Oplus_131072

ನಮ್ಮ ಸಂವಿಧಾನ.

ಜಾತಿ ಲಿಂಗ ವರ್ಗ ವರ್ಣ ಭೇದ
ಶತಮಾನಗಳ ಹಿಂದೆ ತೊಡೆದು
ಹಾಕಿದ ಶರಣ ಬಸವೇಶ್ವರರು

ಸಮಾನತೆಯ ಬೀಜ ಬಿತ್ತಿದರು
ಅನೇಕತೆಯಲಿ ಏಕತೆ ಸಾರಿದರು
ನೈತಿಕತೆ ನ್ಯಾಯಕ್ಕೆ ಬೆಲೆ ಕೊಟ್ಟರು

ಅನುಭವ ಮಂಟಪ ರಚಿಸಿದರು
ವಿಶ್ವದ ಮೊದಲ ಸಂಸತ್ತಾಯಿತು ಮಾನವೀಯತೆಯ ಮಾತಾಯಿತು

ಸಂವಿಧಾನ ಶಿಲ್ಪಿ ಅಂಬೇಡಕರರು
ಸ್ವಾತಂತ್ರ್ಯದ ಕಾನೂನು ತಂದರು
ಜಾತ್ಯಾತೀತತೆ ಜಾರಿಗೆ ತಂದರು

ನಮ್ಮಭವ್ಯ ಭಾರತದ ಸಂವಿಧಾನ
ವಿಶ್ವದ ಬೃಹತ್ ಲಿಖಿತ ಸಂವಿಧಾನ
ಮೂಲಭೂತ ಹಕ್ಕು ಕರ್ತವ್ಯ ಪ್ರಧಾನ

ರಾಜ್ಯ ಲೋಕಸಭೆ ರಾಜಕಾರಣ
ಜನರ ಮೌಲಿಕ ಪ್ರಶ್ನೆಗಳ ಆಕರ್ಷಣ
ಜನರಿಗೆ ಆವ್ಹಾನಗಳ ಆಮಂತ್ರಣ

ದೇವನ ಸೃಷ್ಟಿಯ ಸರಕಾರದಿ
ಶಿಸ್ತಿನ ಸಿಪಾಯಿ ಸೂರ್ಯ ಚಂದ್ರ
ವರುಣ ಅನಲ ಅನಿಲ ಸುರಳಿತ
ಅವನದೇ ಸತ್ಯ ಸುಂದರ ಆಡಳಿತ

ಒಂದೇ ದೇಶ ಒಂದೇ ಭಾಷೆಧರ್ಮ
ಒಂದೇ ಜಾತಿ ಒಂದೇ ಮತಕಾಗಿ
ತಾಯಿ ಭಾರತಿ ಕಾಯುತಿಹಳು

ಅನ್ನಪೂರ್ಣ ಸುಭಾಷಚಂದ್ರ
ಸಕ್ರೋಜಿ ಪುಣೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ