ಬಾಳೊಂದು ಬಣ್ಣದ ಬುಗುರಿ.
ಬಾಳೊಂದು ಬಣ್ಣದ ಸುತ್ತುವ ಬುಗರಿ .
ಅಲಲ್ಲಿ ಸವಾಲುಗಳ ಸರಮಾಲೆ ನಗರಿ .
ಜೀವನ ಅನುಭವದ ಸಾಮ್ರಾಜ್ಯದ ಗಿರಿ .
ತಪ್ಪು ತೀರ್ಮಾನದ ಬದುಕೆ ಗುಲಾಮಗಿರಿ
ಸಾಧನೆ ಸಾಧಕನಿಗೆ ಕಾಲಚಕ್ರ ಸವಾಲುಗಿರಿ
ಗುರು, ಗುರಿಗಳ ಹೋರಾಟ ಕರಾರುಗಿರಿ .
ಪಾಲನೆ ಬದುಕು ಹೆಮ್ಮೆಯ ಹೆದ್ದಾರಿ.
ತಪ್ಪು ಹೆಜ್ಜೆಗಳು ನೂಕುವ ಸೋಲಿನ ಸವಾರಿ
ಅರಳು ಗುಲಾಬಿಗೆ ಮುಳು ಕಾವಲುಗಿರಿ
ಗೆಲ್ಲವು ಮನಸ್ಸಿಗೆ ಅಪಜಯದ ಭಯಮರಿ
ಪುರಾಣ ಹೇಳುವವನೇ ತಪ್ಪದಾರಿ
ಮಾತಿಗೂ ನಡವಳಿಕೆಗೂ ತಾಳೆತಪ್ಪಿದ ಪರಿ
ಸವಾಲು ಎದುರಿಸುವ ಎದೆಗಾರಿಕೆ ಹೆಮ್ಮೆಯ ಗರಿ
ಸವಾಲು ನಕಾರಾತ್ಮಕ ಹೌದ ಸಕಾರಾತ್ಮಕ ವಿಚಾರ ದಾರಿ
ಸಮಾಚಾರ ಹರಡುವ ಸಾಧಕರು ತಪ್ಪು ದಾರಿಯ ಪರಿ
ಸಾತ್ವಿಕ ಸಿಟ್ಟು ಸುಡುವದು ಕಟ್ಟು ನಿಟ್ಟು ಕರಾರುಗಿರಿ
ಸವಾಲುಗಳೇ ಬಾಳಿನ ಬವಣೆ ದಾರಿ
ಅವಗಳು ಎದುರಿಸಿದ ಮನುಜ ಧರ್ಮ ಪರಿ
ಅವಲೋಕನ ಅಂತರ ಅವಲೋಕನ ನಿಲ್ಲದ ದರಿ
ಸವಾಲುಗಳ ಬದುಕು ಕುಂಬಾರನ ಮಡಿಕೆ ಗುರಿ.
– ಕೀರ್ತಿಲತಾ ಹೊಸ್ಸಾಳೆ.ಬೀದರ