ಕುಲ ಕುಲ ಕುಲ ವೆಂದು ಹೊಡೆದಾಡದಿರಿ.
“ಕುಲ ಕುಲ ಕುಲ ವೆಂದು ಹೊಡೆದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ. ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ ಹರಿಮಯ ವೆಲ್ಲವೆನುತ ತಿಳಿದು ಸಿರಿಕಾಗಿ ನೆಲೆಯಾಗಿ ಕೇಶವ ರಾಯನ ಚರಣ ಕಮಲ ಕೀರ್ತಿ ಸುವನೆಕುಲಜ.”
ಇದು ದಾಸರ ಪದಗಳಲ್ಲಿ ಶ್ರೇಷ್ಠ ಕೀರ್ತನೆ ಇದನ್ನು ರಚಿಸಿದವರು ಭಕ್ತ ಕನಕದಾಸರು. ಇವರು ಹಾವೇರಿ ಜಿಲ್ಲೆಯ ಈಗಿನ ಶಿಗ್ಗಾವಿ ತಾಲೂಕಿನ ಬಾಡ ಎಂಬ ಗ್ರಾಮದಲ್ಲಿ ಜನಿಸಿದರು. ಇವರ ತಾಯಿ ಬಚ್ಚಮ್ಮ ಧಾರ್ಮಿಕತೆಯಲ್ಲಿ ನಂಬಿಕೆ ಉಳ್ಳವರು ಆಗಿದ್ದರು ಇವರ ತಂದೆ ಬೀರಪ್ಪ ನಾಯಕ ವಿಜಯನಗರ ಸಾಮ್ರಾಜ್ಯದ ಬಂಕಾಪುರದಲ್ಲಿ ದಂಡನಾಯಕರಾಗಿದ್ದರು. ಕನಕದಾಸರು 1508 ರಿಂದ 1608ರ ಕಾಲದವರು ಇವರು ತಿರುಪತಿ ತಿಮ್ಮಪ್ಪನ ಆಶೀರ್ವಾದದಿಂದ ಹುಟ್ಟಿದ್ದರಿಂದ ಇವರಿಗೆ ತಿಮ್ಮಪ್ಪ ನಾಯಕ ಎಂದು ಹೆಸರಿಟ್ಟಿದ್ದರು ಇವರು ಕರ್ನಾಟಕದಲ್ಲಿ 16ನೇ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ಇವರು ಬಾಲ್ಯದಲ್ಲಿಯೇ ವೀರ ಶೂರರಾಗಿದ್ದರು ಇವರ ತಾಯಿಗೆ ಆಟ ಆಡಿ ಬರುತ್ತೇನೆ ಎಂದು ಹೇಳಿ
ಕಾಡಿಗೆ ಹೋಗುತ್ತಿದ್ದರಂತೆ. ಗವಿಯಲ್ಲಿ ಮಲಗಿರುವ ಹುಲಿಯನ್ನು ಎಬ್ಬಿಸಿ ನಿರಾಯುಧರಾಗಿ ಸೆಣಸಾ ಡುತ್ತಿದ್ದರು.
ತಿಮ್ಮಪ್ಪ ನಾಯಕರು ಒಮ್ಮೆ ಹೊಲದಲ್ಲಿ ಕೆಲಸ ಮಾಡುವಾಗ ಇವರಿಗೆ ಅಪಾರವಾದ ಧನ ಕನಕ ನಗ ನಾಣ್ಯ ವಜ್ರ ವೈಡೂರ್ಯ ದೊರಕುತ್ತದೆ.
ಅವರು ಅದನ್ನು ಸ್ವಂತಕ್ಕೆ ಉಪಯೋಗಿಸದೆ ಬಡ ಭಕ್ತರಿಗೆ ಹಂಚಿ ವಿಜಯನಗರ ಸಾಮ್ರಾಜ್ಯಕ್ಕೆ ಅರ್ಪಿಸಿ ದಾನ ಮಾಡುತ್ತಾರೆ ಅಂದಿನಿಂದ ಅವರಿಗೆ ಕನಕನಾಯಕ ಎಂದು ಹೆಸರಾಯಿತು.
ಇವರ ತಂದೆ ಬೀರಪ್ಪ ನಾಯಕರ ದಂಡ ನಾಯಕರಾಗಿರುತ್ತಾರೆ.
ತಂದೆಯ ಸ್ವರ್ಗಸ್ಥರಾದ ನಂತರ ಅರಸರ ಸೇನೆಯನ್ನು ಸೇರಿಕೊಳ್ಳುತ್ತಾರೆ. ಹಲವು ಸಮರಗಳಲ್ಲಿ ಭಾಗವಹಿಸಿ, ವೀರಯೋಧ ಎಂಬ ಪ್ರಶಸ್ತಿಗೆ ಪಾತ್ರರಾದರು ತದನಂತರ ಒಂದು ಯುದ್ಧದಲ್ಲಿ ಸೋಲನ್ನು ಅನುಭವಿಸುತ್ತಾರೆ ಯುದ್ಧದಲ್ಲಿ ಸಾವು- ನೋವುಗಳನ್ನು ಕಂಡು ಮನನೊಂದು ದೇವರನ್ನು ಪ್ರಾರ್ಥಿಸಿದಾಗ ಅವರು ಗುಣಮುಖರಾಗ್ತಾರೆ ಆಗ ಅವರಿಗೆ ಮನಸ್ಸಿಗೆ ಬೇಸರವಾಗುತ್ತೆ. ಅಂದಿನಿಂದ ಅವರು ವೈರಾಗ್ಯತಾಳ್ತಾರೆ.
ಒಮ್ಮೆ ಕನಸಿನಲ್ಲಿ ಕೃಷ್ಣನು ಬಂದು ನನ್ನ ದಾಸನಾಗು ಎಂದು ಹೇಳಿದಾಗ ಕನಕ ಅಂದಿನಿಂದ ಅವರು ಕನಕದಾಸರಾಗ್ತಾರೆ.
ಹೀಗೆ ಒಬ್ಬ ವೀರಯೋಧ ಧೈವೀಭಕ್ತನಾಗಿ ಮಾರ್ಪಟ್ಟರು
ಮುಂದೆ ವಿಜಯನಗರದ ರಾಜಗುರು ತಿರುಮಲೆ ಆಚಾರ್ಯ ಅವರ ಹತ್ತಿರ ವೈಷ್ಣವ ದೀಕ್ಷೆಯನ್ನು ಪಡೆದುಕೊಳ್ಳುತ್ತಾರೆ. ವ್ಯಾಸರಾಯ ಸ್ವಾಮಿಗಳ ಶಿಷ್ಯರಾಗಿ ವೇದಾಂತ ರಹಸ್ಯಗಳನ್ನು ತಿಳಿದುಕೊಳ್ಳುತ್ತಾರೆ. ಅವರಿಂದ ದಾಸ ದೀಕ್ಷೆ ಪಡೆದು ಹರಿದಾಸರಾಗುತ್ತಾರೆ ಅಲ್ಲಿಯೇ ಇದ್ದು ನೂರಾರು ದೇವರ ನಾಮಗಳನ್ನು ರಚಿಸುತ್ತಾರೆ. ಇವರು ಮಹತ್ವ ಪ್ರಭಾವಕ್ಕೆ ಒಳಗಾದ ಭಾಗವತ ದೃಷ್ಟಿಯ ಕವಿ ಕೀರ್ತನಕಾರ.
ಕನಕದಾಸರು ಸಾಮಾಜಿಕ ದಿಂದ ಬಂದು ದಾಸ ದೀಕ್ಷೆಯನ್ನು ಪಡೆದು ಉತ್ತಮ ಕೃತಿಗಳನ್ನು ರಚಿಸಿ
ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ಕೊಟ್ಟರು.
ಇವರ ಅಂಕಿತನಾಮ ಆದಿಕೇಶವ.
ಕೀರ್ತನೆಗಳನ್ನು ತತ್ವ ಗರ್ಭಿತವಾದ ಮುಂಡಿಗೆಗಳನ್ನು ರಚಿಸಿದರು ಅನೇಕ ಕೃತಿಗಳನ್ನು ರಚಿಸಿದರು.
ಇವರ ಕೃತಿಗಳು ಸಾಧಾರಣವಾಗಿರಲಿಲ್ಲ ಅವುಗಳಲ್ಲಿ ಮೌಡ್ಯ ಕಂದಾಚಾರ ಪೊಳ್ಳು ನಂಬಿಕೆ ವರ್ಣ ವ್ಯವಸ್ಥೆಯನ್ನು ಖಂಡಿಸುವುದಲ್ಲದೆ ದೈವ ಭಕ್ತ, ಜೀವನ ದರ್ಶನ, ಸಮಾಜ ವಿಮರ್ಶೆ, ಲೋಕಾನ್ ಭವಗಳು ಕಾವ್ಯನಾತ್ಮಕವಾಗಿ ಹೊರಹೊಮ್ಮಿವೆ. ಕನಕದಾಸರ ಕಾವ್ಯಗಳಲ್ಲಿ ಮೋಹನ ತರಂಗಿಣಿ, ಸಾಂಗತ್ಯ ಗ್ರಂಥ ಭಾರತ,
ಭಾಗವತ ಗಳಲ್ಲಿ ಬರುವ ಉಷಾ ಅನಿರುದ್ಧ ಪ್ರಸಂಗ,
ಕೃಷ್ಣ ಬಾಣಸುರ ಯುದ್ಧ,
ಶಂಭರಾಸುರವದೇ. ಕಾವ್ಯದ ವಸ್ತು. ವಸ್ತು ಪೌರಾಣಿಕವಾದರೂ ಕಾವ್ಯದಲ್ಲಿ ಅಲ್ಲಲ್ಲಿ ಸಮಕಾಲೀನ ಜೀವನ ವರ್ಣನೆ ಇದೆ.
ಈ ಕಾವ್ಯವನ್ನು ಕೃಷ್ಣ ಚರಿತ್ರೆ ಎಂದು ಕರೆಯಲಾಗಿದೆ.
ಇವರ ಕೃತಿಯಲ್ಲಿ ಇನ್ನೊಂದು ಮಹಾಕಾವ್ಯವೆಂದರೆ
ನಳಚರಿತ್ರೆ…..
ಇದು ಅತ್ಯಂತ ರಮ್ಯವಾದ ಒಂದು ಕಥನ ಕಾವ್ಯವಾಗಿ ಮಹಾಭಾರತ ಕಥೆಯನ್ನು ಮೂಲವಾಗಿ ಹೊಂದಿರುವ ಭಾಮಿನಿ ಷಟ್ಪದಿಯಲ್ಲಿ ಬರೆದಿರುವ ಕೃತಿ ಪಾತ್ರ ರಚನೆ.
ಸ್ಪಷ್ಟ ರಸಪೋಷಣೆ ಚೆನ್ನಾಗಿದೆ ರಮ್ಯ ಮಿಶ್ರಣವುಳ್ಳ ಭಾಷೆ ಸರಳವಾಗಿದೆ ಮೋಹಕವಾಗಿದೆ.
ಹರಿಭಕ್ತಸಾರ,…
ಕೃತಿಯು ಭಾಮಿನಿ ಷಟ್ಪದಿಯಲ್ಲಿದೆ ನೀತಿ ತತ್ವಗಳು ಬೆರೆತಿರುವದಾದರೂ ಇದು ಪ್ರಧಾನವಾಗಿ ಭಕ್ತಿ ಕಾವ್ಯ.
ರಾಮಧ್ಯಾನ ಚರಿತ್ರೆ…
ಇದು ಒಂದು ಕಂಡ ಕಾವ್ಯವಾಗಿ ಭಕ್ತ ಮತ್ತು ರಾಗಿ ತಮ್ಮಲ್ಲಿ ಯಾರು ಹೆಚ್ಚು ಎಂಬ ವಿವಾದ ಉಂಟಾಗಿ ಶ್ರೀರಾಮನೆದುರು ರಾಗಿಯೇ ವಿಜಯಿ ಯಾಯಿತು. ಶ್ರೀರಾಮ ಅದಕ್ಕೆ ರಾಘವ ಎಂದು ಹೆಸರು ಕೊಟ್ಟನಂತೆ ಹೀಗಾಗಿ ರಾಮಧ್ಯಾನವಾಯಿತು
ದೇವರು ಬಡವರ ಭಕ್ತರ ಪಕ್ಷಪಾತಿ ಎಂಬ ಮನೋಭಾವ ಈ ಕಾವ್ಯದಲ್ಲಿದೆ.
ಕನಕದಾಸರ ಕವಿತಾ ಶಕ್ತಿ ಸಂಪೂರ್ಣವಾಗಿ ಅರಳಿರುವುದು ಅವರ ಕೀರ್ತನೆಗಳಲ್ಲಿ. ವಿಚಾರ ಸ್ವಾತಂತ್ರ್ಯದಲ್ಲಿ ಕವಿತಾ ಶಕ್ತಿಯಲ್ಲಿ ಇವರ ಪ್ರಭಾವಶಾಲಿ ಅಂತರಂಗದ ಆಳವನ್ನು ಭಕ್ತಿ ನಿರ್ಭತೆಯನ್ನು ತಿಳಿಸುವ ಕೀರ್ತನೆಗಳನ್ನು ನುಡಿಸಿ ಮೆರಗು ನೀಡುವ ಹಿರಿಯ ಭಾವಗೀತೆಗಳಾಗಿವೆ ಸಂಗೀತದ ಪರಿಚಯ ಪ್ರಪಂಚಾನುಭಾವ ಅವರ ರಚನೆಗಳಲ್ಲಿ ಎದ್ದು ಕಾಣುವ ಅಂಶಗಳು ಸಹಜ ಪ್ರತಿಭೆ, ಕಲ್ಪನೆ. ಭಾಷೆ ಪ್ರಭುತ್ವಗಳಿಂದ ಕನಕದಾಸರು ಶ್ರೇಷ್ಠ ಕವಿಯಾಗಿ ಬೆಳಗಿದ್ದಾರೆ. ಸತ್ಯ ಹಾಗೂ ರಚನೆಯ ದೃಷ್ಟಿಯಿಂದ ಅದು ಕನ್ನಡ
ಸಾರಸ್ವತ ಸಂಪತ್ತನ್ನು ಹೆಚ್ಚಿಸಿವೆ
. ಉಡುಪಿಯಲ್ಲಿ ಶ್ರೀಕೃಷ್ಣನ ದರ್ಶನಕ್ಕೆಂದು ಹೋಗಿ ಅಲ್ಲಿ ಭಕ್ತಿಯಿಂದ ಹಾಡುತ್ತಿರುತ್ತಾರೆ. ಆದರೆ ಅಲ್ಲಿರುವ ಬ್ರಾಹ್ಮಣೋತ್ತಮರು ಇವರನ್ನು ದೇವಸ್ಥಾನದ ಒಳಗೆ ಬಿಡಲು ನಿರಾಕರಿಸುತ್ತಾರೆ. ಆಗ ಕನಕದಾಸರು ದೇವಸ್ಥಾನದ ಹಿಂಬದಿಯಲ್ಲಿ ಕುಳಿತು ಭಕ್ತಿಯಿಂದ ಅಂತರಾಳದಿಂದ ಕೃಷ್ಣನನ್ನು
ವಿನಯದಿಂದ ಪ್ರಾರ್ಥಿಸುತ್ತಾರೆ
‘ ಬಾಗಿಲನು ತೆರೆದು ಸೇವೆಯನ್ನು ಕುಡು ಹರಿಯೇ ” ಎಂದು ಭಕ್ತಿಯಿಂದ ಹಾಡುತ್ತಾರೆ.
ಹಾಡಿದಾಗ ಗೋಡೆಯ ಬಾಗಿಲು ಒಡೆದು ಕೃಷ್ಣನು ದರ್ಶನ ಕೊಡುತ್ತಾನೆ
ಈಗಲೂ ಕೂಡ ನಾವು ಕನಕನ ಕಿಂಡಿಯಿಂದಲೇ ಕೃಷ್ಣನ ದರ್ಶನವನ್ನು ಪಡೆಯಬಹು ದಾಗಿದೆ.
ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನ ಕಾರರು
36 ಕೀರ್ತನೆಗಳನ್ನು ರಚಿಸಿದ್ದಾರೆ
250ಕ್ಕೂ ಹೆಚ್ಚು ದಾಸರದಲ್ಲಿ ಇಬ್ಬರು ದಾಸರು ಶ್ರೇಷ್ಠ ದಾಸರು
ಕನಕದಾಸರು ಮತ್ತು ಪುರಂದರದಾಸರು
ಇವರಿಬ್ಬರೂ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಿದ್ದಾರೆ.
– ಸುಶೀಲ ಬಸವರಾಜ್ ಹಿರೇಮಠ. ಪ್ರಾಧ್ಯಾಪಕರು ದಾವಣಗೆರೆ