ನಮ್ಮಯ ನಾಡು ಕನ್ನಡ ಬೀಡು
ಕನ್ನಡ ನಾಡು
ಅಂದದ ಬೀಡು
ಚಂದದ ನಾಡು ಜಲ ಕಾವೇರಿ ತುಂಗೆಯ ಬೀಡು
ಜಲಧಾರೆಯ ಜೋಗದ ನಾಡು
ಮಲೆನಾಡು ಬೆಟ್ಟದಲ್ಲಿ ಚಾಮುಂಡಿ ಗೂಡು
ಕನ್ನಡ ನಾಡನು ವೈಭವದಿ ಮರೆಸಿದ
ಶ್ರೀ ಕೃಷ್ಣದೇವರಾಯ ನಮ್ಮವನು
ಏಳು ಕೋಟಿಯನ್ನು ಶತ್ರುವಿನಿಂದ ರಕ್ಷಿಸಿದ
ಚಿತ್ರದುರ್ಗದ ಒನಕೆ ಓಬವ್ವ ನಮ್ಮವಳು
ಕನ್ನಡ ನಾಡನು ಒಂದು ಗೂಡಿಸಿದ
ಆಲೂರು ವೆಂಕಟರಾಯ ನಮ್ಮವರು
ಕನ್ನಡವೇ ಅಂದ ಕನ್ನಡವೇ ಚಂದ
ಕನ್ನಡವೇ ನಮ್ಮ ಉಸಿರೆಂದ
ಕವಿ ಕುವೆಂಪು ಬೇಂದ್ರೆ ನಮ್ಮವರು
ಕನ್ನಡ ನಾಡಿನ ಪರಂಪರೆಯನ್ನು
ಕೈಯಿಂದ ಸಾರುವ
ಭರತ ನಾಟ್ಯವು ಎಂಥ ಸುಂದರವು
ಸುಂದರ ಶಿಲ್ಪಕಲೆಯಲ್ಲಿ
ಸುಂದರ ಬಾಲೆಯರನ್ನು
ಕೆತ್ತಿದ ಬೀಲೂರು ಹಳೇಬೀಡು ನಮ್ಮದು
ಸುಂದರ ಮನ ಮೋಹಕ ನೋಟದಲ್ಲಿ
ಜಗತ್ತ ವಿಖ್ಯಾತ ಭೂಪಟದಲ್ಲಿ
ನೀರಿಗೆ ಕುಣಿಸುವ ಬೃಂದಾವನ ತೋಟ ನಮ್ಮದು
ಜಾತಿ ಭೇದವು ಇಲ್ಲದ ಬೀಡಿದು
ಭೀತಿ ಭಯವೂ ಇಲ್ಲದ ನಾಡಿದು
ಹಿಂದೂ ಮುಸ್ಲಿಂ ಜೈನ ಕ್ರೈಸ್ತ ಒಂದಾಗಿ ಬಾಳುವ ಗೂಡಿದು
ಎಲ್ಲರೂ ಸಮಾನರೆಂದು ಸಾಗುವ ರಥವಿದು
ಇದುವೇ ನಮ್ಮಯ ಕನ್ನಡ ನಾಡು
ಅಂದದ ಚಂದದ ಗಂಧದ ಕನ್ನಡ ಬೀಡು
– ರವೀಂದ್ರ ಬಿ ಕೆ
ಕಮಲಾಪುರ ಜಿ. ಕಲಬುರಗಿ -೫೮೫೩೧೩
ಮೋ -೯೪೮೨೬೩೪೫೭೫