ಮತದಾನ
ಮತ್ತೆ ಬಂದಿದೆ ಚುನಾವಣೆ
ಬೇಕು ಪ್ರತಿ ಮತ ಚಲಾವಣೆ
ಆಗಲು ದೇಶದ ಬದಲಾವಣೆ
ಮತದ ಅಧಿಕಾರ ದಾನವಲ್ಲ
ನವ ಭಾರತದ ನಿರ್ಮಾಣ
ಮತದಾನ ನಮ್ಮ ಹೊಣೆ
ಮಾಡೋಣ ದೇಶದ ರಕ್ಷಣೆ
ನಿಲ್ಲಲಿ ಸಾಮಾನ್ಯರ ಶೋಷಣೆ
ಮತ ಹಾಕೇ ಹಾಕುತ್ತೇವೆ
ಸತ್ಯ ಆದರ್ಶ ಪ್ರಣಾಳಿಕೆಗೆ
ಕರ್ತವ್ಯನಿರತ ಪಾಲಕರಿಗೆ
ನಿಷ್ಠಾವಂತ ಸರಕಾರಕ್ಕೆ
ಪ್ರತಿ ನಾಗರಿಕನ ಹಕ್ಕು
ಎಲ್ಲರೂ ನಿಭಾಯಿಸಲೇಬೇಕು
ನಮ್ಮ ಹಕ್ಕು ಬಾಧ್ಯತೆಗಳಿಗೆ
ಎತ್ತರದ ಧ್ವನಿ ಎತ್ತಲೇಬೇಕು
ಸುಶಿಕ್ಷಿತ ಸುಸಂಸ್ಕೃತರಿಗೆ
ಭವ್ಯ ಭಾರತದ ಅಭಿವೃದ್ಧಿಗೆ
ಹೃದಯ ಅರ್ಪಿಸುವವರಿಗೆ
ಮನಸ್ಸಿನಿಂದ ಮತ ಹಾಕುತ್ತೇವೆ
ನನ್ನ ಮತ ಅತ್ಯಂತ ಅಮೂಲ್ಯ
ಭೃಷ್ಟಾಚಾರ ಮುಕ್ತಗೊಳಿಸಲು
ಅತ್ಯಾಚಾರ ಅನಾಚಾರ ಸುಳ್ಳು
ಮೋಸ ವಂಚನೆ ತಡೆಯಲು
ಮಾರಿಕೊಳ್ಳಬೇಡಿ ಮತಗಳ
ಮಾಡಬೇಡಿ ಜಾತಿಭೇದ
ಪಕ್ಷಾಂತರಿಗಳ ಧಿಕ್ಕರಿಸಿರಿ
ಮಂತ್ರಿ ಕುತಂತ್ರ ಅರಿಯಿರಿ
ಮಾಡಬೇಡಿ ರಕ್ತ ರಾಜಕಾರಣ
ಹನಿರಕ್ತದಷ್ಟೇ ಮತವೂ ಮುಖ್ಯ
ಜಾಗೃತರಾಗಿರಿ ದೇಶದ ವಿಕಾಸಕೆ
ಪ್ರಜಾಪ್ರಭುತ್ವದ ಪ್ರಜೆಗಳೆ
– ಅನ್ನಪೂರ್ಣ ಸಕ್ರೋಜಿ ಪುಣೆ