ಆ ದೇವರು ಏನು ಕೊಟ್ಟ ?
ಬಿಸಿಲು ಕೊಟ್ಟ
ಮಳೆ ಕೊಟ್ಟ
ಪರಿಶುದ್ಧ ಗಾಳಿ ಬಿಟ್ಟು
ನಿಸರ್ಗ ಸೌಂದರ್ಯ ಇಟ್ಟ
ಜೀವಿಗಳಲ್ಲಿ
ಮಧುರ ಬಾಂಧವ್ಯ ಸೃಷ್ಟಿಸಿ
ಸ್ಪಷ್ಟೀಕರಣ ಜೀವಕ್ಕೆ
ಆಯಸ್ಸಿನ ಹೆಸರಲ್ಲಿ
ಉಸಿರು ಕೊಟ್ಟ
ಜೀವಿಸಲು ವಾತಾವರಣದ
ಹೆಸರಲ್ಲಿ ಖಾಲಿ ಜಾಗ ಇಟ್ಟು
ಬೇಕಾದ ನ್ನು ತುಂಬಿಕೊಳ್ಳಿ ಎಂಬ
ಬುದ್ಧಿಯನ್ನು ಕೊಟ್ಟ
ಯಾವುದೂ ಒಳಿತು
ಯಾವುದು ಕೆಡಕು
ಯಾವ ನೀತಿ
ಅದು ಯಾವ ರೀತಿ ಎಂಬ
ಸೃಜನಶೀಲತೆಯ ಸಂಸ್ಕಾರ ಕೊಟ್ಟ
ನೀನು ನೀನಾಗಿ
ನಾನು ನಾನಾಗಿ
ಕಣ್ಣು ಮುಚ್ಚಾಲೆ ಆಟದ
ಬಹಿರಂಗ ಅಂತರಂಗದಲ್ಲಿರುವ
ಸತ್ಯತೆಯನ್ನು ಇಟ್ಟ
ಚೆನ್ನಾಗಿ ಉಣ್ಣು
ಚೆನ್ನಾಗಿ ಮಾತನಾಡು
ಚೆನ್ನಾಗಿ ದುಡಿ
ಹೃದಯ ಶೀಲತೆಯಿಂದ
ಸ್ವರ್ಗದೆಡೆಗೆ ನಡೆ ಎಂಬ
ಜ್ಞಾನವನ್ನು ಕೊಟ್ಟ
– ಬಸವಪ್ರಕಾಶ ಬಿ ಕೊಡಂಬಲ್ ಬೇಮಳಖೇಡ.