೩೦೨ಎಳ್ಳುಂಡೆ (ಹನಿಗವನಗಳ ಪುಸ್ತಕ ವಿಮರ್ಶೆ)
ಶ್ರೀ ವೆಂಕಟ ಕೃಷ್ಣ ಭಟ್ ಎಡನೀರು, ಕಾಸರಗೋಡು ಅವರು ಬರೆದ ಈ ಕೃತಿ ಓದಿದೆ.ಆದ್ದರಿಂದ ಇದರ ಬಗ್ಗೆ ಕೆಲ ಮಾತುಗಳನ್ನು ಬರೆಯಬೇಕೆಂದು ಇಲ್ಲಿ ಚರ್ಚಿಸಲಾಗಿದೆ.
ಪರಮಾನಂದ ಭೋಧ ಅರುವಿನಲಿ ಅಡಗಿದ
ದೊರಕಿದಾ ಗುರು ದೊರಕಿದಾ//
ಬತ್ತದ ತೊರೆ ಕವಿ ಬಳಗದ ಸದಸ್ಯ ನಾಗಿ ನಾನು ಕೆಲ ಬರಹಗಳನ್ನು ಬರೆಯುವ ವೇಳೆ ನನಗೆ ಒಲಿದು ಬಂದ ಭಾಗ್ಯವೆಂದರೆ ವೆಂಕಟ ಭಟ್ಟ ರ ಸ್ನೇಹ
ಹಾಗೆಯೇ ಅವರಿಂದ ನಾನು ಕಲಿತಿದ್ದು ಬೆಟ್ಟದಷ್ಟು
ಎಲ್ಲಿಯ ಕಾಸರಗೋಡು ಎಲ್ಲಿಯ ಹಿರೇವಡ್ಡಟ್ಟಿ ಎತ್ತಣಿಂದೆತ್ತ ಸಂಭಂಧವಯ್ಯ
ಬಹಳಷ್ಟು ಶಾಲಾಭ್ಯಾಸ ಇರದ ನಾನು ಭಟ್ಟರಿಂದ ಅನೇಕ ವಿಷಯಗಳನ್ನು ತಿಳಿದುಕೊಂಡೆ
ಅವರ ಬರಹಗಳೇ ಹಾಗೆ ಓದುಗನ ಮನಸ್ಸನ್ನು ರಂಜಿಸಿ ತಕತಕ ಕುಣಿಸಿ ಬಿಡುತ್ತವೆ ಅವರ ವ್ಯಂಗ್ಯ ಚಿತ್ರಗಳಂತೂ ಅವಿಸ್ಮರಣೀಯ ಪರಮಾನಂದದ ಉತ್ತುಂಗಕ್ಕೇರಿಸುತ್ತವೆ ನವರಸಗಳೆಲ್ಲಾ ಅವರ ಬರಹ ಮತ್ತು ಚಿತ್ರಗಳಲ್ಲಿ ನೃತ್ಯ ಮಾಡುತ್ತವೆ
ಚಿತ್ರಗಳಲ್ಲೂ ಬರಹಗಳಲ್ಲೂ ಭಾವನೆಗಳನ್ನು ವ್ಯಕ್ತಪಡಿಸುವ ಆ ಕಲೆ ಬಹಳ ಸಂವೇದನಾಶೀಲ ಹಾಗು ಸೈಜನಶೀಲ ವ್ಯಕ್ತಿಗಳಿಗೆ ದೊರಕುತ್ತದೆ
ನನ್ನ ಮತ್ತು ಅವರ ಸಂಹವನ ಪ್ರತಿ ದಿನವೂ ನಡೆಯುತ್ತಲೇ ಇರುತ್ತದೆ ನನ್ನ ಬರಹ ತಪ್ಪಾದಾಗ ಅವರು ಗದರಿದ್ದುಂಟು ಹಾಗೆಯೇ ಪ್ರೀತಿಯಿಂದ ತಿದ್ದಿ ತೀಡಿ ಬರೆಸಿದ್ದುಂಟು
ಪ್ರಸ್ತುತ ಅವರ *ಎಳ್ಳುಂಡೆ**ಎಂಬ ಹನಿಗವನಗಳ ಸಂಕಲನ ಬಹುಮಾನ ರೂಪದಲ್ಲಿ ನನಗೆ ಸಿಕ್ಕಾಗ ಬಹಳಷ್ಟು ಖುಷಿಯಾಯ್ತು ಓದುತ್ತಾ ಹೋದಂತೆ ಭಟ್ಟರ ನಳಪಾಕದ ರುಚಿಯ ಘಮಲು ಹೃದಯದಾಳಕ್ಕೆ ಇಳಿದು ಬಿಡುತ್ತದೆ
ಅತ್ಯಂತ ಕಡಿಮೆ ಶಬ್ದಗಳನ್ನು ಬಳಸಿ ಹದವಾಗಿ ನಯವಾಗಿ ಕವನ ಕಸೂತಿಯನ್ನು ಹೆಣೆಯುವ ಕಲೆಗಾರರವರು
ಎಷ್ಟು ಓದಿದರೂ ಮತ್ತೇ ಮತ್ತೇ ಓದಬೇಕಿನಿಸುವ ಹನಿನುಡಿಗಳು ಅವರ ಬತ್ತಳಿಕೆಯಲ್ಲಿ ತುಂಬಿವೆ
ಸಂಧರ್ಭೋಚಿತವಾಗಿ ಆಯಾ ಕಾಲ ಸಂಧರ್ಭ ಗಳಿಗನುಸಾರವಾಗಿ ತಟ್ಟನೆ ವ್ಯಂಗ್ಯ ಚಿತ್ರ ಮತ್ತು ಬರಹಗಳು ಆ ಕ್ಷಣ ಅವರಿಂದ ದಾಖಲಾಗುತ್ತವೆ
ಉದಾಹರಣೆ:–
**ಸ್ವಕರ್ಮ**
ಕದಿಯಲು ದೇವರ ಗುಡಿಯೊಳಗೆ
ಹೊಕ್ಕ ಕಳ್ಳನಿಗೆ
ಕೃಷ್ಣ ಹೇಳಿದ
ಬೆಣ್ಣೆ ಇತ್ತು ನಾನು ತಿಂದೆ
ಬೇರೆನಿಲ್ಲ//
ಇಲ್ಲಿ ಭಟ್ಟರಿಗೆ ದೇವರೂ ಅಮಾಯಕನಾಗುತ್ತಾನೆ ಮತ್ತು ಅಸಹಾಯಕನಾಗುತ್ತಾನೆ
ವಿಕೃತ
ದೇವಾಲಯದಲ್ಲಿ ಪೂಜೆ
ಮಸೀದೆಯಲ್ಲಿ ನಿಸ್ಕಾರ
ಚರ್ಚಿನಲ್ಲಿ ಪ್ರಾರ್ಥನೆ
ನಡೆವಾಗ
ದೇಶದ್ರೋಹಿಗಳು
ರಸ್ತೆಗಳಲ್ಲಿ
ಸ್ವರ್ಗ ಕಾಣುತ್ತಾರೆ//
ವಿಕೃತ ಮನಸ್ಸುಗಳು ಹೇಗೆ ಕೇಕೆ ಹಾಕುತ್ತವೆ ಎಂಬುದನ್ನು ಚುಟುಕಿನ ಮೂಲಕ ಕುಟುಕಿದ್ದಾರೆ
ಇಲ್ಲ
ಈಗ ಯಾರಿಗೂ
ಬಿರುದು -ಬಾವಲಿಗಳು
ಸಿಗುತ್ತಿಲ್ಲ
ಆದರೆ ಬಿದಿರು ಇದೆ
ಬಾವಲಿಗಳಿಲ್ಲ//
ಇಲ್ಲಿಯ ಪದಗಳ ಕುಣಿತವಂತೂ ಅಮೋಘವಾಗಿದೆ
ಸಂ___ದರ್ಶನ
ಟಿ,ವಿ,ಯ ಸಂದರ್ಶನದಿ
ನಟಿ ಹೇಳಿದಳು
ಎಲ್ಲಾ ಬಿಚ್ಚಿ
ಮಾತನಾಡುತ್ತೇನೆ
ಒಳ ನಡೆಯಿರಿ//
ತುಂಡು ಉಡುಗೆ ತೊಟ್ಟು ನುಲಿವ ನಳಿನಾಕ್ಷಿಗೆ ಇದಕ್ಕಿಂತ ಗೌರವ ಬೇಕೆ?
ಇರಲಿ
ವಿಶ್ವ ಹೆಣ್ಣು
ಮಗುವಿನ ದಿನವಾದರೂ
ಹೆಣ್ಣಿರಲಿ ಗಂಡಿರಲಿ
ಮಗು ನನ್ನದೇ
ಇರಲಿ ಡಾಕ್ಟ್ರೇ//
ಆಸ್ಪತ್ರೆ ಯಲ್ಲಿ ಹುಟ್ಟಿದ ಮಕ್ಕಳು ಕೆಲವೊಮ್ಮೆ ಡಾಕ್ಟರ್ಗಳ ಹಪಾಹಪಿಗೆ ಅದಲು ಬದಲಾಗುವ ಪ್ರಕರಣಗಳಿಗೆ ಭಟ್ಟರು ಬಗ್ನೆ ಗೂಟ ಇಟ್ಟಂತಿದೆ ಈ ಹನಿ
ಬೆಂಕಿ
ದೀಪಾವಳಿಗೆ
ಅಯೋದ್ಯಯಲ್ಲಿ
ಬೆಳಗಲಿದೆ
ಐದು ಸಾವಿರ ದೀಪ ಎಂದು
ಈಗಲೇ ಬೆಂಕಿ
ಹಚ್ಚಬೇಕೆ//
ಸಹನಾತೀತ ಕಿಡಿಗೇಡಿಗಳಿಗೆ ಕಿವಿ ಹಿಂಡುವ ಪದಗಳಿವು
ಮಗು
ಮಗುವೊಂದು ಬಸ್ಸಲಿ
ಭೇಧಿ ಮಾಡಿದಾಗ
ನಿರ್ವಾಹಕ ಅಮ್ಮನಿಗೆ
ಹೇಳಿದ,,
ಅದನ್ನೆಲ್ಲಾ ತಲೆಗೆ
ಹಚ್ಚಿಕೊಳ್ಳಬೇಡಿ
ಮಾಮೂಲು,,
ಹೀಗೇನೇ ಭಟ್ಟರು ಕಚಗುಳಿ ಇಡುತ್ತಾ ಸಾಗುತ್ತಾರೆ ಮತ್ತು ತಮ್ಮ ತನವನ್ನು ತೋರಿಸುತ್ತಾರೆ
ಭಟ್ಟರು ಕೇವಲ ವ್ಯಂಗ್ಯ ಚಿತ್ರ ಕಲಾವಿದರಲ್ಲ ಅವರೊಬ್ಬ ಕವಿ ಮತ್ತು ಯಕ್ಷಗಾನ ಕಲಾವಿದರು
–ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ