ಇವ ನಮ್ಮವನಾಗಲಿಲ್ಲ.
ಇವ ನಮ್ಮವ ಇವ ನಮ್ಮವ
ಇವ ನಮ್ಮವನೆನ್ನುವ ನೀವೂಗಳು
ನಮ್ಮವರಾಗಲೇ ಇಲ್ಲ !
ನಿಮ್ಮನು ನಾವೂ ನಮ್ಮವರೆಂದರೆ
ನಿಮಗೆ ಬಲು ತೊಂದರೆಯಾಗುವುದಲ್ಲ ? ||ಪ||
ಬೊಪ್ಪನು,ಕಕ್ಕನು,ಚಿಕ್ಕಪ್ಪನು
ಏನೆಲ್ಲ ನಿಮಗೆ ನಾವಾದ
ಮ್ಯಾಲೆ
ನೀವ್ಯಾರಿಗೇನಾಗಲೇ ಇಲ್ಲ !
ನಿಮಗೆ ಸಿಕ್ಕ ಈ ಸ್ವಾತಂತ್ಯ
ನಮಗ್ಯಾಕಿನ್ನೂ ಬರಲಿಲ್ಲ ?
ಜಾತಿಗೊಬ್ಬ ಶರಣನ ಮಾಡಿ
ನೀತಿ ಹೇಳುವ ನೀವೂಗಳು !
ಕೋತಿ ಗುಣವ ಬಿಡಲಿಲ್ಲ !
ಅಂದು ಆನೆ ಕಾಲಿಗೆ ಕಟ್ಟಿ
ಕೊಂದದ್ದು,
ಇಂದು ನೀವೀಗ ಉತ್ಸವ
ಮಾಡುತ್ತಿರಲ್ಲ ?
ನಿಮ್ಮಲ್ಲಿ ಇನ್ನೂ ಮಾನವೀಯತೆ
ಗುಣವು ಬೆಳೆದೇ ಇಲ್ಲ !
ದಲಿತರಿಗೆ ನಡು ರಸ್ತೆಯಲ್ಲಿ
ಆನೆ ಕಾಲಿಗೆ ಕಟ್ಟಿ.
ಬೆಂಕಿ ಹಚ್ಚಿ ಸುಟ್ಟ ದಿನ
ಮರೆಯಲು ನೀವೂ
ಬಸವನಾಮ ಜಪಿಸಿ
ಹಸಿ-ಹುಸಿಯ ನುಡಿಯುವಿರಲ್ಲ ?
ನಿಮ್ಮ-ನುಡಿಗೆ
ನಿಮ್ಮ-ನಡೆಗೆ
ಮೆಚ್ಚಿ, ಅಹುದ, ಅಹುದೆಂದು
ಬೆರಗಾಗುವವರು
ನಾವ್ಯಾರು ಅಲ್ಲ !
ನಾವ್ಯಾರು ಅಲ್ಲ !
ತುಂಬಾ ಉತ್ತಮ ವೇದಿಕೆಯಾಗಲಿ. ಕನ್ನಡ ಸಾಹಿತ್ಯಕ್ಕೆ ಹೊಸ ಮೆರಗುತರಲಿ. ಹೊಸ ಚಿಗುರೊಡೆಯಲಿ.