ಯುವಶಕ್ತಿ ಜಾಗೃತವಾಗಲಿ.
– ಡಾ.ಸಂಜೀವಕುಮಾರ ಅತಿವಾಳೆ. ಬೀದರ
ಇಂದಿನ ಯುವಕರು ಮದ್ಯಪಾನ ಮಾಡುವುದು ಫ್ಯಾಷನ್‌ಗಾಗಿ, ತನ್ನ ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ತಿಳಿದಿದ್ದಾರೆ. ಕುಡಿತವು ಮಾನ-ಧನ ಎಲ್ಲವನ್ನು ಹರಾಜಿಗೆ ಹಾಕುತ್ತದೆ. ಅಷ್ಟೇ ಅಲ್ಲ ಶರೀರವನ್ನು ಹಲವು ರೋಗಗಳ ಗೂಡಾಗಿಸುತ್ತದೆ. ಇದರಿಂದಾಗಿ ಸಾವು ಕೂಡ ಸಂಭವಿಸಬಹುದು.
ಆದಿ ಅನಾದಿಕಾಲದಿಂದಲೂ ಭಾರತ ದೇಶವು ಸಂಪದ್ಭರಿತವಾದ ನಾಡಾಗಿತ್ತು.
ವೈಭವಯುತವಾಗಿ ಮೇರೆದ ಬೀಡಾಗಿತ್ತು. ಶ್ರೇಷ್ಠ ಸಂಸ್ಕೃತಿಯ ನೆಲೆಬೀಡಾದ ಭಾರತ
ದೇಶದಲ್ಲಿ ಹಿಂದಿನಿಂದಲೂ ಯುವಜನತೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.
ಯುವಕರು ಸುಸಂಸ್ಕೃತವಾಗಿ ಬೆಳೆದು ತಮ್ಮಲ್ಲಿರುವ ಅಪಾರವಾದ ಶಕ್ತಿಯನ್ನು ದೇಶಕ್ಕಾಗಿ
ಸದ್ಬಳಕೆ ಮಾಡಿ ಶ್ರೇಷ್ಠ ಯುವಶಕ್ತಿಯಾಗಿ ಹೊರಹೊಮ್ಮುತ್ತಿದ್ದರು. ಹಿಂದಿನ ಮತ್ತು ಇಂದಿನ ಯುವಕರ ಬಗ್ಗೆ ಒಂದು ಮಾತು ಇದೆ.
ಹಿಂದೆ: ಮುಂದೆ ಗುರಿಯಿತ್ತು, ಹಿಂದೆ ಗುರು ಇದ್ದರು.
ನಡೆದಿತು ನೋಡಾ ಧೀರ ಸೈನಿಕರ ದಂಡು !
ಇಂದು: ಮುಂದೆ ಗುರಿ ಇಲ್ಲ, ಹಿಂದೆ ಗುರು ಇಲ್ಲ.
ನಡೆದಿತು ನೋಡಾ ರಣಹೇಡಿಗಳ ಹಿಂಡು !
ಈ ವಾಕ್ಯವನ್ನು ನೋಡಿದಾಗ ಇಂದಿನ ಯುವಕರ ಸ್ಥಿತಿ ಏನಾಗಿದೆ ? ಎಂಬುದು ನಮಗೆ ಗೊತ್ತಾಗುತ್ತದೆ. ಹಿಂದೆ ಗುರುಕುಲಗಳಲ್ಲಿ ಯೌವನಾವಸ್ಥೆವರೆಗೆ ಗುರುಗಳಲ್ಲಿ
ನೈತಿಕತೆಯುಳ್ಳ ಶ್ರೇಷ್ಠ ಗುಣಮಟ್ಟದ ಶಿಕ್ಷಣ ಪಡೆದುಕೊಂಡು ಹೊರ ಬರುತ್ತಿರುವ ಯುವಜನಾಂಗವು ತಮ್ಮ ಜವಾಬ್ದಾರಿಯನ್ನು ಅರಿತು ಕರ್ತವ್ಯ ಪಾಲನೆಯಲ್ಲಿ
ತೊಡಗುತ್ತಿದ್ದರು. ಕೆಟ್ಟದರ ಬಗ್ಗೆ ಮಾತಾಡುವುದಿರಲಿ, ಯೋಚಿಸುವುದಕ್ಕೂ ಆಗುತ್ತಿರಲಿಲ್ಲ.
ಹಾಗಾಗಿ ಅಂದಿನ ಯುವಕರು ದೇಶ ಕಟ್ಟುವ ಕಾಯಕದಲ್ಲಿ ನಿರತರಾಗಿರುತ್ತಿದ್ದರು.
ಅಂತೆಯೇ ಸ್ವಾಮಿ ವಿವೇಕಾನಂದ, ಸುಭಾಷಚಂದ್ರ ಭೋಸ, ಭಗತ್ ಸಿಂಗ್, ರಾಜಗುರು,
ಸುಖದೇವರಂತಹ ಶ್ರೇಷ್ಠ, ಅಪಾರ ಕರ್ತೃತ್ವಶಕ್ತಿಯನ್ನು ಬೆಳೆಸಿಕೊಂಡು ಇಂದಿನ
ಯುವಜನಾಂಗಕ್ಕೆ ಪ್ರೇರಣಾ ಶಕ್ತಿಯಾಗಿ ರೂಪು ತಳೆದಿದ್ದಾರೆ. ಅಂತಹ ಮಹಾನ್
ಯುವಕರ ವಿಚಾರಧಾರೆಗಳನ್ನು ಇಂದಿನ ಯುವಕರಲ್ಲಿ ಕಾಣದಿರುವುದು ತುಂಬಾ
ವಿಷಾದದ ಸಂಗತಿಯಾಗಿದೆ. ಇಂದು ಯುವ ಜನಾಂಗ ಸಂಪೂರ್ಣವಾಗಿ ತಮ್ಮನ್ನು
ತಾವು ಯಾವ ಸ್ಥಿತಿಯಲ್ಲಿದ್ದೇವೆ ಎಂಬುದು ಅರಿವಿಲ್ಲದಂತೆ ವರ್ತಿಸುತ್ತಿದ್ದಾರೆ.
ಧೂಮಪಾನಗಳಲ್ಲಿ ಒಂದಾದ ಸಿಗರೇಟಿನ ಪ್ಯಾಕೆಟ್
ಮೇಲೆ ಸೇದುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಚ್ಚಾಗಿರುತ್ತದೆ. ವಿದ್ಯಾವಂತ
ಉನ್ನತ ಶಿಕ್ಷಣ ಪಡೆದಂತಹ ಯುವಕರೇ ಅದನ್ನು ಮೊದಲು ಸೇವಿಸುತ್ತಾರೆ, ಧೂಮಪಾನ
ಮಾಡದಂತೆ ಗಟ್ಟಿ ಮನಸ್ಸನ್ನು ಬೆಳೆಸಿಕೊಂಡಾಗ ಮಾತ್ರ ಅದರಿಂದ ದೂರ ಇರಬಹುದು,
ಯುವ ಜನಾಂಗ ಇಂದು ಮಾದಕ ದ್ರವ್ಯದಂತಹ ಅತ್ಯಂತ ಮಾರಕ ಚಟಕ್ಕೆ
ಬಲಿಯಾಗುತ್ತಿರುವುದು ತುಂಬಾ ಶೋಚನೀಯವಾಗಿದೆ,
ಇಂದು ನಮ್ಮ ದೇಶದಲ್ಲಿ ಹಲವಾರು ಸಮಸ್ಯೆಗಳು ಉದ್ಭವವಾಗುತ್ತಲಿವೆ.
ಅವುಗಳಿಂದಾಗಿ ದೇಶದ ಅಭಿವೃದ್ಧಿಯು ಕುಂಠಿತವಾಗುತ್ತಿದೆ. ಅಂತಹ ಹಲವು ಗಂಭೀರ
ಸಮಸ್ಯೆಗಳಲ್ಲಿ ಯುವ ಜನಾಂಗದ ಸಮಸ್ಯೆ ಒಂದಾಗಿದೆ. ಇಂದಿನ ಯುವಕರ ಮೇಲೆ
ಹಲವಾರು ಜವಾಬ್ದಾರಿಗಳಿವೆ. ಅವರು ನಿರ್ವಹಿಸಬೇಕಾದ ಮಹತ್ತರವಾದ
ಕಾರ್ಯಗಳಿವೆ. ಆದರೂ ಯುವ ಜನಾಂಗ ದಾರಿ ತಪ್ಪುತ್ತಿದೆ.
ಅದಕ್ಕೆ ಹಲವಾರು
ಕಾರಣಗಳಿವೆ. ಅಂತಹ ಕಾರಣಗಳನ್ನು ವಿಶ್ಲೇಷಿಸೋಣ.
ಯುವ ಜನಾಂಗವು ದಾರಿ ತಪ್ಪುವಲ್ಲಿ ಮೊಟ್ಟಮೊದಲ ಪ್ರಮುಖ ಕಾರಣವೆಂದರೆ,
ಅವರಿಗೆ ದೊರಕುತ್ತಿರುವ ಶಿಕ್ಷಣ, ಬ್ರಿಟಿಷರ ಕಾಲದಿಂದಲೂ ನಡೆದು ಬಂದಿರುವ
ಶಿಕ್ಷಣ ಪದ್ಧತಿಯು ಯುವ ಜನಾಂಗವನ್ನು ನಿಸ್ತೇಜಕರನ್ನಾಗಿಸುತ್ತಿದೆ.
ಸಾವಿರಾರು
ರೂಪಾಯಿ ಖರ್ಚು ಮಾಡಿ ಉನ್ನತವಾದ ಪದವಿಗಳನ್ನು ಪಡೆದುಕೊಂಡರೂ ಅವರಿಗೆ
ಸೂಕ್ತವಾದ ಸರ್ಕಾರಿ ಉದ್ಯೋಗಗಳು ದೊರಕದೇ ಇರುವುದರಿಂದಾಗಿ ಅವರ ಮನಸ್ಸು
ವಿಚಲಿತಗೊಂಡು ಸರ್ಕಾರದ ವಿರುದ್ಧ ತಿರುಗಿ ಬೀಳುತ್ತಿದ್ದಾರೆ. ಮತ್ತು ಹಲವಾರು
ದುಷ್ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದಾರೆ.
ಅದರ ಫಲವಾಗಿಯೇ ಎಲ್.ಟಿ.ಟಿ.ಇ., ನಕ್ಸಲೈಟ್,
ತಾಲಿಬಾನ್ ನಂತರ ಅತ್ಯಂತ ಹಿಂಸಾತ್ಮಕ ಉಗ್ರವಾದಿ, ಭಯೋತ್ಪಾದಕ ಸಂಘಟನೆಗಳು
ಹುಟ್ಟಿಕೊಂಡಿವೆ. ಕೆಲವೊಮ್ಮೆ ಯುವಕರು ಆತ್ಮಬಲದ ಕೊರತೆಯಿಂದಾಗಿ
ಆತ್ಮಹತ್ಯೆಯಂತಹ ಕೃತ್ಯಗಳಿಗಿಳಿಯುತ್ತಾರೆ. ಇನ್ನು ಕೆಲವರು ನಿರುದ್ಯೋಗದ ಚಿಂತೆಯೆಂಬ
ಚಿತೆಯನ್ನು ದೂರಮಾಡಲೆಂದು ಹಲವಾರು ದುಶ್ಚಟಗಳಿಗೆ ಬಲಿಯಾಗುತ್ತಿರುವುದು
ವಿಷಾದದ ಸಂಗತಿ.
ಇಂದಿನ ಯುವಕರು ಮದ್ಯಪಾನ ಮಾಡುವುದು ಫ್ಯಾಷನ್‌ಗಾಗಿ, ತನ್ನ
ಇಮೇಜ್ ಹೆಚ್ಚಿಸಿಕೊಳ್ಳುವುದಕ್ಕಾಗಿ ಎಂದು ತಿಳಿದಿದ್ದಾರೆ. ಕುಡಿತವು ಮಾನ-ಧನ ಎಲ್ಲವನ್ನು ಹರಾಜಿಗೆ ಹಾಕುತ್ತದೆ. ಅಷ್ಟೇ ಅಲ್ಲ ಶರೀರವನ್ನು ಹಲವು ರೋಗಗಳ
ಗೂಡಾಗಿಸುತ್ತದೆ. ಇದರಿಂದಾಗಿ ಸಾವು ಕೂಡ ಸಂಭವಿಸಬಹುದು.
ದೈತ್ಯ ರಾಕ್ಷಸನಂತಿರುವ ಮದ್ಯಪಾನಕ್ಕೆ ಅಂಟಿಕೊಳ್ಳದಂತೆ ಅದರಿಂದಾಗುವ ಕೆಟ್ಟ
ಪರಿಣಾಮಗಳನ್ನು ಮೊದಲೇ ಯುವಕರಿಗೆ ತಿಳಿಸಬೇಕಾದ್ದುದು ಹಿರಿಯರ ಕರ್ತವ್ಯವಾಗಿದೆ.
ಯುವಕರು ಕೂಡ ಆಸೆಗಣ್ಣಿನಿಂದ ಮದ್ಯಪಾನದತ್ತ ನೋಡದಂತೆ ದೃಢಮನಸ್ಸು
ಬೆಳೆಸಿಕೊಳ್ಳಬೇಕಾದದ್ದು ಅನಿವಾರ್ಯವಾಗಿದೆ. ಹಾಗೆಯೇ ಧೂಮಪಾನವು ಅತ್ಯಂತ
ಕೆಟ್ಟ ಚಟಗಳಲ್ಲಿ ಒಂದಾಗಿದೆ. ಇದರ ಸೇವನೆಯಿಂದಾಗಿ ಶ್ವಾಸಕೋಶ ಕ್ಯಾನ್ಸರ್, ಉಸಿರಾಟ, ಪಚನಕ್ರಿಯೆ ಮತ್ತು ನರ ದೌರ್ಬಲ್ಯ ಮುಂತಾದ ಅಪಾಯಕಾರಿ
ತೊಂದರೆಗಳು ಉಂಟಾಗುತ್ತವೆ.
ಯುವಜನರು ತಮ್ಮ ಯೌವನದ ಶಕ್ತಿಯನ್ನು
ಹಾಳುಗೆಡುವುತ್ತಿದ್ದಾರೆ. ಮತ್ತೊಂದು ಪ್ರಮುಖ ಅಂಶವೆಂದರೆ ಸ್ತ್ರೀ ಪುರುಷರಲ್ಲಿ ಪರಸ್ಪರ ಅನೈತಿಕ ಸಂಬಂಧಿಂದ ಗರ್ಭಪಾತಗಳು, ಏಡ್ಸ್ ದಂತಹ ಮಾರಕ ರೋಗಗಳು ಕಾಣಿಸಿಕೊಳ್ಳುತ್ತಿವೆ. ಇದರಿಂದ ಯುವಜನರ ತಾರುಣ್ಯವು ಉಚ್ಚಾಯ ಕಾಲದಲ್ಲೇ ಅವನತಿಗೀಡಾಗುತ್ತಿದೆ.
ಧೂಮಪಾನಗಳಲ್ಲಿ ಒಂದಾದ ಸಿಗರೇಟಿನ ಪ್ಯಾಕೆಟ್
ಮೇಲೆ ಸೇದುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಅಚ್ಚಾಗಿರುತ್ತದೆ. ವಿದ್ಯಾವಂತ
ಉನ್ನತ ಶಿಕ್ಷಣ ಪಡೆದಂತಹ ಯುವಕರೇ ಅದನ್ನು ಮೊದಲು ಸೇವಿಸುತ್ತಾರೆ, ಧೂಮಪಾನ
ಮಾಡದಂತೆ ಗಟ್ಟಿ ಮನಸ್ಸನ್ನು ಬೆಳೆಸಿಕೊಂಡಾಗ ಮಾತ್ರ ಅದರಿಂದ ದೂರ ಇರಬಹುದು,
ಯುವ ಜನಾಂಗ ಇಂದು ಮಾದಕ ದ್ರವ್ಯದಂತಹ ಅತ್ಯಂತ ಮಾರಕ ಚಟಕ್ಕೆ
ಬಲಿಯಾಗುತ್ತಿರುವುದು ತುಂಬಾ ಶೋಚನೀಯವಾಗಿದೆ, ಅಫೀಮು, ಗಾಂಜಾ, ಚರಸ,
ಹೆರಾಯಿನ್ ಮುಂತಾದ ಅಪಾಯಕಾರಿ ಮಾದಕದ್ರವ್ಯಗಳ ಸೇವನೆ ಯುವಕರನ್ನು
ಬಲಿ ತೆಗೆದುಕೊಳ್ಳುತ್ತಿದೆ. ಶಾರೀರಕವಾಗಿ ಹಾಗೂ ಮಾನಸಿಕವಾಗಿ ಹೆಚ್ಚು ಕೆಟ್ಟ ಪರಿಣಾಮ
ಅದರಿಂದ ಉಂಟಾಗುತ್ತದೆ. ಆದ್ದರಿಂದ ಇವುಗಳಿಂದ ದೂರವಿರುವಂತೆ
ನೋಡಿಕೊಳ್ಳಬೇಕಾದದ್ದು ಅವಶ್ಯಕವಾಗಿದೆ.
ಇವು ಯುವಜನರ ಯೌವನದ ಶಕ್ತಿಯನ್ನು
ಹಾಳುಗೆಡುವುತ್ತಿರುತ್ತವೆ.
ಮತ್ತೊಂದು ಪ್ರಮುಖ ಅಂಶವೆಂದರೆ ಸ್ತ್ರೀ ಪುರುಷರಲ್ಲಿ ಪರಸ್ಪರ ಅನೈತಿಕ
ಸಂಬಂಧ. ಇದರಿಂದಾಗಿ ಗರ್ಭಪಾತಗಳು, ಏಡ್ಸ್ ದಂತಹ ಮಾರಕ ರೋಗಗಳು
ಕಾಣಿಸಿಕೊಳ್ಳುತ್ತಿವೆ. ಯುವಜನರ ತಾರುಣ್ಯವು ಉಚ್ಚಾಯ ಕಾಲದಲ್ಲೇ
ಅವನತಿಗೀಡಾಗುತ್ತಿದೆ. ಇದರಿಂದ ಸಮಾಜದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ವಿಶೇಷವಾಗಿ ಹಿಂಸಾತ್ಮಕ ಅಪರಾಧಗಳು ದೈನಂದಿನ ಜೀವನದಲ್ಲಿ ಅಪಾಯಕಾರಿ
ಮಟ್ಟಕ್ಕೆ ತಲುಪಿಸುವಷ್ಟು ಹೆಚ್ಚುತ್ತಿವೆ. ಅಷ್ಟೇ ಅಲ್ಲದೆ ಕೇವಲ ಹಣದ ಆಸೆಯಿಂದಾಗಿ
ನಿರ್ಮಾಣಗೊಳ್ಳುತ್ತಿರುವ ಚಲನಚಿತ್ರಗಳು, ಧಾರವಾಹಿಗಳು ಸಹ ಬಹುಮಟ್ಟಿಗೆ ಲೈಂಗಿಕತೆ
ಮತ್ತು ಅಪರಾಧ ಪ್ರವೃತ್ತಿಗಳಿಗೆ ಉತ್ತೇಜನವೀಯುತ್ತಿವೆ.
ದೂರದರ್ಶನ ಹಾಗೂ
ಸಮೂಹ ಮಾಧ್ಯಮಗಳು ಪಾಶ್ಚಾತ್ಯ ಸಂಸ್ಕೃತಿ, ಸಂಗೀತ ಇನ್ನಿತರೇ ಎಲ್ಲವನ್ನು ನೇರವಾಗಿ
ಅನುಕರಣೆ ಮಾಡುವಂತೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪ್ರೇರೇಪಿಸುತ್ತಿವೆ.
ಹೀಗಾಗಿಯೇ ಇಂದು ವಿಶ್ವದೆಲ್ಲೆಡೆ ಅಶಾಂತಿ ಭಯೋತ್ಪಾದನೆಯಂತಹ ದುಷ್ಕೃತ್ಯಗಳು
ನಡೆಯುತ್ತಿವೆ. ವಿಶ್ವವೇ ಕ್ಷಣಕ್ಷಣಕ್ಕೂ ಭಯದ ನೆರಳಿನಲ್ಲಿ ಬದುಕುವಂತಾಗಿದೆ.
ಎಲ್ಲೆಡೆ ಭಯೋತ್ಪಾದಕರು ಹುಟ್ಟಿಕೊಳ್ಳುತ್ತಿದ್ದಾರೆ. ಅಶಾಂತಿಗೊಂಡಿರುವ
ಯುವಮನಸ್ಸುಗಳು ತಪ್ಪು ಹಾದಿಗಿಳಿಯುತ್ತಿವೆ. ಆದುದರಿಂದ ಅವರುಗಳ ಮೂಲ
ಸಮಸ್ಯೆಗಳೇನು ? ಅವರೇಕೆ ತಪ್ಪು ಹಾದಿ ತುಳಿಯುತ್ತಿದ್ದಾರೆ? ಎಂಬುದನ್ನು
ಕಂಡುಹಿಡಿದು ಅವರನ್ನು ಒಳ್ಳೆಯವರಾಗಿ, ಶೀಲವಂತರಾಗಿ ನಿರ್ಮಾಣಗೊಳ್ಳುವಂತಹ
ಸ್ಪೂರ್ತಿದಾಯಕವಾದ ವಾತಾವರಣವನ್ನು ಒದಗಿಸಬೇಕಾಗಿದೆ.
ಮಹತ್ತರವಾದ
ಜವಾಬ್ದಾರಿಯನ್ನು ಪಾಲಕರು, ಅಧ್ಯಾಪಕರು ಮತ್ತು ಸಮಾಜದ ನೇತಾರರು
ಪ್ರಾಮಾಣಿಕವಾಗಿ ನಿರ್ವಹಿಸಿದಾಗ ಅವರೆ ಉತ್ತಮ, ಉಪಯುಕ್ತವಾದ ಮತ್ತು ಸಮಾಜದ
ಅಭಿವೃದ್ಧಿಗೆ ಶ್ರಮಿಸುವಂತಹ ಯುವ ಶಕ್ತಿಗಳಾಗಿ ರೂಪಗೊಳ್ಳುತ್ತಾರೆ.
ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿಯ ಹಿರಿಯರು ಯುವಕರಿಗೆ ಒಳ್ಳೆಯ
ಮಾರ್ಗದರ್ಶನ ಮಾಡಿ ಉತ್ತಮ ಅವಕಾಶವನ್ನು ಒದಗಿಸಿಕೊಡಬೇಕು. ಕೇವಲ ಅವರನ್ನು ತಮ್ಮ ಅಧಿಕಾರ ದಾಹಕ್ಕಾಗಿ ದುರುಪಯೋಗಪಡಿಸಿಕೊಳ್ಳದೇ ಅವರಿಗೆ
ಸೂಕ್ತ ಸ್ಥಾನಮಾನಗಳನ್ನು, ಅಧಿಕಾರವನ್ನು ಕೊಟ್ಟು ದಕ್ಷತೆಯಿಂದ ಕಾರ್ಯ ನಿರ್ವಹಿಸಲು
ಪ್ರೋತ್ಸಾಹ ಕೊಡಬೇಕು. ಅಂದಾಗ ರಾಷ್ಟ್ರವು ಪ್ರಗತಿ ಪಥದತ್ತ ಸಾಗುತ್ತದೆ. ದೇಶಪ್ರೇಮ,
ದೇಶ ಸೇವೆಗಾಗಿ ದುಡಿಯುವ ಮನೋಭಾವನೆ ಬೆಳೆದು ದೇಶವು ಅಭಿವೃದ್ಧಿಯತ್ತ
ಮುನ್ನಡೆಯುತ್ತದೆ.
ನಮ್ಮ ಯುವ ಜನಾಂಗದಲ್ಲಿ ಅದ್ಭುತವಾದ ಕರ್ತೃತ್ವಶಕ್ತಿಯಿದೆ. ಇಂದಿಗೂ
ಅವರ ರಕ್ತದಲ್ಲಿ ಭಾರತೀಯ ಶ್ರೀಮಂತ ಪರಂಪರೆಯುಳ್ಳ ಸಂಸ್ಕೃತಿಯ ರಸ ಹರಿಯುತ್ತಿದೆ.
ಆದುದರಿಂದ ಯುವ ಜನಾಂಗವು ತಮ್ಮಲ್ಲಿ ಅಡಗಿರುವ ಶಕ್ತಿ ಸಾಮರ್ಥ್ಯಗಳನ್ನು
ಅರಿತುಕೊಂಡು ಭಾರತಮಾತೆಯ ಸೇವೆಯಲ್ಲಿ ತಮ್ಮ ಜೀವನವನ್ನು
ಸಾರ್ಥಕಪಡಿಸಿಕೊಳ್ಳಬೇಕಾಗಿದೆ.
– ಡಾ.ಸಂಜೀವಕುಮಾರ ಅತಿವಾಳೆ. ಬೀದರ.
ಲೇಖಕರ ಪರಿಚಯ:
ಬೀದರ
ಸಾಹಿತಿ ಡಾ. ಸಂಜೀವಕುಮಾರ ಅತಿವಾಳೆ ಯವರು. ಬೀದರ್ ತಾಲ್ಲೂಕಿನ ಅತಿವಾಳ ಗ್ರಾಮದವರು. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿರುವ ಇವರು ಬೀದರ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆಣದೂರವಾಡಿ ಶಾಲಾ ಸಹ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಸ್ವಾತಂತ್ಯ್ರ(ಕವನ ಸಂಕಲನ), ಚೌಕಟ್ಟಿನಾಚೆ(ಲೇಖನಗಳ ಸಂಕಲನ), ಪ್ರಬಂಧ , ಲೋಕ ನುಡಿ ಕಿಡಿ (ಸಂಪಾದಿತ) ಮುಂತಾದ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಲಾಗಿದೆ.