ಇಳಿದು ಕಲ್ಯಾಣವೆಂಬ
ಪರವಾಗಿ ಹುಟ್ಟಿತು ನೋಡಿರಯ್ಯ ಅಲ್ಲಿ ಸತ್ಯರು, ಸಾತ್ವಿಕರು, ನಿತ್ಯರು, ನಿಜಗುಣರು
, ನಿಜಗುಣರು.

ಸಂಗೀತ ಪರಂಪರೆ:
ಪ್ರಾಚೀನ ಕಾಲದಿಂದಲೂ ಸಂಗೀತಕ್ಕೆ ಇಲ್ಲಿ ಪ್ರೋತ್ಸಾಹ ದೊರೆತಿದೆ. ಆರನೆಯ ವಿಕ್ರಮಾದಿತ್ಯನ ರಾಣಿಯಾದ ಚಂದ್ರಲಾದೇವಿ ಮತ್ತು ಕತಲಾದೇವಿಯವರು ಅನೇಕ
ಕಲೆಗಳಲ್ಲಿ ನಿಷ್ಣಾತವಾಗಿ ಮುಂದೆ ಸಂಗೀತಕ್ಕೆ ಇವರನ್ನು ಪ್ರೇರೇಪಿಸಿದರು.

ಕರ್ನಾಟಕ ಸಂಗೀತ ಕ್ಷೇತ್ರದ ಬೆಳವಣಿಗೆಯಲ್ಲಿ ಬೀದರ ಜಿಲ್ಲೆಗೆ ತನ್ನದೇ ಆದ ವೈಶಿಷ್ಟ್ಯವಿದೆ. ಇಲ್ಲಿನ ಸಂಗೀತ ಕಲಾವಿದರಲ್ಲಿ ಅನೇಕರು ಪ್ರತಿಭಾಸಂಪನ್ನರಾಗಿದ್ದಾರೆ. ಸಂಗೀತ ವಾದ್ಯಗಳಾದ ತಬಲಾ, ಹಾರ್ಮೋನಿಯಮ್, ಇವುಗಳನ್ನು ನುಡಿಸುವಲ್ಲಿ
ಪರಿಣಿತವಾಗಿದೆ. ಸಂಗೀತವನ್ನೇ ಉಸಿರಾಗಿಸಿಕೊಂಡಿರುವ ಅನೇಕರು ಇಲ್ಲಿದ್ದಾರೆ. ಅವರಲ್ಲಿ ಪ್ರಮುಖರೆಂದರೆ-ವಿರೂಪಾಕ್ಷಯ್ಯ ಸ್ವಾಮಿ ಘೋರಟಾ, ಪ್ರೊ, ಸಿದ್ರಾಮಯ್ಯ ಸ್ವಾಮಿ ಗೊರಟಾ, ಕಾಶಪ್ಪ ಖಂಡ್ರೆ ಗವಾಯಿ, ಕೇಶವರಾವ ವಾಘಮಾರೆ, ಶೇಕ ಪಾಟೀಲ್ ಹುನ್ನುಮಿಯ್ಯಾ, ಕೇಶವರಾವ ಸೂರ್ಯವಂಶಿ, ಶಂಭುಲಿಂಗ ವಾಲೊಡ್ಡಿ, ಜನಾರ್ಧನ
ವಾಘಮಾರೆ, ವೀರಭದ್ರಪ್ಪ ರಾಜೇಂದ್ರಪ್ಪ ಗಟ್ಟಗಿ, ರಾಜೇಂದ್ರಪ್ಪ ಗಟ್ಟಗಿ. ಸುವರ್ಣ ರಾಠೋಡ, ರಮೇಶ ಕೋಳಾರ, ಶಿವಕುಮಾರ ಪಾಂಚಾಳ, ಕವಿತಾ ಮಠಪತಿ, ಗೀತಾ ಪಾಟೀಲ್, ಹೀಗೆ ನೂರಾರು ಸಂಗೀತ ಕಲಾವಿದರು, ಸಂಗೀತ ಕ್ಷೇತ್ರಕ್ಕೆ ತಮ್ಮದೆ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. ಅದರ ಬೆಳವಣಿಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ.

ಸಾಹಿತ್ಯ ಪರಂಪರೆ:
ಬೀದರ ಜಿಲ್ಲೆಯ ಸಾಹಿತ್ಯ ಪರಂಪರೆಗೆ ಸುದೀರ್ಘವಾದ IOplವಿದೆ.

ಅನಾದಿ ಕಾಲದಿಂದಲೂ ಅನೇಕ ಜನ ತತ್ವಪದಕಾರರು, ಶರಣರು, ​​ಸಂತರು ಆಗಿಹೋಗಿದ್ದಾರೆ. ಚಾಲುಕ್ಯ ರಾಜರ ಆಶ್ರಯದಲ್ಲಿ ರಾಷ್ಟ್ರೀಯ ಖ್ಯಾತಿಯನ್ನು ಪಡೆದ
ಬಿಲ್ದಣನು “ಬಿಲ್ದಣ ಕಾವ್ಯ” ಮತ್ತು “ವಿಕ್ರಮಾಂಕದೇವ ಚರಿತೆ” ಎಂಬ ಗ್ರಂಥಗಳನ್ನು ರಚಿಸಿದನು. ಆರನೇ ವಿಕ್ರಮಾದಿತ್ಯನ ಮಗನಾದ ಮೂರನೇ ಸೋಮೇಶ್ವರನು “ಮಾನಸೋಲ್ಲಾಸ’ ಎಂಬ ಛಂದೋಗ್ರಂಥವನ್ನು ಬರೆದನು.

೧೨ನೇ ಶತಮಾನದಲ್ಲಿ ಅಸಂಖ್ಯಾತ ಶಿವಶರಣರು ವಚನ ಸಾಹಿತ್ಯಕ್ಕೆ ಕಾಣಿಕೆ. ಅವರಲ್ಲಿ ಪ್ರಮುಖರೆಂದರೆ ಅಲ್ಲಮಪ್ರಭುಗಳು, ಬಸವಣ್ಣ, ಚೆನ್ನಬಸವಣ್ಣ,
ಅಕ್ಕಮಹಾದೇವಿ ಮುಂತಾದವರು, ನಂತರದ ದಿನಗಳಲ್ಲಿ ಮಾಣಿಕನಗರದ ಮಾಣಿಕ ಪ್ರಭುಗಳು, ಕರಕನಳ್ಳಿಯ ಬಕ್ಕಪ್ರಭುಗಳು, ನಾವದಗಿಯ ರೇವಪಯ್ಯ ಶರಣರು
, ​​ರೇಕುಳಗಿ ಶಂಭುಲಿಂಗೇಶ್ವರರು, ನಿಡವಂಚಿಯ ಭದ್ರೇಶ್ವರರು, ಸಂತರಾದ ಕರಬಸಪ್ಪನವರ
ಜಾಗೃತಿ, ಬಾವರು. ಅನ್ಯ ಪ್ರಭಾವ ಹೆಚ್ಚಾಗಿದ್ದ ಕಾಲದಲ್ಲಿ ಕನ್ನಡ ಭಾಷೆಗೆ ಕಾಯಕಲ್ಪ ನೀಡಿ ಶರಣ ಸಂಸ್ಕೃತಿ ಮತ್ತು ವಚನ ಸಾಹಿತ್ಯವನ್ನು ಜನಮನಕ್ಕೆ ಮುಟ್ಟಿಸಿದವರೆಂದರೆ
ಭಾಲ್ಕಿಯ ಡಾ. ಚನ್ನಬಸವ ಪಟ್ಟದ್ದೇವರು. ಇವರು ಹೊರಗೆ ಹೋಗಿದ್ದು ನಾಮಫಲಕ ಹಾಕಿ ಒಳಗಡೆ ಕನ್ನಡ ಕಲಿಸಿದ ಧೀಮಂತ ವ್ಯಕ್ತಿ ಪಟ್ಟದ್ದೇವ. ಇವರು ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ್ದಾರೆ.

 

2018 ಇಡೀ ಭಾರತೀಯ ದೇಶಿ ಸಂಸ್ಕೃತಿಯ ಚಿಂತನೆಯಲ್ಲಿ ಅನನ್ಯವಾದ ಸಾಂಸ್ಕೃತಿಕ ವ್ಯಕ್ತಿತ್ವ ಹೊಂದಿರುವ ಡಾ. ಜಯದೇವಿ ತಾಯಿ ಲಿಗಾಡೆ ಕನ್ನಡ ನಾಡು ಕಂಡ ಅಪರೂಪದ ಶಕ್ತಿ. ಕನ್ನಡದ ತಾಯಿಯಿಂದ ಹೆಸರಾದ ಇವರು ಸಾಹಿತ್ಯ, ಸಮಾಜ ಸೇವೆ, ಆಧ್ಯಾತ್ಮಿಕ ಅನುಭವಗಳ ತ್ರಿವೇಣಿ ಸಂಗಮವಾಗಿದ್ದಾರೆ.
ಕನ್ನಡ ನಾಡು ನುಡಿ, ನೆಲ ಜಲಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟಿದ ಪ್ರಭುರಾವ ಕಂಬಳಿವಾಲೆಯವರು ಸರಳಸಜ್ಜನಿಕೆಯ ಸಾಕಾರಮೂರ್ತಿ ಯಾಗಿದ್ದರು.
೧೯೬೦ರಲ್ಲಿ ಬೀದರಿನಲ್ಲಿ ಮೊದಲ ಬಾರಿಗೆ ೪೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ
ಸಮ್ಮೇಳನವನ್ನು ಸಂಘಟಿಸಿದ ಕಂಬಳಿವಾಲೆಯವರದು, ಇವರಂತೆ ಕನ್ನಡ ನಾಡು-ನುಡಿಗಾಗಿ ಬೀದರ ನೆಲದಲ್ಲಿ ಅನೇಕರು ಹೋರಾಡಿದ್ದಾರೆ. ಭೀಮಣ್ಣ ಖಂಡ್ರೆ, ಆರ್.ಎ. ಬೀಡಪ್ಪ, ರಾಮಚಂದ್ರ ವೀರಪ್ಪ ರಂತಹ ಅನೇಕರು ಕರ್ನಾಟಕ ಏಕೀಕರಣಕ್ಕಾಗಿ ದುಡಿದಿದ್ದಾರೆ.
ಕನ್ನಡ ಭಾಷೆಯ ಉಳಿವಿಗಾಗಿ ದುಡಿದ ರಾಚಯ್ಯಸ್ವಾಮಿ ಬೆಳೆಕೇರಿಯವರು
ಬೆಳೆಕೇರಿ ಹಳ್ಳಿಖೇಡಗಳಲ್ಲಿ ಕನ್ನಡ ಶಾಲೆ ಆರಂಭಿಸಿ ಕನ್ನಡತನವನ್ನು ಉಳಿಸಿ ಬೆಳೆಸಿದ್ದಾರೆ. ಬಿ.ಟಿ. ಸಾಸನೂರ, ಪ್ರೊ, ವಸಂತ ಕುಷ್ಟಗಿ, ಹಣಮಂತಪ್ಪ ಪಾಟೀಲ್‌, ಶಿವಶರಣಪ್ಪ ವಾಲಿ, ಪಂಚಾಕ್ಷರಿ ಮಾನ್ಯಶೆಟ್ಟಿ, ಡಾ. ಜಗನ್ನಾಥ ಹೆಬ್ಬಾಳೆ, ಪ್ರೊ.ಸಿದ್ರಾಮಪ್ಪ
ಮಾಸಿಮಾಡೆ, ಸುರೇಶ ಚನಶೆಟ್ಟಿ ಮುಂತಾದವರು ಆಧುನಿಕ ಸಂದರ್ಭದಲ್ಲಿ ಕನ್ನಡಕ್ಕಾಗಿ
ಶ್ರಮಿಸುತ್ತಿದ್ದಾರೆ.
ಇಲ್ಲಿ ಆಧುನಿಕ ಕನ್ನಡ ಸಾಹಿತ್ಯ ವಿಮಲವಾಗಿ ಬೆಳೆದು ಬಂದಿಲ್ಲದಿರುವುದು
ಕಾಣುತ್ತೇವೆ. ಆದರೂ ಕಾವ್ಯ ಕ್ಷೇತ್ರದಲ್ಲಿ ಸಾಕಷ್ಟು ಜನ ಕೃಷಿ ಮಾಡುತ್ತಿದ್ದಾರೆ.
ಡಾ. ಮಾಣಿಕರಾವ ಧನಶ್ರೀ, ವೀರೇಂದ್ರ ಸಿಂಪಿ, ಡಾ. ಪ್ರೇಮಾ
ಸಿರ್ಸೆ, ಬಸವರಾಜ ಸೈನೀರ, ಕೆ.ನೀಲಾ, ಡಾ. ಕಾಶಿನಾಥ ಅಂಬಲಗಿ,
ಪ್ರೊ.ಆರ್.ಕೆ.ಹುಡಗಿ, ಹೆಚ್.ಕಾಶಿನಾಥರೆಡ್ಡಿ, ಎಂ.ಜಿ.ಗಂಗನಪಳ್ಳಿ, ಎಂ.ಜಿ.ದೇಶಪಾಂಡೆ,
ದೇಶಾಂಶ ಹುಡಗಿ, ಶಿವಕುಮಾರ ನಾಗವಾರ, ಗುರುನಾಥ ಅಕ್ಕಣ್ಣ,
ಎಸ್.ಎಂ.ಜನವಾಡಕರ್, ಚಂದ್ರಪ್ಪ ಹೆಬ್ಬಾಳಕರ, ಹೀಗೆ ಅನೇಕರು ಸಾಹಿತ್ಯದಲ್ಲಿ ಹೆಸರು ಮಾಡಿದ್ದಾರೆ. . . . . . ಅನೇಕ ಜನ ಬರಹಗಾರರು ಬೀದರ ನೆಲದಲ್ಲಿ ಸಾಹಿತ್ಯ
ಕೃಷಿಯಲ್ಲಿ ತೊಡಗಿಸಿಕೊಂಡು ಭಾಷೆ, ಸಾಹಿತ್ಯ, ಬೆಳೆಸುವ ಕಾಯಕದಲ್ಲಿ ತಲ್ಲೀನರಾಗಿದ್ದರು. ಳೆ

ಬಿದ್ರಿ ಕಲೆ: ಬೀದರ ಹೆಸರು ದೇಶ ವಿದೇಶಗಳಲ್ಲಿ ಚಿರಪರಿಚಿತವಾಗಲು ಪ್ರಮುಖ ಕಾರಣವಾದ ಮತ್ತೊಂದು
ಕಲೆಯೇ ಬಿದ್ರಿಕಲೆ. ಇಂತಹ ಕಲೆಯು ಬೇರೆಡೆ ಕಾಣಲಾರೆವು. ಹಾಗೆ ಚಿತ್ರಕಲೆಯಲ್ಲಿಯೂ
ಅನೇಕರು ಹೆಸರು ಮಾಡಿದ್ದಾರೆ. ಅಂಥವರಲ್ಲಿ ಚ.ಭಿ.ಸೋಮಶೆಟ್ಟಿ, ಬಸವರಾಜ ಮುಗಳಿ
ಪ್ರಮುಖರು.
ನೃತ್ಯ ಕಲೆಯು ಇಲ್ಲಿ ಚಿಕಿತ್ಸೆಗಾಗಿ ಬರುತ್ತಿದೆ. ರಾಣಿ ಸತ್ಯಮೂರ್ತಿ, ಉಷಾ ಪ್ರಭಾಕರ, ಭಾಗ್ಯಲಕ್ಷ್ಮೀ, ಸಂಜಯ, ದೇವರಾಜ ಮುಂತಾದವರು ನೃತ್ಯ ಶಾಲೆಯನ್ನು
ತೆರೆದು ಈ ಕಲೆಯನ್ನು ಬೆಳೆಸುತ್ತಿದ್ದಾರೆ.
ಹೀಗೆ ಕನ್ನಡ ನಾಡಿನ ಕಿರೀಟದಂತಿರುವ ಬೀದರ ಐತಿಹಾಸಿಕ, ಸಾಂಸ್ಕೃತಿಕ,
ಸಾಹಿತ್ಯಿಕ, ಪರಂಪರೆಯಲ್ಲಿ ತನ್ನದೇ ಆದ ಸುದೀರ್ಘವಾದ ಇತಿಹಾಸವನ್ನು ಹೊಂದಿದೆ.
ಸರ್ವಧರ್ಮ ಸಮನ್ವಯ ಸಂಸ್ಕೃತಿಯ ನೆಲಬೀಡಾಗಿದೆ. ಇಂದು ಹಿಂದುಳಿದ ಪ್ರದೇಶವೆಂದು ಹೇಳಲಿಕ್ಕಾಗದು. ಇಲ್ಲಿಯ ರಸ್ತೆಗಳು ಸೇರಿದಂತೆ ಅನೇಕ ರೀತಿಯಲ್ಲಿ
ಅಭಿವೃದ್ಧಿ ಕಂಡಿವೆ. ಕಾಣುತ್ತಿದೆ. ಸಮೃದ್ಧಿಯನ್ನು ಮೈಗೂಡಿಸಿಕೊಳ್ಳುವಲ್ಲಿ ದಾಪುಗಾಲು
ಹಾಕಿದೆ ಎಂದು ಹೇಳಬಹುದು.

ಡಾ.ಸಂಜೀವಕುಮಾರ ಅತಿವಾಳೆ.ಬೀದರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ