Oplus_131072

ಮಿರುಗು ಮಳೆ 

ಎಳೆ ಮಳೆಯ ಹನಿಯ ಪೂರ್ವದಲ್ಲಿ
ಭೂಮಿಯ ಒಡಲು ಪರಿಮಳ ಸೂಸುತ್ತಿದೆ
ಚಿತ್ತಾರ ಮೂಡಿಸಿವೆ ಪಕ್ಷಿಗಳ ಸಂಕುಲ
ಬಾನಾಡಿಗೆ ಬರಮಾಡಿಕೊಳ್ಳಲು ಕಾತರಿಸಿ

ತಂಗಾಳಿ ಬಿಸಿ ತಿಳಿಯಾಯ್ತು ಒಡಲು
ಮನಸ್ಸಿನ ಹಸಿ ಭಾವ ಮದವೇರಿದೇ
ವರ್ಷಪೂರ್ತಿ ದಣಿದಿದ್ದ ರೈತನ ದೇಹಕ್ಕೆ
ವರ್ಷಧಾರೆ ಮಾಡಿದೆ ಹರ್ಷವನುಂಟು

ಆಗೊಮ್ಮೆ ಈಗೊಮ್ಮೆ ಸಿಡಿಲ್ಮಿಂಚಿನ ಕಲರವ ಕಂಡು
ನಯವಾಗಿ ಅರಳಿ ನಿಂತಿವೆ ಹೂಬಳ್ಳಿ
ಮೊದಲನೇ ಮಳೆಯಲ್ಲಿ ನೆನೆಯುವ ಹುಮ್ಮಸ್ಸು
ಜ್ವರಕ್ಕೆ ಹೆದರದೆ ಹೊರಹೋಗುವ ಮನಸ್ಸು

ಬರಿದಾದ ಈ ಭಾವಕ್ಕೆ ಈ ಮಳೆ
ಹಸಿರು ತೋರಣದ ಹೊದಿಕೆ ಹಾಕಿದೆ
ಕಳೆಯಲಿ ದುಃಖ ದುಮ್ಮಾನಗಳ ವಿರಸ
ಮತ್ತೆ ಅರಳಲಿ ಎಲ್ಲರ ಬಾಳಲ್ಲಿ ಸಂತಸ.

ಪ್ರಕಾಶ್ ತಿಪನೋರೆ – ದೋಹಾ ಕತಾರ್.
(ಅನಿವಾಸಿ ಭಾರತೀಯ)
Address
Prakash Tippanna
Coating Supervisor
2nd Floor Barwa Commercial Avenue, Type 5 Building No. 100, Street No. 965, Zone No. 56 Doha Qatar

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ