ಎಚ್ಚರ!! ಕಟ್ಟೆಚ್ಚರ!!
ನಿಮ್ಮ ಆಧಾರ್ ಕಾರ್ಡ್ ಉಪಯೋಗಿಸಿ ನಿಮಗೂ ತಿಳಿಯದೆ ಯಾರೋ ತೆಗೆದಿರೋ ಅಜ್ಞಾತ ಸಿಮ್ ಕಾರ್ಡ್ ನಿಮ್ಮ ಜೀವನವನ್ನೇ ಬುಡಮೇಲು ಮಾಡೀತು!! ಹುಷಾರ್…!!
ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಇತ್ತೀಚಿಗೆ ನಡೆದ ಬಿಜೆಪಿ OBC ಮೋರ್ಚಾ ನೇತಾರ ರಂಜಿತ್ ಅವರ ಕಗ್ಗೊಲೆ ಸಂಬಂಧಿಸಿ ಪೊಲೀಸ್ ತನಿಖೆಯಲ್ಲಿ ಕೊಲೆ ನಡೆಸಿದ ಪಾಪ್ಯುಲರ್ ಫ್ರಂಟ್ ಜಿಹಾದಿ ಕೊಲೆಗಟುಕರು ಉಪಯೋಗಿಸಿದ ಒಂದು ಸಿಮ್ ಕಾರ್ಡ್ ಹಿಂದೆ ಬಿದ್ದಾಗ ಆ ಸಿಮ್ ಕಾರ್ಡ್ ಒಬ್ಬರು ಅಮಾಯಕ ಹಿಂದೂ ಮಹಿಳೆಯ ಹೆಸರಲ್ಲಿರೋದು ಕಂಡು ಬಂದು ಪೊಲೀಸರು 50ರ ಹರಯದ ಆ ಮಹಿಳೆಯನ್ನು ವಿಚಾರಣೆಗೊಳಪಡಿಸಿದಾಗ ಆಕೆಗೆ ತನ್ನ ಹೆಸರಲ್ಲಿ ಹೀಂಗೊಂದು ಸಿಮ್ ಕಾರ್ಡ್ ಇರೋ ವಿಷಯವೇ ಗೊತ್ತಿರಲಿಲ್ಲ..
ನಡೆದಿದ್ದೇನೆಂದರೆ ಆ ಮಹಿಳೆ ಕೆಲವು ತಿಂಗಳುಗಳ ಹಿಂದೆ ಒಂದು ಮೊಬೈಲ್ ಅಂಗಡಿಯಿಂದ ತನ್ನ ಅಗತ್ಯಕ್ಕೋಸ್ಕರ ಒಂದು ಸಿಮ್ ಕಾರ್ಡ್ ಖರೀದಿಸಿದ್ದಳು. ಆ ಅಂಗಡಿ ಮಾಲೀಕ ಸವಿಶೇಷ ಸೆಕ್ಯುಲರ್ ಸಮುದಾಯದವನಾಗಿದ್ದು ಈ ಮಹಿಳೆಯ ಅಜ್ಞಾನವನ್ನ ದುರುಪಯೋಗಿಸಿ ಆಕೆಯ ಆಧಾರ್ ಕಾರ್ಡ್ ಎರಡು ಬಾರಿ ವೆರಿಫಿಕೇಷನ್ ತೆಗೆದು ಆಕೆಯ ಹೆಸರಲ್ಲೇ ಎರಡು ಸಿಮ್ ತೆಗೆದು ಒಂದನ್ನು ಆಕೆಗೂ ಇನ್ನೊಂದನ್ನ ಜಿಹಾದಿಗಳಿಗೂ ಕೊಟ್ಟಿದ್ದ!!
ಈಗ ಏನೂ ಅರಿಯದ ಆ ಮುಗ್ದ ಮಹಿಳೆ ಪೊಲೀಸ್ ಸ್ಟೇಷನ್ ಕೋರ್ಟ್ ಕಚೇರಿ ಅಲೆಯೋ ಕಷ್ಟಕ್ಕೆ ಸಿಲುಕಿದ್ದಾಳೆ.. ಪೊಲೀಸರಿಗೆ ಆಕೆಯ ನಿರಪರಾಧಿತ್ವ ಅರ್ಥವಾಗಿದ್ದರಿಂದ ಸ್ವಲ್ಪ ನಿರಾಳವಾಗಿ ಉಸಿರಾಡುವಂತಾಗಿದ್ದರೂ ನಮ್ಮ ನಿಮ್ಮ ಪರಿಸ್ಥಿತಿ ಇಂಥ ವಿಷಯಗಳಲ್ಲಿ ಸಿಕ್ಕಿ ಹಾಕಿಕೊಂಡರೆ ಹೊರಬರುವುದು ಅಷ್ಟು ಸುಲಭ ಸಾಧ್ಯವಾಗಲ್ಲ ಅನ್ನೋದು ನೆನಪಿರಲಿ..
ನಿಮಗೆ ಖಚಿತವಾಗಿ ಗೊತ್ತಿದೆಯೇ ನಿಮ್ಮ ಆಧಾರ್ ಕಾರ್ಡ್ ಹೊಂದಿಸಿ ಎಷ್ಟು ಸಿಮ್ ಕಾರ್ಡ್ ಗಳು ಈಗ ಆಕ್ಟಿವ್ ಆಗಿದೆ ಎಂದು?
ನಿಮಗೇನೇ ಗೊತ್ತಿಲ್ಲದೇ ನಿಮ್ಮ ಹೆಸರಲ್ಲಿ ಎಲ್ಲೋ ಯಾರದ್ದೋ ಕೈಗಳಲ್ಲಿ ನಿಮ್ಮ ಹೆಸರಲ್ಲೊಂದು ಸಿಮ್ ಕಾರ್ಡ್ ಚಾಲ್ತಿಯಲ್ಲಿ ಇರಲೂ ಬಹುದು ಅಲ್ವ??
ಆ ಸಂಶಯ ನಿಮಗಿದ್ದರೆ ಕೇಂದ್ರ ಸರಕಾರ ಅದಕ್ಕಾಗಿಯೇ ಒಂದು ವೆಬ್ ಪೋರ್ಟಲ್ ತೆರೆದಿದೆ. ತುಂಬಾ ಜನರಿಗೆ ಇದರ ಅರಿವಿಲ್ಲ..
ನಿಮ್ಮ ಆಧಾರ್ ಕಾರ್ಡ್ ಜೊತೆ ನೋಂದಾಯಿಸಿದ ಮೊಬೈಲ್ ನಂಬರ್ ಈ ಪೋರ್ಟಲ್ನಲ್ಲಿ ನೀವು ಕೊಟ್ಟರೆ ನಿಮ್ಮ ಆ ಆಧಾರ್ ಕಾರ್ಡ್ ನಲ್ಲಿ ಎಷ್ಟು ಸಿಮ್ ಕಾರ್ಡ್ಗಳು ಚಾಲ್ತಿಯಲ್ಲಿದೆ ಮತ್ತು ಆ ನಂಬರ್ಗಳು ಯಾವ್ಯಾವುದು ಎಂದು ತಿಳಿದುಕೊಳ್ಳಬಹುದು. ಮತ್ತು ನಿಮಗೆ ಅಜ್ಞಾತವಾಗಿರೋ ಸಿಮ್ ಆಕ್ಟಿವ್ ಆಗಿರೋದು ಕಂಡುಬಂದಲ್ಲಿ ಇದು ನನ್ನದಲ್ಲ ಅನ್ನೋ ರಿಪೋರ್ಟ್ ಅಲ್ಲೇ ಮಾಡಬಹುದು.
https://tafcop.dgtelecom.gov.in/index.php
ಪ್ರತಿಯೊಬ್ಬರೂ ಒಂದು ಬಾರಿ ಲಿಂಕ್ ತೆರೆದು ನಿಮ್ಮ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಮಾಡಿರೋ ಮೊಬೈಲ್ ನಂಬರ್ ಕೊಟ್ಟು ನೋಡಿ.. ಮತ್ತು ಈ ಸಂದೇಶವನ್ನ ಸಾಧ್ಯವಾದಷ್ಟು ಜನರಿಗೆ ತಲುಪಿಸಿ.
ಒಳ್ಳೆ ಮಾಹಿತಿ ನೀಡೋ ಲೇಖನ Sir…