ಸಂಚಾರಿವಾಣಿ ತರುತ್ತಿದ್ದಿ
ಜೀವಕ್ಕೆ ಸಂಚಕಾರ ನೀ

ಮನುಷ್ಯ ಮನುಷ್ಯನ ಮನಸುಗಳ
ಚಂಚಲಕ್ಕೆ ಕಾರಣ ಆಗಿದ್ದಿ ನೀ

ಸ್ನೇಹ ಪ್ರೀತಿ ವಿಶ್ವಾಸಕ್ಕೆ
ಸಮನ್ವಯಕಾರತ್ವ ಒದಗಿಸಿದ್ದಿ ನೀ

ವಿಶ್ವವೇ ಅಂಗೈ ಅಗಲಕ್ಕೆ ತಂದಿದ್ದಿ
ಸಮಯ ಕಳೆಯಲು ಸಾಧನ ಆಗಿದ್ದಿ ನೀ

ಹಲೋ ಹಲೋ ಎಂದು
ಹಾರಲು ಅನು ಮಾಡಿ ಕೊಟ್ಟಿದ್ದಿ ನೀ

ಸೆಲ್ಫಿ ತೆಗೆಯಲು ಹೋಗಿ
ಜೀವ ಕೊಡಲು ಕಾರಣ ಆಗಿದ್ದಿ ನೀ

ಮೋಸ ವಂಚನೆಯ ಸಂಚಕಾರಕ್ಕೆ
ಪ್ರೇರಕ ಶಕ್ತಿ ಆಗಿದ್ದಿ ನೀ

ನೀನಿಲ್ಲದ ಮನಸ್ಸಿಲ್ಲ
ನೀನಿಲ್ಲದ ವಯಸ್ಸಿಲ್ಲ ಎಲ್ಲರಿಗೂ ಆಪ್ತ ನೀ

ಜ್ಞಾನ ವಿಜ್ಞಾನ ತಂತ್ರಜ್ಞಾನ
ಕುತಂತ್ರಕ್ಕೆಲ್ಲ ಮೂಲವಾಗಿದ್ದಿ ನೀ

ಒಂಟಿಯಾದ ಜೀವಕ್ಕೆ ಆಪ್ತ ಸ್ನೇಹಿತನಾಗಿದ್ದಿ
ಸಮಯ ಕಳೆಯಲು ಸಂವಹನಕಾರನಾಗಿದ್ದಿ ನೀ

ಡಾ.ಸಂಜೀವಕುಮಾರ ಅತಿವಾಳೆ
#15/2/140,ಕುಂಬಾರವಾಡ ರಸ್ತೆ, ಬ್ಯಾಂಕ ಕಾಲೋನಿ
ಬೀದರ -585403.
9986033356

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ