Oplus_131072
ನವ ದೇವಿಯವರನ್ನು ಪೂಜಿಸಿ

ದಸರಾ ಹಬ್ಬದ
ನವರಾತ್ರಿಯ ನವ ದಿನದಲ್ಲಿ ಒಂದೊಂದು ಅವತಾರವೆತ್ತುವ
ನವದುರ್ಗೆಯರಿಗೆ ಇಷ್ಟವಾದ ಪ್ರಸಾದ ಸಮರ್ಪಿಸಿ ಇಷ್ಟಾರ್ಥ ಸಿದ್ದಿ ಫಲ ಪ್ರಾಪ್ತವನ್ನಾಗಿಸಿ

ಕಿತ್ತಲೆ ಬಣ್ಣದೊಳು
ಬ್ರಹ್ಮ, ವಿಷ್ಣು, ಮಹೇಶ್ವರ ಸಾಮೂಹಿಕ ಶಕ್ತಿ ಪ್ರತಿನಿಧಿಸುವ
ಮೊದಲನೇ ದಿನಕ್ಕೆ ಅವತರಿಸಿ ಬರುವ ಶೈಲಪುತ್ರಿ ಪಾದಕ್ಕೆ
ತಾಜಾ ತುಪ್ಪವನ್ನು ಅರ್ಪಿಸಿ
ಕಾಡುವ ಕಾಯಿಲೆಗಳನ್ನೆಲ್ಲ ಮುಕ್ತರಾಗಿಸಿ

ಶ್ವೇತ ಬಣ್ಣದೊಳು
ಆನಂದ ಶಾಂತಿ ಶಕ್ತಿ, ಮೋಕ್ಷ, ಸಮೃದ್ಧಿ ಪಾಲಿಸುವ
ಎರಡನೇ ದಿನಕ್ಕೆ ಅವತರಿಸಿ ಬರುವ ಬ್ರಹ್ಮಚಾರಿಣಿ ದೇವಿಗೆ
ಸಕ್ಕರೆ ಕಲ್ಲುಸಕ್ಕರೆ ಅರ್ಪಿಸಿ
ಮನೆ ಮಂದಿಗೆಲ್ಲ ದೀರ್ಘಾಯುಷ್ಯವನ್ನಾಗಿಸಿ

ಕೆಂಪು ಬಣ್ಣದೊಳು
ಧೈರ್ಯ ಸೌಂದರ್ಯ ರೂಪದೊಳು ಅನುಗ್ರಹ ನೆಮ್ಮದಿ ಕರುಣಿಸುವ
ಮೂರನೇ ದಿನಕ್ಕೆ ಅವತರಿಸಿ ಬರುವ ಚಂದ್ರಕಾಂತೆ ದೇವಿಗೆ
ನೈವೇದ್ಯ ಪಾಯಸವನ್ನರ್ಪಿಸಿ
ತಾಯಿ ದೇವಿಗೆ ಒಲಿಸಿಕೊಂಡು ಖುಷಿಯನ್ನಾಗಿರಿಸಿ

ಗಾಡ ನೀಲಿ ಬಣ್ಣದೊಳು
ನಿಗೂಢ ಶಕ್ತಿ ಗಿಡಮರ ಪ್ರಾಣಿ ಪಕ್ಷಿಯ ಪ್ರತೀಕ. ಭಕ್ತರ ಅಗತ್ಯಗಳನ್ನೆಲ್ಲ ಪೂರೈಸುವ
ನಾಲ್ಕನೇ ದಿನಕ್ಕೆ ಅವತರಿಸಿ ಬರುವ ಕೂಷ್ಮಾಂಡ ದೇವಿಗೆ
ಸಿಹಿಸಿಹಿಯಾದ ಪೂರಿಯನ್ನು ಅರ್ಪಿಸಿ ಬುದ್ಧಿಶಕ್ತಿ ನಿರ್ಧಾರತೆ ಸಾಮರ್ಥ್ಯಸುಧಾರಿಸಿ

ಹಳದಿ ಬಣ್ಣದೊಳು
ದುಷ್ಟರ ಸಂಹಾರ ಶಿಷ್ಟರ ರಕ್ಷಣೆಗೈಯ್ಯುವ
ಐದನೇ ದಿನಕ್ಕೆ ಅವತರಿಸಿ ಬರುವ ಸ್ಕಂದ ದೇವಿಗೆ
ಒಳ್ಳೊಳ್ಳೆ ಬಾಳೆ ಹಣ್ಣುಗಳನ್ನು ಅರ್ಪಿಸಿ
ಮನೆಯಲ್ಲಿ ಶಾಂತಿ ನೆಮ್ಮದಿ ಲಭಿಸಿ ವಾಸಿಸಿ

ಹಸಿರು ಬಣ್ಣದೊಳು
ಧೈರ್ಯಶಾಲಿ ಋಷಿಯ ಮಗಳಾಗಿ ಜನಿಸಿದವಳು
ಆರನೇ ದಿನಕ್ಕೆ ಅವತರಿಸಿ ಬರುವ ಕಾತ್ಯಾಯನಿ ದೇವಿಗೆ
ಜೇನು ತುಪ್ಪ ಪ್ರಸಾದವನ್ನಾಗಿ ಅರ್ಪಿಸಿ
ಮನೆಯಲ್ಲಿದ್ದ ಭಯ ನಿರ್ನಾಮವಾಗಿಸಿ

ಬೂದು ಬಣ್ಣದೊಳು
ಅತ್ಯಂತ ಶಕ್ತಿಶಾಲಿ ಮೂರು ಕಣ್ಣು! ಪ್ರತಿ ಉಸಿರಿನಲ್ಲಿ ಬೆಂಕಿ ಹೊರ ಹೊಮ್ಮಿಸುವ
ಏಳನೇ ದಿನಕ್ಕೆ ಅವತರಿಸಿ ಬರುವ ದೇವಿ ಕಾಳಿಕಾ ರೂಪದವಳು
ಭಕ್ತರ ಬದುಕಲ್ಲಿನ ಸಂಕಷ್ಟಗಳನ್ನು ಋಣಾತ್ಮಕ ಅಂಶಗಳನ್ನು
ತೊಡೆದು ಹಾಕುವ ತಾಯಿಯನ್ನು ಪೂಜಿಸಿ
ತಾಯಿ ಕಾಲ ರಾತ್ರಿಗೆ ಬೆಲ್ಲ ಪ್ರಸಾದವನ್ನಾಗಿ ಅರ್ಪಿಸಿ

ಗುಲಾಬಿ ಬಣ್ಣದೊಳು ಬುದ್ದಿವಂತಿಕೆ ಶಾಂತತೆ. ಇದ್ದರೂ ಕೃಷ್ಣವರ್ಣ
ಪರಶಿವನು ಗಂಗೆಯನ್ನು ಪ್ರೋಕ್ಷಿಸಿದ ಮೇಲೆ ಸೌಂದರ್ಯ ಹೊಳಪು ಪಡೆದವಳು
ಎಂಟನೇ ದಿನಕ್ಕೆ ಅವತರಿಸಿ ಬರುವ ಮಹಾಗೌರಿ ದೇವಿಗೆ
ನಮಸ್ಕರಿಸಿ ತೆಂಗಿನಕಾಯಿ ಅರ್ಪಿಸಿ
ನಿಮ್ಮನಿಮ್ಮ ವಿಚಾರಗಳ ಸಮೃದ್ಧಿಯ ಫಲ ಪ್ರಾಪ್ತವನ್ನಾಗಿಸಿ

ಆಕಾಶದ ನೀಲಿ ಬಣ್ಣದೊಳು
ಸಂತೋಷ ಆಶೀರ್ವಾದ ಸಕಾರಾತ್ಮಕ ಸೂಚಿಸುವ ರೋಗರುಜಿನ ಪರಿಹಾರವಾಗಿಸುವ
ಒಂಬತ್ತನೇ ಕೊನೆಯ ಅವತಾರದಲ್ಲಿ ಬರುವ ಸಿದ್ಧಿ ಧಾತ್ರಿ ದೇವಿಗೆ
ಭಕ್ತಿಯಿಂದ ಪೂಜಿಸಿ, ತಮ್ಮ ಬದುಕೆಲ್ಲ ಹಸನಾಗಿಸಿ
ಮಾನವೀಯತೆಯ ಘಟನಾವಳಿಗಳಿಂದ ರಕ್ಷಣೆಗಾಗಿ ಮಹಾ ತಾಯಿಗೆ ಎಳ್ಳನ್ನು ಅರ್ಪಿಸಿ
ನವರಾತ್ರಿಗೆ ನವ ಅವತಾರವನೆತ್ತುವ ನವ ದೇವಿಯವರನ್ನು ಪೂಜಿಸಿ
ಇಡೀ ತಮ್ಮ ಜೀವನ ಪರ್ಯಂತ ಬದುಕೆಲ್ಲ ನೀವು ನಿಮ್ಮವರನ್ನೆಲ್ಲ ಉಲ್ಲಾಸವನ್ನಾಗಿಸಿ

ವೀರಶೆಟ್ಟಿ ಎಂ. ಪಾಟೀಲˌ ಬಸವಕಲ್ಯಾಣ.

One thought on “ನವ ದೇವಿಯವರನ್ನು ಪೂಜಿಸಿ. (ಕವಿತೆ)”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ