ನಾಡ ಹಬ್ಬ ದಸರಾ
ಸಾಂಸ್ಕೃತಿಕ ನಗರಿಯಾದ ಮೈಸೂರಿನಲ್ಲಿ ನಾಡಹಬ್ಬ ದಸರಾ
ವಿಶ್ವ ವಿಖ್ಯಾತ ಜಂಬೂಸವಾರಿ ವೀಕ್ಷಣೆ ಮಾಡಲು ಜನ ಕಾತರ
ದೇಶದ ಮೂಲೆ ಮೂಲೆಗಳಿಂದ ಬಂದು ಸೇರುವ ಭಕ್ತ ಸಾಗರ
ನವರಾತ್ರಿ ಹಬ್ಬವು ತಂದಿದೆ ಭಕ್ತರಲ್ಲಿ ಬಲು ಸಂಭ್ರಮ ಸಡಗರ
ನವರಾತ್ರಿ ನವದಿನ ನವ ನವೀನ ಕಾರ್ಯಕ್ರಮಗಳು ನಿರಂತರ
ಅಂಬಾವಿಲಾಸದೊಳಗೆ ಮೈಸೂರು ರಾಜರ ಖಾಸಗಿ ದರ್ಬಾರ್
ಅರಮನೆ ಅಂಗಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಡಗರ
ವಿದ್ಯುತ್ ಬೆಳಕಿನಿಂದ ಜಗಮಗಿಸುವ ಚಿತ್ತಾರ ವರ್ಣಾಲಂಕಾರ
ತಾಯಿ ಚಾಮುಂಡೇಶ್ವರಿ ನೆಲೆಸಿರುವ ನಮ್ಮ ಮೈಸೂರು ನಗರ
ಕಲೆ ಸಾಹಿತ್ಯ ಸಂಗೀತ ಸಂಸ್ಕೃತಿ ಸಾರುವ ಮೈಸೂರು ದಸರಾ
ಮನರಂಜನೆಯ ಕಾರ್ಯಕ್ರಮಗಳು ನೋಡಲು ಮನೋಹರ
ಯುವ ದಸರಾ ರೈತದಸರಾ ನೋಡುಗರ ಮನಕ್ಕೆಅತೀ ಸುಂದರ
ರಾಜ ಮುಖ್ಯ ಬೀದಿ ಬೀದಿಗಳಲ್ಲಿ ಸಾಗುವ ಜಂಬೂ ಸವಾರಿ
ಚಿನ್ನದ ಅಂಬಾರಿಯೊಳಗೆ ವಿಜೃಂಬಿಸುವ ಚಾಮುಂಡೇಶ್ವರಿ
ಸ್ತಬ್ದಚಿತ್ರ,ಕಲಾ ತಂಡಗಳ ಒಳಗೊಂಡ ಮೆರೆವಣಿಗೆ ಅದ್ದೂರಿ
ಇದೆ ಅಲ್ಲವೇ ನಮ್ಮ ಮೈಸೂರು ದಸರಾ ಸಂಭ್ರಮದ ವೈಖರಿ
ಬಸವೇಶ. ಎಸ್. ಶಿಕ್ಷಕರು.
ತಿ. ನರಸೀಪುರ, ಮೈಸೂರು ಜಿಲ್ಲೆ