Oplus_131072

 

ನಾಲ್ಕು ದಿನದ ಬದುಕಿನ ಪುಸ್ತಕದಲ್ಲಿ
ಮುಗುಳ್ನಗೆ ಮುಖಪುಟ ವಾಗಿರಬೇಕು
ಹಿಂಬದಿಯ ಪುಟದಲ್ಲಿ ತಾಳ್ಮೆ ಇರಬೇಕು
ಒಳ ಮುಖದ ಪುಟಗಳಲ್ಲಿ ಸ್ಥೈರ್ಯವಿರಬೇಕು

ಬಣ್ಣ ಬಣ್ಣದ ಚಿತ್ತಾರದ ಪುಟಗಳಲ್ಲಿ
ಕೂಡಿ ಆಡಿ ನಲಿಯುವಾಗ ಗೆಳೆತನವಿರಬೇಕು
ಮಾತೃ ಛಾಯೆಯ ವಾತ್ಸಲ್ಯದ ಆರೈಕೆ ಇರಬೇಕು
ಭ್ರಾತೃತ್ವದ ಉಯ್ಯಾಲೆಯ ತೂಗಾಟವಿರಬೇಕು

ಪುಟಿದೆದ್ದ ಆದರ್ಶ ದಾಂಪತ್ಯದಲ್ಲಿ
ನೋವು ನಲಿವಿನ ಶೃಂಗಾರವಿರಬೇಕು
ಒಬ್ಬರನ್ನೊಬ್ಬರು ಗೌರವಿಸುವ ನೋಟವಿರಬೇಕು
ಸರ್ವಜ್ಞನ ಕಿಚ್ಚನ ತಾಣವಾಗಿರಬೇಕು

ಕೊನೆಗೊಳ್ಳುವ ಪುಟಗಳ ಧ್ಯಾನದಲ್ಲಿ
ಜೀವನದ ಸಂತೃಪ್ತಿಯ ಭಾವವಿರಬೇಕು
ಹರಿನಾಮವ ಮನದುಂಬಿ ಭಜಿಸಬೇಕು
ಸಾರ್ಥೈಕ್ಯದ ಅರಿವಿನ ಗುರುವಾಗಬೇಕು

ನಾಲ್ಕು ದಿನದ ಬದುಕಿನ ಪುಸ್ತಕವ
ತೆರೆದು ಓದುವ ಮನಗಳಿರಬೇಕು
ಶಾಂತಿ ಸೌಹಾರ್ದದ ಕಿರಣಗಳಿರಬೇಕು
ಮಾನವ ಜನಾಂಗ ಒಂದೇ ಎಂಬ ಗ್ರಂಥವಾಗಬೇಕು

ಜೆ ಬಿ ನೂರ್ ಜಹಾನ್ ಬೇಗಂ
ದಾವಣಗೆರೆ

a woman wearing a sari

 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ