Oplus_131072

ದಸರಾ ಕಾವ್ಯ ಸಂಭ್ರಮ

ದಸರಾ ಬಂತು ದಸರಾ !
ಎಂದು ಮರೆಯದ ನಾಡ ದಸರಾ !
ಸಡಗರ ಸಂಭ್ರಮ ದಸರಾ! ಎಲ್ಲರೂ ಒಂದಾಗುವ ದಸರಾ //ಪಲ್ಲವಿ//

ಆತ್ಮೀಯರಿಗೆ ಬೆಳ್ಳಿ ಬಂಗಾರ ಕೊಡುವ ದಸರಾ !
ದೂರ ಸಂಬಂಧವನ್ನು ಗಟ್ಟಿ ಮಾಡುವುದೇ ದಸರಾ ! ಒಂಬತ್ತು ದಿನಗಳು ಒಪ್ಪತ್ತು ಮಾಡುವುದೇ ದಸರಾ !
ಮನಸ್ಸಿನ ಹರಿಕೆಯು ಸಿದ್ಧಿಗೊಳಿಸಿದ ದಸರಾ !
//ದಸರಾ ಬಂತು ದಸರಾ//

ರಾಮನು ರಾವಣನನ್ನು ಸಂಹಾರ ಮಾಡಿದ ದಸರಾ ! ಪಾಂಡವರು ವನವಾಸದಿಂದ ಅಂತ್ಯಗೊಂಡ ದಸರಾ ! ಕೆಟ್ಟದರ ವಿರೋಧ ಮಾಡಿ ಗೆದ್ದ ವಿಜಯ ದಸರಾ !

ದುರ್ಗೆಯು ಮಹೇಶ ಸುರನನ್ನು ಸಂಹಾರ ಮಾಡಿದ ದಸರಾ !
//ದಸರಾ ಬಂತು ದಸರಾ//

ಒಮ್ಮೆಯಾದರೂ ನೋಡಲೇಬೇಕು ಮೈಸೂರು ದಸರಾ !
ಆನೆ ಹೊತ್ತುಕೊಂಡು ಹೋಗುವ ಚಿನ್ನದ ಅಂಬರ ! ನೋಡುಗರ ಕಣ್ಣುಗಳಿಗೆ ಸ್ವರ್ಗದಷ್ಟೇ ಸುಂದರ !
ನಮ್ಮ ಹಿಂದೂ ಧರ್ಮದಲ್ಲಿ ದೊಡ್ಡ ಹಬ್ಬವೇ ದಸರಾ.
//ದಸರಾ ಬಂತು ದಸರಾ//

ರವಿ ಎಸ್.ಮೊಘಾ
ಕಿಣ್ಣಿ ಸಡಕ.ಕಲಬುರಗಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ