Oplus_131072

ಯಾದಗಿರಿ ಜಿಲ್ಲೆಯಾಗಿ 14 ವರ್ಷವಾದರು ಎಕ್ಸ್‌ ಪ್ರೆಸ್ ರೈಲುಗಳು ಯಾಕೆ ನಿಲ್ಲುತ್ತಿಲ್ಲ ?

 

ಮಚ್ಚೇಂದ್ರ ಪಿ ಅಣಕಲ್.

 

 “ಯಾದಗಿರಿ ಜಿಲ್ಲಾ ಕೇಂದ್ರವಾಗಿ 14 ವರ್ಷಗಳು ಗತಿಸಿದರೂ ಕೂಡ ಸುಮಾರು 13 ಎಕ್ಸ್‌ ಪ್ರೆಸ್ ರೈಲುಗಳು ನಿಲ್ಲದಿರುವುದು ಯಾದಗಿರಿ ಜನತೆಗೆ ರೈಲ್ವೆ ಇಲಾಖೆ ಕಡೆಗಣಿಸುತ್ತಿರುವುದು ದುರದುಷ್ಟಕರ ಸಂಗತಿಯಾಗಿದೆ.

 

ಉಮೇಶ ಕೆ.ಮುದ್ನಾಳ. ಯಾದಗಿರಿ

” ಕಲಬುರಗಿ ಜಿಲ್ಲೆಯನ್ನು ವಿಭಜಿಸಿ ಯಾದಗಿರಿ ಶಹಾಪೂರ ಸುರಪುರ  ಎಂಬ ಈ ಮೂರು ತಾಲೂಕುಗಳನ್ನು  ಸೇರಿಸಿ ಕರ್ನಾಟಕ ಸರ್ಕಾರ ಯಾದಗಿರಿ ಎಂಬ ನೂತನ ಜಿಲ್ಲಾ ಕೇಂದ್ರವಾಗಿ ಮಾಡಿ 14 ವರ್ಷಗಳು ಗತಿಸಿದರೂ ಕೂಡ ಇಂದಿಗೂ ಸುಮಾರು 13 ಎಕ್ಸ್‌ ಪ್ರೆಸ್ ರೈಲುಗಳು ನಿಲ್ಲದಿರುವುದು ದುರದುಷ್ಟಕರ ಸಂಗತಿಯಾಗಿದೆ. “.  ಎಂದು ಕರ್ನಾಟಕ ಪ್ರದೇಶ ಕೋಲಿ ಸಮಾಜ ರಾಜ್ಯ ಸಂಘಟನಾ ಕಾರ್ಯದರ್ಶಿ ಸಾಮಾಜಿಕ ಹೋರಾಟಗಾರ ಉಮೇಶ ಕೆ ಮುದ್ನಾಳ ರವರು ಆಕ್ರೋಶ ವ್ಯಕ್ತಪಡಿಸಿ ಹೋರಾಟಕ್ಕೆ ಮುಂದಾಗಿರುವುದು ಈ ಭಾಗದ ಜನರಿಗೆ ಈಗ ತುಂಬ ಸಂತಸ ತಂದಿದೆ.

ಈ ಯಾದಗಿರಿ ಜಿಲ್ಲೆಯು ತುಂಬ ಹಿಂದುಳಿದ ಜಿಲ್ಲೆಯಾಗಿದ್ದು,ಇಲ್ಲಿ ಬೇಸಿಗೆಯಲ್ಲಿ  ನಿತ್ಯ ರಣ ರಣ ಬಿಸಿಲಿನಿಂದ ಕೂಡಿರುತ್ತದೆ. ಮತ್ತು ಕಲ್ಲು, ಗುಡ್ಡ ಬೆಟ್ಟಗಳ ನಡುವೆ ಬೆಂದು ಹೋಗಿರುವ ಈ ಭಾಗದ ಜನರಿಗೆ ಬಹುದಿನಗಳಿಂದ ಒಬ್ಬ ನಿಷ್ಠಾವಂತ ನಾಯಕ ಸಿಕ್ಕಿರುವುದಾಗಿ ಮತ್ತು ರೈಲು ನಿಲುಗಡೆಗೆ ಹೋರಾಟ ಮಾಡುತ್ತಿರುವ ಉಮೇಶ ಕೆ. ಮುದ್ನಾಳ ಅವರನ್ನು ಕಂಡು ಕೂಲಿಕಾರ್ಮಿಕರು,ರೈತರು ಮತ್ತು ನಿತ್ಯ ಪಯಣಿಸುವ ನೌಕರರಿಗೆ ತುಂಬ ಸಂತಸ ತಂದಿದೆ. ಎಂದು ಹೇಳಬಹುದಾಗಿದೆ.

ಈ ರೈಲು ನಿಲುಗಡೆಗಾಗಿ ಈ ಹೋರಾಟಗಾರರು  ವಿನೂತನ ಅಭಿಯಾನ ಜೋಳದಡಗಿ ಗ್ರಾಮದಿಂದ ಚಾಲನೆ ಮಾಡಿ ಕರಪತ್ರವು ಕೂಡ ಬಿಡಗಡೆ ಮಾಡಿದ್ದಾರೆ.

ಜೋಳದಡಗಿ ಗ್ರಾಮದ ಸಭೆಯಲ್ಲಿ ಕರಪತ್ರ ಬಿಡುಗಡೆ ಮಾಡಲಾಯಿತು.

ಸಾಮಾಜಿಕ ಕಾರ್ಯಕರ್ತ ಹಾಗೂ ನ್ಯಾಯಪರ ಹೋರಾಟಗಾರ ಉಮೇಶ ಮುದ್ನಾಳ ಅವರು
ವಡಗೇರಿ ತಾಲ್ಲೂಕಿನ ಜೋಳದಡಗಿ ಗ್ರಾಮದಲ್ಲಿರುವ ಅಕ್ಕದೇವಿ ಕಟ್ಟೆಯಲ್ಲಿ ಗ್ರಾಮದ ಜನರೊಂದಿಗೆ ಸೇರಿ ಕಾರ್ಯಕ್ರಮವೊಂದರಲ್ಲಿ ಕರಪತ್ರವು ಬಿಡುಗಡೆ ಮಾಡುವ ಮೂಲಕ ರೈಲ್ವೆ ಇಲಾಖೆಯ ವಿರುದ್ಧ ಹೋರಾಟಕ್ಕೆ ಹಸಿರು ನಿಶಾನೆ ತೋರಿಸಿ  ಚಾಲನೆ ನೀಡಿದ್ದಾರೆ.

ಯಾದಗಿರಿ ಜಿಲ್ಲೆಯಿಂದ ಬೆಂಗಳೂರು, ಚೆನೈ, ಮುಂಬಯಿ, ಹೈದರಾಬಾದ್ ಮೊದಲಾದ ಕಡೆಗೆ ಹಾದು ಹೋಗುವ ಈ ಕೆಳಗಿನ ರೈಲುಗಳು ಇಂತ್ತಿವೆ.

ಟ್ರೇನ್ ನಂ. (57631-57632) ಸೊಲ್ಲಾಪೂರ ಗುಂತಕಲ್(ಇಂಟರ್‌ಸಿಟಿ), ಟ್ರೇನ್ ನಂ. (22691-22692) ರಾಜಧಾನಿ ಎಕ್ಸ್ಪ್ರೆಸ್, ಟ್ರೇನ್ ನಂ. (22689-22690) ಅಹಮದಾಬಾದ್ ಸುಪರ್ ಫಾಸ್ಟ್ ಎಕ್ಸ್ಪ್ರೆಸ್, ಟ್ರೇನ್ ನಂ. (16613-16614) ರಾಜಕೋಟ್ ಎಕ್ಸ್ಪ್ರೆಸ್, ಟ್ರೇನ್ ನಂ. (22231-22232) ವಂದೇ ಭಾರತ, ಟ್ರೇನ್ ನಂ. (22601-22602) ಸಾಯಿನಗರ ಶಿರಡಿ ಸೂಪರ್ ಫಾಸ್ಟ್, ಟ್ರೇನ್ ನಂ. (12591-12596) ಗೋರಕ್‌ಪುರ ಎಕ್ಸ್‌ ಪ್ರೆಸ್‌, ಟ್ರೇನ್ ನಂ. ( 19567-19568) ವಿವೇಕ್ ಎಕ್ಸ್ ಪ್ರೆಸ ಸೇರಿದಂತೆ ಇನ್ನುಳಿದ ಎಲ್ಲಾ ರೈಲುಗಳನ್ನು ಕೂಡಲೇ ನಿಲುಗಡೆಗೆ ಕ್ರಮ ವಹಿಸಬೇಕು ಮತ್ತು ಕೊರೋನಾ ಸಮಯದಲ್ಲಿ ಬಂದ್ ಆಗಿರುವ ಇಂಟರಸಿಟಿ ಸೋಲಾಪುರ-ಗುಂತಕಲ್  ರೈಲು ಮತ್ತೆ ಪುನಾರಾಂಭಿಸಬೇಕು.

ಮತ್ತು ರೈಲು ನಿಲ್ದಾಣದಲ್ಲಿ ವಿಶೇಷ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾಗಿದೆ. ಅಷ್ಟೇಯಲ್ಲದೆ ರೈಲು ನಿಲ್ದಾಣದಲ್ಲಿ ಲಿಫ್ಟ್ ವ್ಯವಸ್ಥೆ, ಅಂಗವಿಕರಲು, ವಯೋವೃದ್ಧರಿಗೆ ಅನುಕೂಲವಾಗಲು ವಿಶೇಷ ವಾಹನ ವ್ಯವಸ್ಥೆ, ರೈಲು ನಿಲ್ದಾಣದ ಪ್ಲಾಟ್ ಫಾರಂಗಳಲ್ಲಿ ಸಂಪೂರ್ಣ ಮೇಲಚ್ಛಾವಣಿಯ ವ್ಯವಸ್ಥೆ ಹಾಗೂ ಜನರಿಗೆ ಕುಳಿತು ಕೊಳ್ಳಲು ಸೂಕ್ತವಾದ ಆಸನದ ವ್ಯವಸ್ಥೆಗಳು ಅಭಿವೃದ್ಧಿಪಡಿಸಬೇಕು ಎಂಬುದು ಅವರ ಮತ್ತು ಈ ಭಾಗದ ಜನರ ಬೇಡಿಕೆಯಾಗಿದೆ.

ಗುಂತಕಲ್ ಹೊರತುಪಡಿಸಿದರೆ ಅತಿ ಹೆಚ್ಚು ಆದಾಯ ತಂದುಕೊಡುವ  ರೈಲ್ವೆ ನಿಲ್ದಾಣವೆಂದರೆ ಅದು ಯಾದಗಿರಿ ರೈಲು ನಿಲ್ದಾಣವಾಗಿದೆ. ಅಲ್ಲದೇ ಈ ಭಾಗದಿಂದ ಬೆಂಗಳೂರು ಮುಂಬಯಿ ಹೈದರಾಬಾದ್ ಚೆನೈ ಮುಂತಾದ ಕಡೆಗೆಗಳಿಗೆ ಅತಿಹೆಚ್ಚು ಗುಳೆ ಹೋಗುವ ಜನರ ಸಂಖ್ಯೆ ಈ ಯಾದಗಿರಿ ಜಿಲ್ಲೆಯಯಲ್ಲಿದೆ. ಮತ್ತು  ಯಾದಗಿರಿ ಜಿಲ್ಲೆಯ ಸೈದಾಪೂರ ರೈಲ್ವೆ ನಿಲ್ದಾಣಗಳಿಂದಲೂ ಕೂಡ ಹೆಚ್ಚು ಹೆಚ್ಚು ಜನ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದು ಅವರೆಲ್ಲರಿಗೂ ಅನುಕೂಲ ಮಾಡಿಕೊಡಲು ರೈಲ್ವೆ ಇಲಾಖೆಯವರು  ಎಲ್ಲ ವ್ಯವಸ್ಥೆ ಮಾಡಿ ಕೊಡಬೇಕು ಮತ್ತು ಯಾದಗಿರಿ ಹಾಗೂ ಸೈದಾಪೂರ ಸ್ಟೇಷನ್ ನಲ್ಲಿ ಎಲ್ಲಾ ರೈಲುಗಳು ನಿಲುಗಡೆ ಮಾಡಬೇಕೆಂಬುದು  ಉಮೇಶ್ ಕೆ. ಮುದ್ನಾಳ ಅವರ ಜನಹಿತದ ಒತ್ತಾಸೆಯಾಗಿದೆ.

ವಂದೇ ಭಾರತ ರೈಲು.

ಕಲಬುರಗಿಯಿಂದ ಬೆಂಗಳೂರು ಕಡೆಗೆ ಸಂಚರಿಸುವ ವಂದೇ ಭಾರತ ರೈಲ್ವೆ ಯಾದಗಿರಿಯಲ್ಲಿ ನಿಲುಗಡೆಗೆ ಮಾಡುತ್ತಿರುವುದು ಸಂತಸವೇನೋ ! ತಂದಿದೆ  ಆದರೆ ಈ ‘ವಂದೇ ಭಾರತ ‘ ಟ್ರೇನ್‌ನಿಂದ ನಮ್ಮ ಕಲ್ಯಾಣ ಕರ್ನಾಟಕ ಭಾಗದ ಜನಸಾಮಾನ್ಯರಿಗೆ ಅದರಲ್ಲಿ ಕೂಲಿಕಾರ್ಮಿಕ, ಬಡ ರೈತರಿಗೆೆ ಈ ರೈಲಿನಲ್ಲಿ ಪ್ರಯಾಣ ಮಾಡುವುದು ಸಾಧ್ಯವಾಗುವುದಿಲ್ಲ. ಇದು ಶ್ರೀಮಂತರ ರೈಲು ಇದು ಬಡವರ ರೈಲಲ್ಲ. ಹಾಗಾಗಿ ಇನ್ನುಳಿದ ಎಕ್ಸ್  ಪ್ರೆಸ್ಸ್ ಎಲ್ಲಾ ರೈಲುಗಳು ನಿಲುಗಡೆಗೆ ತುರ್ತಾಗಿ ಕ್ರಮಕೈಗೊಳ್ಳಬೇಕು ಎಂಬುದು ಈ ಜನರ ಕನಸ್ಸಾಗಿದೆ.

ಹಾಗಾಗಿ ಈ ಭಾಗದಲ್ಲಿ ಸಂಚರಿಸುವ ಎಲ್ಲ ಎಕ್ಸ್ ಪ್ರೆಸ್ ರೈಲುಗಳ ನಿಲುಗಡೆಯಾಗುವವರೆಗೂ ಹೋರಾಟ ನಡೆಸುವುದಾಗಿ ಹೋರಾಟಗಾರರು ತಿಳಿಸಿದ್ದಾರೆ.

ಒಂದು ವೇಳೆ ಈ ಎಲ್ಲ ರೈಲುಗಳು ಯಾದಗಿರಿ ಮತ್ತು ಸೈದಾಪೂರ ಸ್ಟೇಷನ್ ನಲ್ಲಿ ನಿಲ್ಲದಿದ್ದರೇ ಮುಂದಿನ ದಿನಗಳಲ್ಲಿ ಹೆಚ್ಚಿನ ಜನ ಸಂಖ್ಯೆಯಲ್ಲಿ  ರೈಲ್ವೆ ನಿಲ್ದಾಣಕ್ಕೆ ಮುತ್ತಿಗೆ ಹಾಕಲು ಕೂಡ ಅವರು ನಿರ್ಧರಿಸಿದ್ದಾರೆ. ಎಂಬುದು ಪ್ರಯಾಣಿಕರಿಗೆ ಸಂತಸ ವಿಷಯವಾಗಿದೆ.

ಜೋಳದಡಗಿ ಗ್ರಾಮದಲ್ಲಿ ನಡೆದ ರೈಲ್ವೆ ಇಲ್ಲಾಖೆಯ ವಿರುದ್ಧ ನಡೆಸುವ ಹೋರಾಟದ ಸಭೆಯಲ್ಲಿ ಗ್ರಾಮದ ಎಲ್ಲ ಜನತೆಯು ಸಾಥ ನೀಡಿರುತ್ತಾರೆ. ಈ ಸಂದರ್ಭದಲ್ಲಿ ರಾಜು. ಶರಣು.ಅಯ್ಯಣ್ಣ. ಆಂಜನೇಯ ಪೂಜಾರಿ. ಹಣಮಂತ. ಜಂಬಣ್ಣ.ಸಿದ್ಧಪ್ಪ.ಮರೆಪ್ಪ. ಯಂಕಪ್ಪ. ಮಲ್ಲಪ್ಪ.ಅಯ್ಯಪ್ಪ ಆಂಜನೇಯ. ಅಯ್ಯಪ್ಪ. ರವಿ.ಸಾಬಣ್ಣ. ಶಿವು ಮಲ್ಲಿಕಾರ್ಜುನ. ಮಹದೇವಪ್ಪ. ಶರಣಪ್ಪ.ರಾಮು. ಕೃಷ್ಣ ಮಹದೇವಮ್ಮ. ಪರಮ್ಮ. ರೆಡ್ಡಿ. ತಿಮ್ಮಪ್ಪ . ದೇವಪ್ಪ. ಬಸವರಾಜ.ಮೊನಮ್ಮ ಮಹಾದೇವಿ. ಮಲ್ಲಮ್ಮ. ಚಂದ್ರಮ್ಮ ಬಸಲಿಂಗಮ್ಮ.ಸಾಬಮ್ಮ.ರೇಣುಕಾ.ಶಾಹಿನ ಸಾನಿಕ. ಚೈತ್ರಾ. ರೇಣುಕಾ.ಸಿದ್ದಮ್ಮ.ಪವಿತ್ರ. ಮಹೇಶ.ಮಹೀಬೂಬ. ಭರತ ರಘು ಮೊದಲಾದವರು ಭಾಗಹಿಸಿದ್ದರು. ಈ ಉಮೇಶ ಕೆ.ಮುದ್ನಾಳ ಅವರ ಹೋರಾಟಕ್ಕೆ ಬೆಂಬಲ ಸಿಕ್ಕಂತಾಗಿದೆ. ಮುಂದಿನ ದಿನಗಳಲ್ಲಿ ಈ ಯಾದಗಿರಿ ಮತ್ತು ಸೈದಾಪೂರ ಎರಡು ಸ್ಟೇಷನ್ ಗಳಲ್ಲಿ ರೈಲ್ವೆ ನಿಲ್ಲುವಂತಾಗಲಿ ಮತ್ತು ನಿತ್ಯ ಪಯಣಿಸುವ ಜನಸಾಮಾನ್ಯರಿಗೆ ಇದರಿಂದ ಅನುಕೂಲವಾಗಲೆಂದು ಹಾರೈಸೋಣ.

ಮಚ್ಚೇಂದ್ರ ಪಿ ಅಣಕಲ್. ಕಲಬುರಗಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ