Oplus_131072

ಇಟ್ಟಿಗೆ.

ಸುಟ್ಟಮೇಲೆ ಗಟ್ಟಿಯಾಗಿ
ಗರಿಗೆದರಿ ನಿಂತೆ ಇಟ್ಟಿಗೆಯಾಗಿ
ಕೋಣೆ ಕೊಟ್ಟಿಗೆಯಾಗಿ !

ಮಣ್ಣು ಜೀವ ಮಣ್ಣಿನಿಂದ ಮರಳಿ ಮಹಲಾಗಿ ಮನೆಯಾಗಿ
ನಿಲ್ಲಬೇಕು ಅಚಲವಾಗಿ !

ಕೂಡಿ ಬಾಳಿದರೆ ಸದೃಡ
ನೀರು ಬೂದಿ ಸಂಯುಕ್ತಗಳ
ಸಂವೇದನೆಗಳೊಂದಿಗೆ !

ಮಡಕೆಯ ಮಾಡಲು ಮಣ್ಣೇ ಮೊದಲು
ತಡಿಕೆಯ ಹೂಳಲು ಮಣ್ಣೆ ಮಜವು
ಮಣ್ಣಿಂದ ಕಾಯ ಮಣ್ಣಿಂದ
ಮಣ್ಣೇ ಜಗದ ಆಧಾರ !

ಮಣ್ಣ ಬಿಟ್ಟು ಮಡಕೆಯಿಲ್ಲ
ತನ್ನ ಬಿಟ್ಟು ತಡಿಕೆಯಿಲ್ಲ
ಬಿಲ್ಲು ಇದ್ದರೇನು ಬಂತು
ಹೂಡಲು ಬಾಣ ಇಲ್ಲದಮೇಲೆ !

ಸ್ವಯಂ ಸುಟ್ಟು, ಅಹಂ ಅಟ್ಟು
ಸ್ವಂತ ಉರಿದು ಬೆಳಕಾಗು
ನೆರೆಮನೆಯವರ ನೀರಲಿ ಮಿಂದವನ. ನೆಚ್ಚ ನಮ್ಮ ಮಹದೇವ !

ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ.ಗದಗ.

2 thoughts on “ಇಟ್ಟಿಗೆ”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ