Oplus_131072

ಹೆಣ್ಣನ್ನು ಗೌರವಿಸಿ.

ಎಲ್ಲಿ ನೋಡಿದರಲ್ಲಿ ಹೆಣ್ಣಿನ ಶೋಷಣೆ
ಮಾಡುತಿಹರಲ್ಲ ಅತ್ಯಾಚಾರ ಹತ್ಯೆ
ಕಣ್ಣೀರಲ್ಲಿ ಕೈತೊಳೆಯುವಳು ನಿತ್ಯ
ಅವಳ ಜೀವನ ಮುಳುಗಿಹುದಂತೂ ಸತ್ಯ.

ಒಡ ಹುಟ್ಟಿದವಳು ಹೆಣ್ಣು
ನಮಗೆ ಜೀವ ಕೊಟ್ಟವಳು ‌ಹೆಣ್ಣು
ಗಂಡಿನ ಜೊತೆ ಸಂಪೂರ್ಣ
ಜೀವನ ಹಂಚಿಕೊಳ್ಳುವವಳು ಹೆಣ್ಣು .

ನೋವಿಗೆ ‌ ಸ್ಪಂದಿಸುವ ಮೂಲಕ
ಧೈರ್ಯ ಹೇಳುವವಳು ಹೆಣ್ಣು
ಕಷ್ಟ‌ ಸುಖದಿ ಜೊತೆಗೂಡಿ ಬದುಕಲಿ
ಹೆಜ್ಜೆಹಾಕುವ ಪಾಲುದಾರಳು‌ ಹೆಣ್ಣು .

ಅವಳೊಂದು ಸೃಷ್ಟಿಯ ಅದ್ಭುತ ಕೊಡುಗೆ
ಅವಳಿಲ್ಲದೆ ಈ ಜಗದಲ್ಲಿ ಏನಿದೆ
ಅಂತಹಾ ದೇವತೆಯನ್ನು ಸಂರಕ್ಷಿಸಿ
ಎಲ್ಲರೂ ಆಧರಿಸಿ ಗೌರವಿಸಿ.

✍️ ರೇಣುಕಾ ವಾಯ್.ಎ.
ಹಟ್ಟಿ ಚಿನ್ನದ ಗಣಿ ರಾಯಚೂರು

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ