Oplus_131072

ಪೊಲೀಸ್ ಹುತಾತ್ಮ ದಿನಾಚರಣೆ .

 

  • 1959 ರ ಅಕ್ಟೋಬರ್ 21 ರ ದಿನ ಲಡಾಖ್ ನ ಹಾಟ್ ಸ್ಪ್ರಿಂಗ್ ನಲ್ಲಿ ಬಲವಾದ ಶಸ್ತ್ರಗಳನ್ನು ಅಳವಡಿಸಿದ ಚೀನಿ ಪೊಲೀಸರ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು ಸುಮಾರು 10 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು. ಆ ದಿನವನ್ನು ‘ಪೊಲೀಸ್ ಹುತಾತ್ಮ ದಿನಾಚರಣೆ’ ಎಂದು ಆಚರಿಸಲಾರಭಿಸಿದರು.

ಅದೊಂದು ದೊಡ್ಡ ರಾಜಕೀಯ ಕಾರ್ಯಕ್ರಮ. ಅಲ್ಲಿ ಬಂದೋಬಸ್ತಿಗಾಗಿ ಬಂದಿರುವ ನೂರಾರು ಎಸ್ಸೆಸ್ಸೆಲ್ಸಿ ಮಂತ್ರಿ ಮಾಗಧರಿಗೆ ಕಾರ್ಟ್ ಆಗಿ, ಜನರನ್ನು ನಿಯಂತ್ರಿಸಲು, ವಾಹನಗಳನ್ನು ಒಂದೆಡೆ ನಿಲ್ಲಿಸಲು, ಯಾವುದೇ ಅವಘಡಗಳಾಗದಂತೆ ಪರಿಸ್ಥಿತಿಯನ್ನು ನಿಭಾಯಿಸಲು ಸನ್ನದ್ಧರಾಗಿ ನಿಂತಿದ್ದಾರೆ. ಕಾರ್ಯಕ್ರಮ ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾದರೆ ಪೊಲೀಸ್ ಇಲಾಖೆಯವರು ಆರು ಗಂಟೆಗೆ ಎದ್ದು ನಿತ್ಯವಿಧಿಗಳನ್ನು ಪೂರೈಸಿ ತಿಂಡಿ ತಿಂದು ಸ್ಥಳಕ್ಕೆ ಬಂದೋಬಸ್ತಿಗಾಗಿ ಬಂದು ನಿಂತರೆ ಕಾರ್ಯಕ್ರಮ ಮುಗಿದು ಅತಿಥಿಗಳೆಲ್ಲ ತಮ್ಮ ಮನೆಗೆ ಸೇರಿದರೂ ಇವರ ಡ್ಯೂಟಿ ಮುಗಿದಿದೆ. ಬಂದೋಬಸ್ತಿನ ಗಡಿಬಿಡಿಯಲ್ಲಿ ಎಷ್ಟೋ ಬಾರಿ ಊಟ ತಿಂಡಿಗಳ ಕಡೆ ಇವರ ಗಮನ ಹರಿಯೋದೆ ಇಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇವರ ನಿಸರ್ಗ ಕರೆಗಳಿಗೆ ಯಾವುದೇ ರೀತಿಯ ವ್ಯವಸ್ಥೆ ಇರುವುದಿಲ್ಲ.

  • 2018 ರಲ್ಲಿ ಇತ್ತೀಚೆಗೆ ಚಾಣಕ್ಯಪುರಿಯಲ್ಲಿ ನಿರ್ಮಿಸಿದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು
    ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
    ದೇಶದ ಆರಕ್ಷಕ ಪಡೆಗಳಿಗೆ ಈ ರಾಷ್ಟ್ರೀಯ ಗುರುತನ್ನು,ಹೆಮ್ಮೆಯ ಉದ್ದೇಶದ ಏಕತೆ, ಸಾಮಾನ್ಯ ಇತಿಹಾಸ ಮತ್ತು ಹಣಬರಹವನ್ನು ನೀಡುವ ಪೊಲೀಸ್ ಸ್ಮಾರಕವು ಜೀವದ ಹಂಗನ್ನು ತೊರೆದು ರಾಷ್ಟ್ರವನ್ನು ಸಂರಕ್ಷಿಸುವ ಅವರ ಬದ್ಧತೆಯನ್ನು ಹೊಂದಿರುವ
    ಸ್ಮಾರಕ ಕೇಂದ್ರ ಶಿಲ್ಪವು ಸುಮಾರು 30 ಅಡಿ ಎತ್ತರದ ಗ್ರನೈಟ್ ಏಕಶಿಲೆಯ ಸಮಾಧಿ ಸಿಬ್ಬಂದಿ ಸಿಬ್ಬಂದಿಯ ಶಕ್ತಿ, ಸ್ಥಿತಿ ಸ್ಥಾಪನೆ ಮತ್ತು ವಿಶ್ವ ಸೇವೆಯನ್ನು ಪ್ರತಿನಿಧಿಸುತ್ತದೆ.

ದೇಶದ ಯಾವುದೇ ಭಾಗದಲ್ಲಿ ಯಾವುದೇ ರೀತಿಯ ಹರತಾಳ, ಗಲಾಟೆ, ಹಿಂಸಾಚಾರ, ದೊಂಬಿಯಂತಹ
ಘಟನೆಗಳು ನಡೆದರೂ ಅಲ್ಲಿ ಇವರ ಹಾಜರಿ ಅತ್ಯವಶ್ಯಕ. ಆತ್ಮಹತ್ಯೆಗಳು, ಸಂಶಯಾಸ್ಪದ ಸಾವುಗಳು, ಅಪಘಾತಗಳು, ಕೊಲೆ ಸುಲಿಗೆ, ಕಳ್ಳತನ, ದರೋಡೆಕೋರರು ನಡೆದರೂ
ಇವರು ಹಾಜರಾಗಲೇಬೇಕು. ಗೊತ್ತಿರಲಿ ಪೊಲೀಸ್ ಕಾರ್ಯಪಡೆ ದೇಶದ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ, ಅಪರಾಧಿಗಳನ್ನು ಹಿಡಿಯುವಲ್ಲಿ, ನೈಸರ್ಗಿಕ ದುರಂತ ಅಪಘಾತಗಳಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅಹರ್ನಿಶಿ ಪ್ರಯತ್ನಿಸುತ್ತದೆ. ರೌಡಿಗಳನ್ನು ಮಟ್ಟ ಹಾಕಲು, ಕಳ್ಳ ಕಾಕರನ್ನು ಹಿಡಿಯುವ, ಕಳ್ಳ ಸಾಗಾಣಿಕೆದಾರರನ್ನು ತಡೆಯುವ ಜನರು ಎಷ್ಟೋ ಬಾರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಾಗ ಅವರನ್ನು ಕೊಲ್ಲಬಹುದು, ಮರಣಕ್ಕೀಡಾಗಬಹುದು.
ಪೊಲೀಸರ ಇಂತಹ ತ್ಯಾಗ ಮತ್ತು ಬಲಿದಾನಗಳ ಸ್ಮರಣಾರ್ಥವಾಗಿ ಪ್ರತಿ ವರ್ಷ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದೆ.

:1959ರ ಅಕ್ಟೋಬರ್ 21 ರಂದು ಲಡಾಖ್ ನ ಹಾಟ್ ಸ್ಪ್ರಿಂಗ್ ನಲ್ಲಿ ಬಲವಾದ ಶಸ್ತ್ರಗಳನ್ನು ಅಳವಡಿಸಿದ ಚೀನಿ ಪೊಲೀಸರ ಮೇಲೆ ಅನಿರೀಕ್ಷಿತ ದಾಳಿ ನಡೆಸಲಾಯಿತು ಸುಮಾರು 10 ಜನ ಪೊಲೀಸ್ ಸಿಬ್ಬಂದಿ ಹುತಾತ್ಮರಾದರು. ದಿನವನ್ನು ‘ಪೊಲೀಸ್ ಹುತಾತ್ಮ ದಿನಾಚರಣೆ’ ಎಂದು ಆಚರಿಸಲಾರಭಿಸಿದರು.

2018 ರಲ್ಲಿ ಇತ್ತೀಚೆಗೆ ಚಾಣಕ್ಯಪುರಿಯಲ್ಲಿ ನಿರ್ಮಿಸಿದ ರಾಷ್ಟ್ರೀಯ ಪೊಲೀಸ್ ಸ್ಮಾರಕವನ್ನು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ರಾಷ್ಟ್ರಕ್ಕೆ ಸಮರ್ಪಿಸಿದರು.
ದೇಶದ ಆರಕ್ಷಕ ಪಡೆಗಳಿಗೆ ಈ ರಾಷ್ಟ್ರೀಯ ಗುರುತನ್ನು,ಹೆಮ್ಮೆಯ ಉದ್ದೇಶದ ಏಕತೆ, ಸಾಮಾನ್ಯ ಇತಿಹಾಸ ಮತ್ತು ಹಣಬರಹವನ್ನು ನೀಡುವ ಪೊಲೀಸ್ ಸ್ಮಾರಕವು ಜೀವದ ಹಂಗನ್ನು ತೊರೆದು ರಾಷ್ಟ್ರವನ್ನು ಸಂರಕ್ಷಿಸುವ ಅವರ ಬದ್ಧತೆಯನ್ನು ಹೊಂದಿರುವ
ಸ್ಮಾರಕ ಕೇಂದ್ರ ಶಿಲ್ಪವು ಸುಮಾರು 30 ಅಡಿ ಎತ್ತರದ ಗ್ರನೈಟ್ ಏಕಶಿಲೆಯ ಸಮಾಧಿ ಸಿಬ್ಬಂದಿ ಸಿಬ್ಬಂದಿಯ ಶಕ್ತಿ, ಸ್ಥಿತಿ ಸ್ಥಾಪನೆ ಮತ್ತು ವಿಶ್ವ ಸೇವೆಯನ್ನು ಪ್ರತಿನಿಧಿಸುತ್ತದೆ. ಈ ಶೌರ್ಯದ ಗೂಡುಗಳಲ್ಲಿ ಹುತಾತ್ಮರಾದ ಆರಕ್ಷಕ ಸಿಬ್ಬಂದಿಗಳ ಹೆಸರುಗಳನ್ನು ಕೆತ್ತಲಾಗಿದೆ. ವಸ್ತು ಸಂಗ್ರಹಾಲಯದಲ್ಲಿ ಯುದ್ಧದ ಸ್ಮಾರಕಗಳು ಮತ್ತು ಭಾರತದಲ್ಲಿ ರಕ್ಷಣಾ ಪಡೆಯು ಕಾರ್ಯ ನಿರ್ವಹಿಸುತ್ತಿರುವ ದಿನಗಳಿಂದ ಹಿಡಿದು ಇಂದಿನ ಪ್ರಾಚೀನ ಮಹತ್ವಪೂರ್ಣ ವಿಷಯಗಳನ್ನು ಕಾಯ್ದಿರಿಸಲಾಗಿದೆ. ಈ ಪೊಲೀಸ್ ಐತಿಹಾಸಿಕ ಸ್ಮಾರಕವು ಸೋಮವಾರ ಎಲ್ಲಾ ದಿನಗಳಲ್ಲಿ ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ ಸೂರ್ಯಾಸ್ತದ ಒಂದು ಗಂಟೆಯ ಮೊದಲು ರಾಷ್ಟ್ರೀಯ ಪೊಲೀಸ್ ಸ್ಮಾರಕ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿ.ಎ.ಪಿ.ಎಫ್.) ಬ್ಯಾಂಡ್, ಪ್ರದರ್ಶನ ಮತ್ತು ವೈರಿಗಳ ಹಿಮ್ಮೆಟ್ಟುವಿಕೆಯ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಯಿತು.

ಪ್ರತಿ ವರ್ಷವೂ ಪೊಲೀಸ್ ಸ್ಮಾರಕ ಭವನದಲ್ಲಿ ಕೇಂದ್ರದ ಗ್ರಹ ಸಚಿವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನು ನಡೆಸಿ ಪೊಲೀಸ್ ಹುತಾತ್ಮರಿಗೆ ಗೌರವ ಸಲ್ಲಿಸದಿದ್ದರೆ. ವಿವಿಧ ರಾಜ್ಯ ಸಚಿವರು ಮತ್ತು ಕೇಂದ್ರ ಸಚಿವರು ಹುತಾತ್ಮರಿಗೆ ಅರ್ಪಿಸುವ ಮೂಲಕ ಗೌರವ ನಮನ ಸಲ್ಲಿಸುತ್ತಾರೆ ಕೇಂದ್ರ ಗೃಹ ಸಚಿವರು ಸಮಾರಂಭವನ್ನು ಉದ್ದೇಶಿಸಿ ಹುತಾತ್ಮರನ್ನು ಸ್ಮರಿಸುವ ಜೊತೆಗೆ ರಕ್ಷಣಾ ಪಡೆಗಳು ಎದುರಿಸುವ ನಿಜವಾದ ಸವಾಲುಗಳನ್ನು ವಿವರಿಸುತ್ತಾರೆ. ಕಾರ್ಯಕ್ರಮದಲ್ಲಿ ಎಲ್ಲಾ ಹುದ್ದೆಗಳ ಕಾರ್ಯಕ್ರಮಗಳ ಅಧಿಕಾರಿಗಳು ಹಾಜರಾಗಿ ಹಾಟ್ ಸ್ಪ್ರಿಂಗ್ನ ಶಿಲಾಫಲಕಕ್ಕೆ ಪುಷ್ಪಾಂಜಲಿಯನ್ನು ಸಲ್ಲಿಸುವ ಮೂಲಕ ಆಯ್ಕೆ ಮಾಡಿದರು. ಅಕ್ಟೋಬರ್ 22 ರಿಂದ 30 ರವರೆಗೆ ಪೊಲೀಸ್ ಹುತಾತ್ಮ ಕುಟುಂಬದ ಸದಸ್ಯರ ಭೇಟಿ ಪೊಲೀಸ್ ಬ್ಯಾಂಡ್ ಸೈಕಲ್ ಸೈಕಲ್ ಪಥಸಂಚಲನಗಳು ಇಲ್ಲಿ ನಡೆಯುತ್ತವೆ.

ಇನ್ನು ದೇಶದ ಪ್ರತಿ ಜಿಲ್ಲೆಗಳ ಕ್ರೀಡಾಂಗಣಗಳಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಪ್ರಬಂಧ, ಚಿತ್ರಕಲೆ ಸ್ಪರ್ಧೆಗಳು, ಆಟೋಟಗಳು ಮತ್ತು ರಕ್ತದಾನ ಶಿಬಿರಗಳನ್ನು ಆಯ್ಕೆ ಮಾಡಲಾಗಿಲ್ಲ ಪೊಲೀಸ್ ಸಿಬ್ಬಂದಿ ಶೌರ್ಯ, ತ್ಯಾಗ ಮತ್ತು ಬಲಿದಾನಗಳ ಸ್ಮರಣಾರ್ಥ ಕಾರ್ಯಕ್ರಮಗಳನ್ನು ಆಯ್ಕೆ ಮಾಡಲಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಅತ್ಯಮೋಘ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳನ್ನು ಗೌರವಿಸುವುದಿಲ್ಲ.

ನಮ್ಮ ದೇಶದ ಕಾರ್ಯಾಂಗ ಶಾಸಕಾಂಗ ಮತ್ತು ನ್ಯಾಯಾಂಗಗಳ ಜೊತೆಗೆ ಕಾರ್ಯನಿರ್ವಹಿಸುವ ಪೊಲೀಸ್ ವ್ಯವಸ್ಥೆಯು ಭಾರತ ದೇಶದ ಸಮಗ್ರ ರಕ್ಷಣೆಗೆ ಕಂಕಣಬದ್ಧವಾಗಿ ನಿಂತಿದ್ದು, ತಾಯಿ ಭಾರತೀಯ ಸೇವೆಯಲ್ಲಿ ತಮ್ಮ ಸರ್ವಸ್ವವನ್ನು ಅರ್ಪಿಸುತ್ತಾರೆ.

ಆದರೆ ಎದುರಿಸುತ್ತಿರುವ ಮನೋದೈಹಿಕ ಸಮಸ್ಯೆಗಳು ಹಲವು. ಆನಿಯಮಿತ ಕೆಲಸದ ಅವಧಿ, ನಿಗದಿತವಲ್ಲದ ಊಟೋಪಚಾರ, ಅತ್ಯಂತ ಕಡಿಮೆ ರಜೆಗಳು ಅವರಿಗೆ ಕುಟುಂಬದೊಂದಿಗೆ ಹೋಗಲು ಸಾಧ್ಯವಿಲ್ಲದ
ಒತ್ತಡದಿಂದಾಗಿ ಹಲವಾರು ಬಾರಿ ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲುತ್ತಿದ್ದಾರೆ. ಪರಿಣಾಮವಾಗಿ ಅನೇಕ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ.

ಇನ್ನು ಮಹಿಳಾ ಸಿಬ್ಬಂದಿಗಳ ಪರಿಸ್ಥಿತಿ ಗಂಭೀರವಾಗಿದೆ. ಕರ್ತವ್ಯದ ಸಮಯದಲ್ಲಿ ಸ್ತ್ರೀ ಸಹಜವಾದ ಸಾಮಾನ್ಯಸ್ರಾವಗಳು, ಬಸಿರು ಬಾಣಂತನಗಳ ಸಮಯದಲ್ಲಿ ಸೂಕ್ಷ್ಮ ದೈಹಿಕ ಅವಸ್ಥೆಗಳು ಅವರನ್ನು ಇನ್ನಿಲ್ಲದಂತೆ ಕಂಗೆಡಿಸುತ್ತವೆ. ಕರ್ತವ್ಯದ ಕರೆಗಳು ಬಂದೋಬಸ್ತಗಾಗಿ ವಿವಿಧೆಡೆ ತೆರಳುವ ಮಹಿಳೆಯರಿಗೆ ಶೌಚಾಲಯಗಳು ಇಲ್ಲದೆ ಇರುವುದು, ವಿಶ್ರಾಂತಿ ಕೋಣೆಗಳು ಇಲ್ಲದಿರುವುದು ಸಮಸ್ಯೆಯ ಗಂಭೀರತೆಯನ್ನು ಸೂಚಿಸಿದರೆ ಅವರಿಗೆ ಊಟ ತಿಂಡಿ ವ್ಯವಸ್ಥೆ ಇಲ್ಲದಿರುವುದು ಅವರ ಕುರಿತಾದ ಅಸಡ್ಡೆಯನ್ನು ತೋರಿಸುತ್ತದೆ.

ನಮ್ಮೆಲ್ಲರ ಒಳಿತಿಗಾಗಿ ತಮ್ಮ ಬದುಕಿನ ಬಹುಪಾಲು ಸಮಯವನ್ನು ಕಳೆಯುವ ಪೊಲೀಸ್ ಸಿಬ್ಬಂದಿಯನ್ನು ವಿನಾಕಾರಣ ಆಡಿಕೊಳ್ಳುವ ಜನರಿಗೆ ಅವರ ಅಂತರ್ಯದ ನೋವು ಅರಿವಾಗುತ್ತದೆ. ಅವರ ಮೇಲೆ ಕರುಣೆ ತೋರದಿದ್ದರೆ ಬೇಡ ಸಹಾನುಭೂತಿ ಇರಲಿ.
ಪರ ವಿರೋಧಗಳೇ ಇರಲಿ, ಸಾರ್ವಜನಿಕ ಬದುಕಿನಲ್ಲಿ ಶಿಸ್ತು ಮತ್ತು ಸಮಗ್ರ ರಕ್ಷಣೆಯನ್ನು ಮಾಡುವವರು. ಅವರ ಕರ್ತವ್ಯ ಮತ್ತು ವೈಯುಕ್ತಿಕ ಘನತೆಗೆ ಯಾವುದೇ ಕುಂದು ಬರದಂತೆ ವರ್ತಿಸೋಣ ಎಂಬ ಆಶಯದೊಂದಿಗೆ ಪೊಲೀಸ್ ಹುತಾತ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ಕೊಡೋಣ.

ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ, ಗದಗ

ಲೇಖಕಿಯರ ಪರಿಚಯ:

ಒಪ್ಲಸ್_131072

            ವೀಣಾ ಹೇಮಂತ್ ಗೌಡ ಪಾಟೀಲ್ , ರವರು ಗದಗ ಜಿಲ್ಲೆ ಮುಂಡರಗಿ ನಿವಾಸಿ. ಇವರು ಮನಃಶಾಸ್ತ್ರ ಮತ್ತು ಮಾನವ ಶಾಸ್ತ್ರಗಳ ಪದವಿಧರರು. ‘ಚೈತನ್ಯ’ ಎಂಬ ಶಿಕ್ಷಣ ಸಂಸ್ಥೆ ಹೊಂದಿರುವ ಇವರು ಅಬಾಕಸ್ ಮತ್ತು ವೇದ ಗಣಿತಗಳನ್ನು ಮಕ್ಕಳಿಗೆ ಕಲಿಸುತ್ತಾರೆ. ನರ್ಸರಿ ಟೀಚರ್ಸ್ ಟ್ರೈನಿಂಗ್ ತರಗತಿ ಹಾಗೂ ನುರಿತ ಶಿಕ್ಷಕರಿಂದ ಭರತ ನಾಟ್ಯ ಶಾಸ್ತ್ರೀಯ ನೃತ್ಯ ಮತ್ತು ಪಾಶ್ಚಾತ್ಯ ನೃತ್ಯಗಳಲ್ಲಿ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯಾಗಿರುವ ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾರೆ.
ವೀಣಾಂತರಂಗ ‘ ಎಂಬ ಪುಸ್ತಕ ಪ್ರಕಟಿಸಿದ್ದಾರೆ.

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ