Oplus_131072

ಮುಂಜಾನೆ ಮಾತುಗಳು

ನಮ್ಮ ಬದುಕಿನ ಬಿರುಕುಗಳನ್ನು
ಮುಚ್ಚಿಕೊಳ್ಳಲು ಹಲವರ ಆಸೆಗೆ
ಮುಳ್ಳಾಗದಿರಿ.

ನಗುತ್ತಾ ಅನುಭವಿಸಿ
ಸುಖ ದುಃಖಗಳನ್ನು
ಮತ್ತೊಬ್ಬರಿಗೆ ಹರಸಿ
ಸಹಾಯ ಹಸ್ತದಿಂದ ಒಳ್ಳೆಯದನ್ನೇ ಮಾಡಿರಿ.

ಆಸೆ ಅತಿಯಾದರೆ
ದುರಾಸೆ ಇನ್ನೂ ಹೆಚ್ಚು
ಇದರ ಮಧ್ಯೆ ಸಹನೀಯತೆ
ಬೆಳೆಸಿಕೊಂಡರೆ ಇಡೀ ದೇಶಕ್ಕೆ ಹಿತವ ಕಾಣಿರಿ.

ಮನುಕುಲದ ಒಳಿತಿಗೆ
ಮಾನವನ ದುಡಿಮೆಗೆ
ದೇಶ ಕಾಯುವ ಯೋಧನಿಗೆ
ಹಸಿರು ಹೊತ್ತ ಭೂಮಿತಾಯಿಗೆ
ಶಿರಷ್ಟಾಂಗ ನಮಸ್ಕಾರಗಳು

ಆಕಾಶ ಭೂಮಿ ಒಂದಾಗಲಾರದು
ಸಾವು ನೋವು ಒಂದಾಗಲಾರದು
ಬದುಕು ಎಂಬ ಬಂಡೆಯು
ಈಸಿಕೊಂಡು ಮುನ್ನಡೆದಾಗ

ಕವಿತಾ ಎಮ್ ಮಾಲಿ ಪಾಟೀಲ. ಜೇವರ್ಗಿ

ಕವಯತ್ರಿ ಪರಿಚಯ.

ಕವಿತಾ ಎಮ್. ಮಾಲಿ ಪಾಟೀಲ

ಕವಯತ್ರಿ ಕವಿತಾ ಎಮ್. ಮಾಲಿ ಪಾಟೀಲ ರವರು ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಮಂದೇವಾಲ ಗ್ರಾಮದವರು.
ಇವರು ಡಿ.ಇಡಿ, ಬಿ.ಎ.ಪದವೀಧರರು ಮತ್ತು ಎಂ.ಎ ಸಾತ್ನಕೋತ್ತರ ವಿದ್ಯಾರ್ಥಿನಿಯಾಗಿದ್ದು, ಸದ್ಯ ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಅತಿಥಿ ಶಿಕ್ಷಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ.

ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತರಾಗಿದ್ದ ಇವರು ಕತೆ ಕವನ ಲೇಖನ ಮೊದಲಾದ ತರಹದ ಬರಹಗಳು ಬರೆದಿದ್ದಾರೆ. ಇವರ ಸಾಹಿತ್ಯಕ್ಕೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ಇವರಿಗೆ ‘ಉತ್ತಮ ಶಿಕ್ಷಕಿ’ ಮತ್ತು ‘ಆದಶ೯ ಶಿಕ್ಷಕಿ’ ಎಂಬ ಪ್ರಶಸ್ತಿಯು ಕೂಡ ಪಡೆದಿದ್ದಾರೆ.
ಇವರ ಬರಹಗಳು ರಾಷ್ಟ್ರೀಯ, ಅಂತರಾಷ್ಟ್ರೀಯ, ಮಟ್ಟದಲ್ಲಿ ಕೂಡ ಪ್ರಕಟವಾಗಿವೆ. ಹಾಗೂ ಆನ್ಲೈನ್ ನಲ್ಲಿ ನಡೆದ ಸಾಹಿತ್ಯ ಸ್ಪರ್ಧೆಗಳಲ್ಲಿ ಇವರಿಗೆ 500ಕ್ಕೂ ಹೆಚ್ಚು ಪ್ರಶಸ್ತಿ ಪುರಸ್ಕಾರಗಳು ಲಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಅಷ್ಟೇಯಲ್ಲದೆ ಇವರು ನಾಡಿನ
ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯದಲ್ಲಿಯೇ ಇವರ ಸಾಹಿತ್ಯವು ಪುಸ್ತಕ ರೂಪದಲ್ಲಿ ಪ್ರಕಟಗೊಳ್ಳುತ್ತಲಿವೆ.

One thought on “ಮುಂಜಾನೆ ಮಾತುಗಳು”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ