ಸುಬ್ಬಕ್ಕಳ ಮೈಂಡ್ ಟರ್ನಿಂಗ್ ಸೆಂಟರು (ಲಲಿತ ಪ್ರಬಂಧ)
– ಮಚ್ಚೇಂದ್ರ ಪಿ ಅಣಕಲ್.
ರೇಷ್ಮೆ ಸೀರೆ ಉಟ್ಟು ತುಂಬ ಲಕ್ಷಣವಾಗಿ ಕಾಣ್ತಿದ್ದ ಸುಬ್ಬಕ್ಕ ಈಗ ಮೊದಲಿನಂತ್ತಿಲ್ಲ. ಸೀರೆ ಬದಲಾಗಿ ಚೂಡಿದಾರ ಪ್ಯಾಷನ್ ಡ್ರೇಸ್ ತೊಡುತ್ತಿದ್ದಾಳೆ. ನೀಳವಾದ ಅವಳ ಕೂದಲು ಈಗ ಇಂದಿರಾ ಗಾಂಧಿಯಂತೆ ಕಟಿಂಗ್ ಮಾಡಿಕೊಂಡಿದ್ದಾಳೆ. ಮುಖಕ್ಕೆ ಬರಿ ಸ್ನೋ ಪೌಡರ್ ಹಚ್ಚಿಕೊಳ್ತದ್ದ ಆಕೆ ಈಗ ಬ್ಯೂಟಿ ಪಾರ್ಲರ್ ಗೆ ಹೋಗಿ ಮೇಕಪ್ ಮಾಡಿಕೊಳ್ಳುತ್ತಿದ್ದಾಳೆ. ನೀವೇ ಊಹಿಸಿ ನಮ್ಮ ಸುಬ್ಬಕ್ಕಳ ಮೈಂಡು ಎಷ್ಟು ಬೇಗ ಬದಲಾಗಿದೆ ಅಂತ.
ಸರ್ಕಾರಿ ಶಾಲಿ ಮಾಸ್ತರ್ ಆಗಿ ಮಕ್ಕಳಿಗೆ ತುಂಬ ಚನ್ನಾಗಿ ಪಾಠ- ಪ್ರವಚನ ಮಾಡ್ತಿದ್ದ ನಮ್ ಸುಬ್ಬಕ್ಕ ಕೆಲ ದಿನಗಳ ಹಿಂದೆ ಶಾಲೇಲಿ ಪಾಠ ಮಾಡಿ ಮನೆಗೆ ಬಂದ್ ಮೇಲೆ ಆನ್ ಲೈನ್ ನಲ್ಲಿ ಲೈವ್ ಬಂದು ಪ್ರವಚನ ಹೇಳ್ತಿದ್ದಳು.
ಕನ್ನಡ ವ್ಯಾಕರಣದಲ್ಲಿ ಪಾಠ- ಪ್ರವಚನ ಅನ್ನೊದು ಜೋಡು ನುಡಿಯಾಗಿ ಬಳಸುತ್ತಾರೆ . ಆದರೆ ಸುಬ್ಬಕ್ಕ ಪಾಠ ಶಾಲೆಲಿ ಹೇಳಿದರೆ ಪ್ರವಚನ ಮನೆಯಲ್ಲಿ ಹೇಳುವ ಪದ್ದತಿ ಸುರು ಮಾಡಿಕೊಂಡಿದಳು. ಇವಳ ದೃಷ್ಟಿಯಲ್ಲಿ ಪಾಠ ಬೇರೆ ಪ್ರವಚನ ಬೇರೆಯಾಗಿ ಮಾರ್ಪಟ್ಟಿತು.
ಹೌದು ನಿಜವಾಗಿಯೂ ಪ್ರವಚನ- ಪಾಠ ಬೇರೆ ಬೇರೆನೇ.
ಈಗ ಅದೂ ಬಿಟ್ಟು ಸುಬ್ಬಕ್ಕ ‘ ಮೈಂಡ್ ಮಾಸ್ಟರ್ ” ಆಗಿ ಬದಲಾಗಿದ್ದಾಳೆ. ಪ್ರವಚನ ಹೇಳುವ ಸಮಯದಲ್ಲಿ ಜನರಿಗೆ ಕಾಲಕ್ಕೆ ತಕ್ಕಂತೆ ಬದಲಾಗಬೇಕು ಎಂದು ಹೇಳುತ್ತಿದ್ದ ಇವಳು ಜನರು ಬದಲಾಗಿದ್ದಾರೋ ಇಲ್ವೋ ! ಇವಳು ಮಾತ್ರ ತುಂಬಾ ಬದಲಾಗಿದ್ದಾಳೆ.
ರೇಷ್ಮೆ ಸೀರೆ ಉಟ್ಟು ತುಂಬ ಲಕ್ಷಣವಾಗಿ ಕಾಣ್ತಿದ್ದ ಸುಬ್ಬಕ್ಕ ಈಗ ಮೊದಲಿನಂತ್ತಿಲ್ಲ. ಸೀರೆ ಬದಲಾಗಿ ಚೂಡಿದಾರ ಪ್ಯಾಷನ್ ಡ್ರೇಸ್ ತೊಡುತ್ತಿದ್ದಾಳೆ. ನೀಳವಾದ ಅವಳ ಕೂದಲು ಈಗ ಇಂದಿರಾ ಗಾಂದಿಯಂತೆ ಕಟಿಂಗ್ ಮಾಡಿಕೊಂಡಿದ್ದಾಳೆ. ಮುಖಕ್ಕೆ ಬರಿ ಸ್ನೋ ಪೌಡರ್ ಹಚ್ಚಿಕೊಳ್ತದ್ದ ಆಕೆ ಈಗ ಬ್ಯೂಟಿ ಪಾರ್ಲರ್ ಗೆ ಹೋಗಿ ಮೇಕಪ್ ಮಾಡಿಕೊಳ್ಳುತ್ತಿದ್ದಾಳೆ. ನೀವೇ ಊಹಿಸಿ ನಮ್ಮ ಸುಬ್ಬಕ್ಕಳ ಮೈಂಡು ಎಷ್ಟು ಪಾಸ್ಟ್ ಅಗಿ ಬದಲಾಗಿದ್ದಾಳೆ. ಅಂತ .
ಇರಲಿ. ಈಗ ಈಕೆ ಈ ಮೈಂಡ್
ಟ್ರೈನಿಂಗ್ ಸೆಂಟರ್’ ಅಂತ ಮಾಡಿರುವುದು ಒಂದು ವಿನೂತನ ಪ್ರಯೋಗವೇ ಸರಿ.
ಈ mind ಗೆ ಅವಾರ್ಡ ಬರುವ ಮುಂಚೆ ಸುಬ್ಬಕ್ಕ ಹಳ್ಳಿ ಗೌರಮ್ಮನ ಹಾಗೆ ಅರೆಹುಚ್ಚಿಯಾಗಿದ್ದವಳು ಈಗ ಸ್ವಲ್ಪ ಪ್ರಬುದ್ಧಳಾಗಿ ಮಾನಸಿಕವಾಗಿ ಅಷ್ಟೊಂದು ಬದಲಾಗದಿದ್ದರೂ ದೈಹಿಕವಾಗಿ ತುಂಬ ಬದಲಾಗಿದ್ದಾಳೆ.
ಕೆಲ ವರ್ಷಗಳ ಹಿಂದೆ ಅಂದರೆ 2019 ರ ಸಂಧರ್ಭದಲ್ಲಿ ಕೊರನಾ ಮಹಾಮಾರಿ ಕಾರಣವಾಗಿ ಲಾಕ್ ಡೌನ್ ಆಗಿದ್ದರಿಂದ ಆಕೆಗೆ ಮನೆಯಿಂದ ಹೊರ ಬರದೆ ಇದ್ದದ್ದರಿಂದ ಫೇಸ್ ಬುಕ್ ಲೈವ್ ನಲ್ಲಿ ಪ್ರವಚನ ಸುರು ಮಾಡಿ ನೂರಾರು ಪಡ್ಡೆ ಹೈಕಳಿಗೆ ಬುದ್ದಿ ಹೇಳಿದರಿಂದ ಅವರು ಸಾರಾಯಿ ಕುಡಿಯೊದು, ಬೀಡಿ ಸಿಗರೇಟು ಸೇದುವುದು ಮತ್ತು ತಂಬಾಕು ತಿನ್ನುವುದು ಬಿಟ್ಟಿರುವುದಾಗಿ ಇವಳು ಪ್ರವಚನ ಮಾಡುವಾಗ ಲೈವ್ ನಲ್ಲಿ ಕಾಮೆಂಟ್ ಹಾಕಿದ ಹುಡುಗರ ಕುರಿತು ತುಂಬ ಖುಷಿ ಪಟ್ಟಿದಳು. ಕೊನೆಗೂ ತಾನು ಹೇಳುವ ಪ್ರವಚನ ಕೇಳಿ ಚಟಗಳು ಬಿಟ್ಟಿರುವ ವ್ಯಸನಕಾರರ ಕುರಿತು ತುಂಬ ಸಲ ಸಾಕಷ್ಟು ಕಡೆ ಹೇಳಿಕೊಂಡು ಪ್ರಚಾರ ತಗೊಂಡಿದ್ದರಿಂದ ಅದ್ಯಾವುದೋ ಡೆಲ್ಲಿಯ ಖಾಸಗಿ ಸಂಸ್ಥೆಯೊಂದು ಇವಳ ಪ್ರವಚನಕ್ಕೆ ಮನಸೋತು ಪ್ರಶಸ್ತಿ ಪುರಸ್ಕಾರವು ನೀಡಿ ಗೌರವಿಸಿತು. ಅಂದಿನಿಂದ ಈಕೆ
ತನ್ನ ಮಾತಿಗೆ ಜನ ಇಷ್ಟೊಂದು ಫೀದಾ ಅಗ್ತಾರೆ ಅಂದರೆ ನಾನೀಗ ಪ್ರವಚನ ಹೇಳೊದು ಬಿಟ್ ಬಿಟ್ಟು ಮನಶಾಸ್ತ್ರಜ್ಞೆಯಾಗಿ ಯಾಕೆ ಗುರ್ತಿಸಿ ಕೊಳ್ಳಬಾರದು ? ಅಂತ ಯೋಚಿಸಿ ಈ ‘ಮೈಂಡ್ ಮಾಸ್ಟರ್ ಟ್ರೇನಿಂಗ್ ಸೆಂಟರ್ ‘ ಪ್ರಾರಂಭಿಸಿಯೇ ಬಿಟ್ಟಳು.
ಇವಳು ಆವಾಗ ಪ್ರವಚನ ಹೇಳುವ ಸಮಯದಲ್ಲಿ ಕೆಲ ಪಡ್ಡೆ ಹುಡುಗರು ಕಪಿಚೇಷ್ಟೆ ಮಾಡಿದ್ದು ಉಂಟು. ಆದರೂ ಸ್ವಲ್ಪವೂ ಕೋಪಿಸಿಕೊಳ್ಳದೆ ಅಷ್ಟೇ ಸರಾಗವಾಗಿ ಪ್ರವಚನ ಮುಗಿಸುತ್ತಿದಂತೆ ಈ ಅವಾರ್ಡು ಬೇರೆ ಸಿಕ್ಕಿದರಿಂದ ತುಂಬ ಶಾರ್ಪ ಆಗಿದ್ದ ನಮ್ಮ ಸುಬ್ಬಕ್ಕ ಈ ಪ್ರಶಸ್ತಿಯ ಗರಿ ಬಂದೊಡನೆ ಮೈಯಲ್ಲ ಒಂದ್ ನಮೂನೆ ರೊಮಾಂಚನಗೊಂಡು ಆ ನವಿಲಿನಂತೆ ಹುಚ್ಚೆದ್ದು ಆ ಅವಾರ್ಡು ಕೊಡುವ ಸಂಸ್ಥೆಯವರೊಂದಿಗೆ ಡೆಲ್ಲಿ ವೇದಿಕೆಯಲ್ಲಿಯೇ ಕುಣಿದು ಕುಪ್ಪಳಿಸಿ ಅತಿ ಖುಷಿಯಿಂದ ಪ್ರಶಸ್ತಿ ಸ್ವಿಕರಿಸಿದಳು.
ಈ ಮೈಂಡ್ ಮಾಸ್ಟರ್ ಪ್ರಶಸ್ತಿ ಬಂದಾಗಿನಿಂದ ನಮ್ಮ ಸುಬ್ಬಕ್ಕಳ ಮೈಂಡು ಈಗೀಗ ಮೊದಲಿನಂತ್ತಿಲ್ಲ. ಅದು ಏನಾದ್ರೂ ಒಂದಿಲ್ಲೊಂದು ‘ನವನವೋನ್ಮೇಷಶಾಲಿನಿ’
ಎನ್ನುವಂತೆ ಹೊಸ ಹೊಸದರ ಬಗ್ಗೆ ಯೋಚಿಸ್ತಾನೆ ಇರುತ್ತದೆ.
ಮನುಷ್ಯನಲ್ಲಿ ಕಾಮ,ಕ್ರೋಧ, ಲೋಭ,ಮೋಹ,ಮದ,ಮತ್ಸರ,ಹೆಚ್ಚಾದಂತೆ ಅವನ ಮನಸ್ಸು ಚಂಚಲತೆಯಿಂದ ಚಲಿಸಲಾರಂಭಿಸುತ್ತದೆ. ದೇಹಕ್ಕೆ ವಯಸ್ಸಾದರು ಮನಸ್ಸಿಗೆ ವಯಸ್ಸಾಗುವುದಿಲ್ಲ. ಸಾಯುವ ಸಮಯದಲ್ಲಿಯೂ ಆತನಿಗೆ ಅರಿಷಡ್ ವರ್ಗಗಳು ಮುತ್ತಿಗೆ ಹಾಕಿದರೆ ಅವನಲ್ಲಿ ಯೌವನದ ಆಸೆ ಆಕಾಂಕ್ಷೆಗಳು ಮೂಡುತ್ತವೆ. ಸುಂದರವಾದ ಹೆಣ್ಣೊಂದು ಹತ್ತಿರ ಸುಳಿದು ಅವಳ ಸೌಂದರ್ಯ ತಾಕಿದರೆ ಸಾಕು ನೂರು ವರ್ಷದ ಮುದುಕನಿದ್ದರೂ ಅವಳ ಸ್ಪರ್ಶದ ಸುಖ ಬಯಸಿ ಆತ ಜೊಲ್ಲು ಸುರಿಸುತ್ತಾನೆ ” ಅಂತ ಶ್ರೀ ಕೃಷ್ಣ ಭಗವತ್ ಗೀತೆಯಲ್ಲಿ ಹೇಳಿದ್ದಾನೆ.
ಈಗ ಈಕೆಗೆ ಜನಾ ‘ಶಾಲಿ ಮಾಸ್ತರತಿ’ ಅನ್ನೊದು ಬಿಟ್ಟು ‘ಮೈಂಡ್ ಮಾಸ್ಟರ್ ಅನ್ನೊದಕ್ಕೆ ಸುರು ಮಾಡಿದರು. ಇದೇನು ಸರ್ಕಾರದಿಂದ ಪಗಾರ ತಗೊಂಡು ಮಕ್ಕಳಿಗೆ ಪಾಠ ಮಾಡಬೇಕಾದವಳಿಗೆ ‘ಮೈಂಡ್ ಮಾಸ್ಟರ್ ‘ ಅಂತ ಹೇಳ್ತಿದ್ದಿರಿ ಅಂತ ಕೇಳಬೇಡಿ. ಮತ್ತೆ
ಮೈಂಡ್ ಮಾಸ್ಟರ್’ ಅಂದರೆ ಏನು ಅಂತ ಕೇಳ್ತಿರಾ ? ಇರಲಿ. ಹೇಳ್ತೆನೆ ಕೇಳಿ mind ಅಂದ್ರೆ ಮನಸ್ಸು Master ಅಂದರೆ ಶಿಕ್ಷಕ ಅಂತ ಅಲ್ವಾ ? ಅಂದರೆ ಇವಳು ಮನಸ್ಸಿನ ಬಗ್ಗೆ ಶಿಕ್ಷಕಿಯಾಗಿ ಪಾಠ ಮಾಡ್ತಾಳೆ ಅಂತ ತಾವು ಅಂದುಕೊಂಡಿರಬಹುದು ಇದು ಸುದ್ದ ಸುಳ್ಳು. ಯಾಕೆಂದರೆ ಇವಳು ಮನಃಶಾಸ್ತ್ರ ಅಧ್ಯಯನ ಮಾಡೆ ಇಲ್ಲ.
ಸರ್ಕಾರಿ ನಿಯಮದ ಪ್ರಕಾರ ಮನಃಶಾಸ್ತ್ರ ಅಧ್ಯಯನ ಮಾಡಿದವರು ಮನಸ್ಸಿನ ಬಗ್ಗೆ ಭೋಧನೆ ಮಾಡುತ್ತಾರೆ. ಅವರಿಗೆ ಇಂಗ್ಲೀಷ್ ನಲ್ಲಿ mind master ಅಂತ ಕರೆಯಬಹುದು. ಆದ್ರೆ ಈ ಸುಬ್ಬಕ್ಕಳಿಗೆ ಅದೇನೋ ಗೌರವಾರ್ಥವಾಗಿ ಮೈಂಡ್ ಮಾಸ್ಟರ್ ಪ್ರಶಸ್ತಿ ಬಂದಾಗಿನಿಂದ ಅವಳು ಮನಶಾಸ್ತ್ರ ಶಿಕ್ಷಕಿಯಾಗಿ ಬಿಟ್ಟಳು.
(ಒಂದು ಮಾತು ನೆನಪಿರಲಿ ಗೌರವ ಡಾಕ್ಟರೇಟ್ ಪದವಿ ಪಡೆದವರೆಲ್ಲ ಪ್ರೊಪೇಸರ್ ಆಗೊದಿಲ್ಲ.) ಮತ್ತೆ
ಈಕೆ Mind Master trending center’ ಅಂತ ಬೋರ್ಡ್ ಹಾಕಿ ಮನಸ್ಸಿನ ಬಗ್ಗೆ ಮನಬಂದಂತೆ ಹೇಳಲು ಸುರು ಮಾಡಿದಳು.
ಈ mind ಗೆ ಅವಾರ್ಡ ಬರುವ ಮುಂಚೆ ಸುಬ್ಬಕ್ಕ ಹಳ್ಳಿ ಗೌರಮ್ಮನ ಹಾಗೆ ಅರೆಹುಚ್ಚಿಯಾಗಿದ್ದವಳು ಈಗ ಸ್ವಲ್ಪ ಪ್ರಬುದ್ಧಳಾಗಿ ಮಾನಸಿಕವಾಗಿ ಅಷ್ಟೊಂದು ಬದಲಾಗದಿದ್ದರೂ ದೈಹಿಕವಾಗಿ ತುಂಬ ಬದಲಾಗ ತೊಡಗಿದಳು.
ಯಾರ ಮನಸ್ಸು ಯಾರ ಹತ್ತಿರ ಇದೆ ಯಾರಿಗೆ ತಾನೆ ಗೊತ್ತು ? ” ಅಂತ ಹೇಳಿದರೆ ಪಡ್ಡೆ ಹೈಕಳು ಸುಬ್ಬಕ್ಕಳ ಮೈಂಡ್ ನಲ್ಲಿ ಸೆಟ್ ಆಗಿದೆ ಅಂತಾರೆ ಎನ ಮಾಡಬೇಕು. ತಿಳಿತಾ ಇಲ್ಲ.
ಕನ್ನಡ ಟೀಚರ್ ಆಗಿ ಹಳ್ಳಿ ಗಮಾರನಂತೆ ಇರುತ್ತಿದ್ದ ಇವಳು ಈಗ ತನ್ನ ದೈಹಿಕ ಬದಲಾವಣೆಯಿಂದ ಖಾಸಗಿ ಕಾನ್ವೆಂಟ್ ಶಾಲೆಯ English Teacher ತರಹ ಬದಲಾಗಿ ಬಿಟ್ಟಿದಳು. ಇವಳ ರೂಪ ಲಾವಣ್ಯ ಆ ಹಳ್ಳಿ ಹೈಕಳಿಗೆ ಮತ್ತೆ ಮತ್ತೆ ಆಕರ್ಷಿತಳಾಗಿ ಕಂಡು ಬರುತ್ತಿದ್ದಳು. ಇವಳು ಹಾಕಿದ ಆ Mind treining Center’ ಎಂಬ ಬೋರ್ಡು ಓದಿದ ಜನ ಅವರ ಮೈಂಡ್ ಟ್ರನಿಂಗ್ ಮಾಡಿಕೊಂಡು ಇವಳ ಕ್ಲಾಸ್ ಕೇಳಲು ಬರತೊಡಗಿದರು.
Mind ಅಂದ್ರೆ ‘ಮನಸ್ಸು’ ಈ ಮನಸ್ಸಿನ ಬಗ್ಗೆ ಆದಿ ಆನಾದಿ ಕಾಲದಿಂದಲೂ ಮಹಾನ್ ಪುರುಷರು ಸಾಕಷ್ಟು ತತ್ವ ಸಿದ್ಧಾಂತಗಳನ್ನು ಹೇಳುತ್ತಾ ಬಂದಿದ್ದಾರೆ. ಆದರೆ ಯಾರಿಗೂ ಈ ಮನಸ್ಸಿನ ಆಳ ಅಗಲ ನಿಲುಕಿಲ್ಲ. ಭಗವತ್ ಗೀತೆಯಲ್ಲಿ ಶ್ರೀ ಕೃಷ್ಣ ಈ ಮನಸ್ಸಿನ ಬಗ್ಗೆ ಅರ್ಜುನನಿಗೆ ಪರಿ ಪರಿಯಾಗಿ ಹೇಳುತ್ತಾನೆ. “ದೇಹಕ್ಕೆ ಸಾವಿದೆ ಮನಸ್ಸಿಗೆ ಸಾವಿಲ್ಲ.” ಮನಸ್ಸು ಅನ್ನೊದು ಸಪ್ತ ಕುದುರೆಗಳಿಗೆ ಹೊಲಿಸಿದ್ದಾನೆ.
“ಕಡಿವಾಣ ಇಲ್ಲದ ಕುದುರೆಯ ಮೇಲೇರಿ ಕುಳಿತರೆ ಆ ಕುದುರೆಯೂ ಮೇಲೆ ಕುಳಿತ ಆ ಸವಾರನಿಗೆ ಎಲ್ಲಿಗೆ ಬೇಕಾದರೂ ಅದು ಕರೆದುಕೊಂಡು ಒಯ್ಯಬಹುದು.ಅಥವಾ ಆತನಿಗೆ ತಗ್ಗಿನಲ್ಲಿಯಾದರು ಬಿಳಿಸಬಹುದು. ಹಾಗೆಯೇ ಮನಸ್ಸಿನ ನಿಗ್ರಹ ಮಾಡದೆ ಹೋದರೆ ನಾವು ಹಾಳಾಗುತ್ತೆವೆ. ಮನಸ್ಸು ಹೇಳಿದಂತೆ ನಾವು ಕೇಳಬಾರದು .ನಾವು ಹೇಳಿದಂತೆ ಮನಸ್ಸು ಕೇಳಬೇಕು .ಅಂದರೆ ಬುದ್ದಿಯ ಹಿಡಿತದಿಂದ ಚಂಚಲ ಮನಸ್ಸನ್ನು ನಿಗ್ರಹಿಸಬೇಕು. ಅದಕ್ಕೆ ದೇಹವೆಂಬ ರಥಕ್ಕೆ ಮನಸ್ಸೆಂಬ ಕುದುರೆಯನ್ನು ಕಟ್ಟಿ, ಆತ್ಮವೆಂಬ ಸಾರಥಿಯಿಂದ ಬುದ್ದಿಯೆಂಬ ಕಡಿವಾಣ ಹಾಕಿ ಆ ಚಂಚಲ ಮನಸ್ಸನ್ನು ನಿಗ್ರಹ ಮಾಡಬೇಕು ” ಅಂತ ಶ್ರೀ ಕೃಷ್ಣ ಅರ್ಜುನನಿಗೆ ತುಂಬ ಸಾರಿ ಹೇಳಿದ್ದಾನೆ.
ಮನುಷ್ಯನಲ್ಲಿ ಕಾಮ,ಕ್ರೋಧ, ಲೋಭ,ಮೋಹ,ಮದ,ಮತ್ಸರ,ಹೆಚ್ಚಾದಂತೆ ಅವನ ಮನಸ್ಸು ಚಂಚಲತೆಯಿಂದ ಚಲಿಸಲಾರಂಭಿಸುತ್ತದೆ. ದೇಹಕ್ಕೆ ವಯಸ್ಸಾದರು ಮನಸ್ಸಿಗೆ ವಯಸ್ಸಾಗುವುದಿಲ್ಲ. ಸಾಯುವ ಸಮಯದಲ್ಲಿಯೂ ಆತನಿಗೆ ಅರಿಷಡ್ ವರ್ಗಗಳು ಮುತ್ತಿಗೆ ಹಾಕಿದರೆ ಅವನಲ್ಲಿ ಯೌವನದ ಆಸೆ ಆಕಾಂಕ್ಷೆಗಳು ಮೂಡುತ್ತವೆ. ಸುಂದರವಾದ ಹೆಣ್ಣೊಂದು ಹತ್ತಿರ ಸುಳಿದು ಅವಳ ಸೌಂದರ್ಯ ತಾಕಿದರೆ ಸಾಕು ನೂರು ವರ್ಷದ ಮುದುಕನಿದ್ದರೂ ಅವಳ ಸ್ಪರ್ಶದ ಸುಖ ಬಯಸಿ ಆತ ಜೊಲ್ಲು ಸುರಿಸುತ್ತಾನೆ ” ಅಂತ ಶ್ರೀ ಕೃಷ್ಣ ಮತ್ತೊಂದೆಡೆ ಹೇಳಿದ್ದಾನೆ. ಜೀವನದಲ್ಲಿ ವೈರಾಗ್ಯ ತಾಳಿದರೆ ಮಾತ್ರ ಮನಸ್ಸನ್ನು ನಿಗ್ರಹ ಮಾಡಲು ಸಾಧ್ಯ.
ಸುಬ್ಬಕ್ಕ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಈಗಾಗಲೇ ನಾಕಾರು ವರ್ಷ ಫೇಸ್ ಬುಕ್ ಲೈವ್ ನಲ್ಲಿ ಪ್ರವಚನ ಹೇಳಿದಳು. ಈಗ ಈ mind training ಅಂತ ಬೇರೆ ಸುರು ಮಾಡಿದ್ದಾಳೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಅನಧಿಕೃತ ಕೊಚ್ಚಿಂಗ್ ಸೆಂಟರ್ ನಡೆಸುವವರ ವಿರುದ್ಧ ಈಗಾಗಲೇ ಕೆಲವು ಕಡೆ ಕಡಿವಾಣ ಹಾಕಿದ್ದಾರೆ. ಆದರೆ ಈ ಸುಬ್ಬಕ್ಕಳ Mind Training ಗೆ ಯಾರು ಇಲಾಖೆಯಲ್ಲಿ ಕೇಳೋದಿಲ್ವೇ ?
ವೈರಾಗ್ಯ ಎಂದರೆ ಕಾಮ,ಕ್ರೋದ,ಮೋಹ,ಲೋಭ,ಮದ,ಮತ್ಸರಗಳಿಂದ ದೂರ ಉಳಿದು ಸನ್ಯಾಸವನ್ನು ಸ್ವಿಕರಿಸುವುದೇ ಆಗಿದೆ.
ಈ ಸನ್ಯಾಸವನ್ನು ಸ್ವಿಕರಿಸಿದ ವಿಶ್ವ ಮಿತ್ರನು ದೇವಲೋಕದ ಅಪ್ಸರೆ ಮಿನಾಕೆಯಿಂದ ಚಂಚಲಿತನಾಗಿ ಮನ ನಿಗ್ರಹ ಮಾಡದೇ ಹೆಣ್ಣಿಂದ ಹಾಳಾಗಲಿಲ್ಲವೇ ? ರಾಮಾಯಣದಲ್ಲಿ ರಾವಣ, ಮಹಾಭಾರತದಲ್ಲಿ ದುಶಾಸನ,ಮೊದಲಾದವರು ಹೆಣ್ಣಿಂದ ಹಾಳಾಗಲಿಲ್ಲವೇ ? ಅಷ್ಟೇಯಲ್ಲದೆ ಇತ್ತಿಚೀನ ಚಿತ್ರದುರ್ಗದ ಸ್ವಾಮಿ ಮತ್ತು ಬಿಡದಿಯ ಸ್ವಾಮಿಗಳು ಸನ್ಯಾಸವನ್ನು ತೊಟ್ಟರು ಏನಾಗಿ ಹೋದರು ? ಅನ್ನೊದು ಗೊತ್ತೆ ಇದೆ ಅಲ್ವಾ ?
ಕನ್ನಡದಲ್ಲಿ ‘ಮನಸ್ಸು ಮರ್ಕಟ’ ಎಂಬ ಗಾದೆ ಮಾತೊಂದಿದೆ.ಮನಶಾಸ್ತ್ರಜ್ಞದಲ್ಲಿ ಮನಸ್ಸಿಗೆ ಮೂರು ಭಾಗಗಳಾಗಿ ವಿಂಗಡಿಸಿದ್ದಾರೆ. (ಲುಪ್ತ ಮನಸ್ಸು, ಬಾಹ್ಯ ಮನಸ್ಸು, ಆಂತರಿಕ ಮನಸ್ಸು,)
“ಯಾರ ಮನಸ್ಸು ಯಾರ ಹತ್ತಿರ ಇದೆ ಯಾರಿಗೆ ತಾನೆ ಗೊತ್ತು ? “ ಅಂತ ಹೇಳಿದರೆ ಪಡ್ಡೆ ಹೈಕಳು ಸುಬ್ಬಕ್ಕಳ ಮೈಂಡ್ ನಲ್ಲಿ ಸೆಟ್ ಆಗಿದೆ ಅಂತಾರೆ ಎನ ಮಾಡಬೇಕು. ತಿಳಿತಾ ಇಲ್ಲ.
ಸುಬ್ಬಕ್ಕ ಸರ್ಕಾರಿ ಶಾಲಾ ಶಿಕ್ಷಕಿಯಾಗಿದ್ದು ಈಗಾಗಲೇ ನಾಕಾರು ವರ್ಷ ಫೇಸ್ ಬುಕ್ ಲೈವ್ ನಲ್ಲಿ ಪ್ರವಚನ ಹೇಳಿದಳು. ಈಗ ಈ mind training ಅಂತ ಬೇರೆ ಸುರು ಮಾಡಿದ್ದಾಳೆ.
ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ಅನಧಿಕೃತ ಕೊಚ್ಚಿಂಗ್ ಸೆಂಟರ್ ನಡೆಸುವವರ ವಿರುದ್ಧ ಈಗಾಗಲೇ ಕೆಲವು ಕಡೆ ಕಡಿವಾಣ ಹಾಕಿದ್ದಾರೆ. ಆದರೆ ಈ ಸುಬ್ಬಕ್ಕಳ Mind Training ಗೆ ಯಾರು ಇಲಾಖೆಯಲ್ಲಿ ಕೇಳೋದಿಲ್ವೇ ? ಅಂತ ಒಂದೆಡೆ ಅವಳ ವಿರೋಧಿ ಬಣ ಜಾಗೃತರಾಗಿ ಹೋರಾಟಕ್ಕೆ ಇಳಿಯಲು ಬಹುದು.
ಸರ್ಕಾರಿ ಸೇವಾ ನಿಯಮದ ಪ್ರಕಾರ ಸರ್ಕಾರಿ ನೌಕರರು ಇಲಾಖೆಯ ಅನುಮತಿ ಇಲ್ಲದೇ ಇವೆಲ್ಲ ಮಾಡೊದು ತಪ್ಪು.
“ಏನು ! ನಮ್ಮ ಸುಬ್ಬಕ್ಕ ಪ್ರವಚನ ಹೇಳೊದು ಮತ್ತ ಮೈಂಡ್ ಟ್ರೇನಿಂಗ್ ಕೋಡೊದೆ ತಪ್ಪು ಅಂತಿರಾ ? ಆ ಇನ್ನೊಂದು ಕಾಲೇಜಿನಾಗ ಅಕ್ಕ ಇಲ್ವೇನು ? ಅವಳು ಒಂದು ಮಠಕ್ಕೆ ಪೀಠಾಧ್ಯಕ್ಷೇ ಅಂತೆ ಕಾಲೇಜಿನಲ್ಲಿ ಪಾಠ ಮಾಡೊದು ಬಿಟ್ಟು ತಾಲೂಕು ಒಂದರಲ್ಲಿ ಶರಣರ ಪೀಠಕ್ಕೆ ಅಧ್ಯಕ್ಷ ಆಗಿಲ್ವಾ ? ಮತ್ತೊಬ್ಬ ಶಾಲಿ ಮಾಸ್ತರ್ ಚೀಟಿ ಚಪಾಟಿ ಅಂತ ಭವಿಷ್ಯ ಹೇಳ್ತಾ ಜನರಿಗೆ ಮೋಸ ಮಾಡ್ತಿದ್ದಾರೆ”
ಅಂತ ಸುಬ್ಬಕ್ಕಳ ಕಡೆಯವರು ವಾದ ಮಾಡುವವರಿದ್ದಾರೆ.
ಇರಲಿ.ನಾನು ಏನೋ ! ಹೇಳೊದು ಬಿಟ್ಟು ಇಲ್ಲಿ ಏನೇನೋ ! ಹೇಳಲು ಸುರು ಮಾಡಿದ್ದೇನೆ.
ಮನಸ್ಸು ತನ್ನ ಹಿಡಿತದಲ್ಲಿರಬೇಕಾದರೆ.
‘ಕಚ್ಚೆ ಕೈ ಬಾಯಿಗಳು
ಇಚ್ಚೆಯಲ್ಲಿ ಇದ್ದಿಹರೆ
ಅಚ್ಚುತನಪ್ಪ ಅಜನಪ್ಪ
ಲೋಕದಲ್ಲಿ ನಿಶ್ಚಿಂತನಪ್ಪ ಸರ್ವಜ್ಞ. ” ಅಂತ ಸರ್ವಜ್ಞ ಕವಿ ಹೇಳಿದ್ದಾನೆ. ಅಷ್ಟೇಯಲ್ಲದೆ ಆತ ಮುಂದುವರೆದು
“ಕಣ್ಣಿಂದಲೇ ಪುಣ್ಯ
ಕಣ್ಣಿಂದಲೇ ಪಾಪ !
ಕಣ್ಣಿಂದಿಹುದು ಇಹಕ್ಕೂ ಪರಕ್ಕೂ
ಕಣ್ಣೇ ಕಾರಣವು ಸರ್ವಜ್ಞ “ ಅಂತ ಹೇಳಿದ್ದಾನೆ.
ಹೀಗೆ ಮಾನವ ಪಂಚ್ಚೇಂದ್ರಿಯಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡರು ‘ಮನಸ್ಸು’ ಇದೆಯಲ್ಲ ಅದು ಒಮ್ಮೊಮ್ಮೆ ಸುತಾರಾಂ ಕೇಳುವುದು. ಅದು ಎಲ್ಲೇಲ್ಲೋ ! ಓಡಾಡುತ್ತದೆ. ಮನಸ್ಸು ಹೇಳಿದಂತೆ ಕೇಳಬಾರದು .ನಾವು (ಆತ್ಮ) ಹೇಳಿದಂತೆ ಮನಸ್ಸು ಕೇಳಬೇಕು. ಮನಸ್ಸಿನ ಗುಲಾಮನಾಗುವುದು ಬೇಡ.ಆತ್ಮದ ಆಧಿನದಲ್ಲಿ ಮನಸ್ಸು ಇರಬೇಕು ಅಂದಾಗ ಮಾತ್ರ mind ಸ್ಥಿರವಾಗಿ ಇರುತ್ತದೆ. ಇದಕ್ಕೆಲ್ಲ ಟ್ರೈನಿಂಗ್ ಬೇಕಾಗಿಲ್ಲ. ಸ್ವಯಂ ಆತ್ಮ ಸಿದ್ದಿ ಮಾಡಿಕೊಳ್ಳಬೇಕಾಗಿದೆ.
” ಸ್ವಯಂ ಪ್ರಕಾಶಿತನಾಗು” ಅಂತ ಬುದ್ಧ ಹೇಳಿದ್ದಾನೆ. ‘ಅರಿವೇ ಗುರು‘ ಅಂತ ಅಣ್ಣ ಬಸವಣ್ಣ ಹೇಳಿದ್ದಾನೆ.
“ತನ್ನ ತಾನು ಅರಿತ ಮೇಲೆ
ಇನ್ನೇನ್ , ಇನ್ನೇನೋ ! “
ಅಂತ ಕಡಕೋಳ ಮಡಿವಾಳಪ್ಪನವರು ಹೇಳಿರುವಾಗ ಈ ಪೆದ್ದ ಮುಂಡೆ ಸುಬ್ಬಕ್ಕಳಿಗೆ ಅರಿವಾಗಬಾರದೆ ? ಶಾಲೆಲಿ ಪಾಠ ಮಾಡಿದಷ್ಟು ಸರಳ ಅಲ್ಲ mind ಕಂಟ್ರೋಲ್ ಮಾಡೊದು. ಅದು ಮನಸ್ಸಿನ ಆಳದಿಂದ ಬರಬೇಕು. ಯಾರಾದರು ಹೇಳಿ ಕಲಿಸಿದರಿಂದ ಮನಸ್ಸು ಅಷ್ಟು ಸಲೀಸಾಗಿ ಕಲಿಯುವುದಿಲ್ಲ.
ಮನಸ್ಸು ಯಾವಾಗ ಹೇಗೆ ಇರುತ್ತದೋ ! ಯಾರಿಗೆ ತಾನೆ ಗೊತ್ತು ? ಸುಖ- ದುಃಖ, ಆವೇಶ, ಕ್ರೋಧ,ಮೋಹ ಮೊದಲಾದ ಸನ್ನಿವೇಶದಲ್ಲಿ ಮನಸ್ಸಿನ ಭಾವನೆಗಳು ಬದಲಾಗುತ್ತಿರುತ್ತವೆ. ಜೀವನದ ಘಟ್ಟಗಳಲ್ಲಿಯೂ ಆ ಮನಸ್ಸು ಬದಲಾವಣೆಗೆ ಒಳಗೊಂಡಿರುತ್ತದೆ ಅನ್ನೊದು ತಿಳಿಯದ ಸುಬ್ಬಕ್ಕ ಮನಸ್ಸಿನ ಬಗ್ಗೆ ಅರೇ – ಬರೇ ತಿಳಿದು ಕೊಂಡು ಮೈಂಡ್ ಮಾಸ್ತರ್ ಅಂತ ಹೇಳಿ ಮನಶಾಸ್ತ್ರಜ್ಞರಿಗೆ ‘ ಚಾಲೆಂಜ್ ‘ ಎನ್ನುವಂತೆ ಒಂದು ಕೋಣೆಯಲ್ಲಿ ಟ್ರೇನಿಂಗ್ ಅಂತ ಕೊಡ್ತಿದ್ದಾಳೆ ಅಂದಮ್ಯಾಲೆ ಇಷ್ಟು ಮಾತ್ರ ಖರೆ.
ಸುಬ್ಬಕ್ಕಳ ರೂಪ ಯೌವನ ನೋಡಿದ ಯಾವನೇ ಹಲ್ಕ ನನ್ ಮಗಾ ಆದ್ರೂ ಅವಳ ಮೈಂಡ್ ಟ್ರೈನಿಂಗ್ ಸೆಂಟರ್ ಗೆ ಬಂದರೆ ಅವನ ಮೈಂಡ್ ಟರ್ನಿಂಗ್ (ತಿರುವು) ಆಗೊದಂತು ಗ್ಯಾರಂಟಿ.
– ಮಚ್ಚೇಂದ್ರ ಪಿ ಅಣಕಲ್.
(ವಿಶೇಷ ಸೂಚನೆ: ಈ ಲಲಿತ ಪ್ರಬಂಧದಲ್ಲಿ ಬರುವ ಪಾತ್ರಗಳು ಮತ್ತು ಸನ್ನಿವೇಶಗಳು ಕಾಲ್ಪನಿಕವಾಗಿವೆ.)
ಲೇಖಕರ ಪರಿಚಯ:
ಸಾಹಿತಿ ಮಚ್ಚೇಂದ್ರ ಪಿ ಅಣಕಲ್’ ರವರು ಮೂಲತ: ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದವರಾಗಿದ್ದು, ಸದ್ಯ ಕಲಬುರಗಿ ನಿವಾಸಿ. ಯಾದಗಿರಿ ಜಿಲ್ಲೆಯ ಮಾವಿನಹಳ್ಳಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪತ್ರಿಕೋದ್ಯಮ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ಎಂ.ಇಡಿ ಪದವಿ ಪಡೆದಿದ್ದಾರೆ.
ಸಂಯುಕ್ತ ಕರ್ನಾಟಕ ಪತ್ರಿಕೆಯ ವರದಿಗಾರ ಹಾಗೂ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸಿದ ಅನುಭವವಿದೆ. 2002 ರಲ್ಲಿ ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಸೌರಭದ ತಿಂಗಳ ಕಥಾ ಸ್ಪರ್ಧೆಯಲ್ಲಿ ಇವರ ‘ಲಾಟರಿ’ಕತೆ ಬಹುಮಾನ ಪಡೆದಿದೆ . 2010 ರಲ್ಲಿ ಅಮೇರಿಕಾದ ನ್ಯೂಜೆರ್ಸಿಯಲ್ಲಿ ನಡೆದ 6ನೇ ಅಕ್ಕ ವಿಶ್ವ ಕಥಾ ಸ್ಪರ್ಧೆಯಲ್ಲಿ ‘ಡಾಂಬಾರು ದಂಧೆ’ ಕತೆ ಬಹುಮಾನ ಪಡೆದು ‘ದೀಪಾತೊರಿದೆಡೆಗೆ’ ಕಥಾ ಸಂಕಲನದಲ್ಲಿ ಪ್ರಕಟಗೊಂಡಿದೆ. ಇವರು ಬರೆದ ಕೃತಿಗಳು : ಬದುಕುತ್ತೇನೆ ಕತ್ತಲೆ ಮೊಟ್ಟೆಯೊಡೆದು ( ಕವನಸಂಕಲನ), ಜ್ಞಾನ ಸೂರ್ಯ ( ಸಂಪಾದಿತ ಕಾವ್ಯ ), ಜನಪದ ವೈದ್ಯರ ಕೈಪಿಡಿ ( ಸಂಪಾದನೆ), ಲಾಟರಿ , ಮೊದಲ ಗಿರಾಕಿ, ಹಗಲುಗಳ್ಳರು ( ಕಥಾಸಂಕಲನ) ಬೀದರ ಜಿಲ್ಲಾ ಸಾಹಿತಿಗಳ ಪರಿಚಯ (ಲೇಖನ ಸಂಕಲನ) ಇತ್ಯಾದಿ ಪುಸ್ತಕಗಳು ಪ್ರಕಟಿಸಿದ್ದಾರೆ .ಇವರಿಗೆ ರಾಜ್ಯ ಮಟ್ಟದ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಟಿವಿ ಮಾಧ್ಯಮ ಮತ್ತು ಯುಟ್ಯೂಬ್ ಚಾನೆಲ್ ಳಲ್ಲಿ ಇಂಥ
ಅನೇಕ ಮೈಂಡ್ ಮಾಸ್ಟರ್ ಗಳು ಹೆಚ್ಚಾಗುತ್ತಿದ್ದು ಸತ್ಯ
ಸುಳ್ಳುಗಳ ಸವಾಲುಗಳು ಹೆಚ್ಚುತ್ತಿವೆ. ಅಂಧಕಾರದಲ್ಲಿ ತೇಲುವ
ಅಂದ ಭಕ್ತರು ಯಾವ ದಿಕ್ಕಿನಲ್ಲಿ ಸಾಗುತ್ತಾರೆ ಎನ್ನುವುದನ್ನು
ಹೇಳಲು ಸಾಧ್ಯವಿಲ್ಲ. ಏನೇ ಆಗಲಿ ನಮ್ಮ ಮನಸ್ಸು
ಹಿಡಿತದಲ್ಲಿದ್ದರೆ ನಮ್ಮ ಮಾರ್ಗ ಸುಂದರವಾಗಿರುತ್ತದೆ.ಏನೇ
ಆಗಲಿ ಬುದ್ಧಿವಂತರ ಮಾರ್ಗದರ್ಶನ ಇಂದಿನ ಯುವಕರಿಗೆ ಅತಿ
ಅವಶ್ಯಕವಾಗಿದೆ.ಈ ಲಲಿತ ಪ್ರಬಂಧ ತುಂಬಾ ಸುಂದರವಾಗಿ
ಮೂಡಿಬಂದಿದೆ .
– ದೇವೇಂದ್ರ ಕಟ್ಟಿಮನಿ ಕಮಲಾಪುರ ಜಿ.ಕಲಬುರಗಿ
ತುಂಬಾ ಚೆನ್ನಾಗಿದೆ ಸರ್ ನೀವು ಬರೆದ ಪ್ರಬಂಧ 🙏🙏👌👌
ಇತ್ತೀಚೆಗೆ ಈ ಸುಬ್ಬಕ್ಕಳಂತ ಮೈಂಡ್ಥ ಮಾಸ್ಟರ್ಗಳು ತುಂಬಾ ಹೆಚ್ಚಾಗಿರುವುದ್ದು ಕಂಡುಬರುತ್ತಿದೆ. TV ಮಾಧ್ಯಮಗಳಿ, ಪತ್ರಿಕೆಗಳನ್ನೆಲ್ಲ ಇವರದೆ ಕಾರುಬಾರು.
ಅಷ್ಟೇ ಅಲ್ಲದೆ ಸಾಹಿತ್ಯದ ವೇದಿಕೆಗಳ ಮೇಲೆಯೂ ಇವರೆ ಕಂಡುಬರುತ್ತಿದ್ದಾರೆ.
ಲೇಖನ ತುಂಬ ಚೆನ್ನಾಗಿ ಮೂಡಿ ಬಂದಿದೆ ಎಲ್ಲಿಯೂ ಬೇಜಾರಾಗದಂತೆ ಕೊನೆಯವರೆಗೂ ಓದಿಸಿಕೊಂಡು ಹೋಯಿತು.
👌