ಕಲ್ಯಾಣ ನಾಡಗೀತೆ.
ಓಂಕಾರ ರೂಪಂ ಓಂಕಾರ ದೀಪಂ
ಓಂಕಾರ ನಾದಂ ಓಂಕಾರ ತಾಳಂ
ಓಂಕಾರ ಸ್ವರೂಪಂ ಓಂಕಾರ ನಿರೂಪಂ
ಓಂಕಾರ ಧೀಶಂ ಓಂಕಾರ ಹರಿಯಂ
ಓಂ ನಮಃ ಶರಣಾಯಂ ಓಂ ನಮಃ ಗುರುವಾಯಂ
ಸವ೯೦ ಸವೊ೯ತ್ತಮಂ ಸಕಲಂ ಶರಣಂ
ಶರಣರ ನಾಡಿನಲ್ಲಿ ಕಲ್ಯಾಣ ಉತ್ಸವಂ
ಸವ೯ ಸ್ವತಂತ್ರಂ ನಿಜಾಮನಿಂದ ಮುಕ್ತಿಂ
ಸಂಸ್ಥಾನ ಸಾಗರವಂ ಸವೇ೯ಕ್ಷ ಸಮವಂ
ಕಲ್ಯಾಣ ನಾಡು ಕಲ್ಪತರು ಬೀಡಂ
ಕಲ್ಪವೃಕ್ಷ ಕಾಮದೇನು ಕರುನಾಡಂ
ಹೈದರಾಬಾದ್ ನಿಜಾಮನಿಂದ ವಿದಾಯಂ
ಆ ಸಪ್ತ ಜಿಲ್ಲೆ ಪೂರ್ಣ ಸ್ವತಂತ್ರಂ
ಸಾಹಿತ್ಯ ಸೃಷ್ಟಿಗೆ ಮೊದಲಂ
ಗುರು ಶರಣರ ವಚನಗಳ ಬೀಡಂ
ಭಕ್ತಿ ಗೀಗಿ ಗೀತೆ ಗಾಯನದ ತವರಂ
ಕವಿ ಕೋಗಿಲೆಯ ಖನಿಜ ಸಂಪತ್ತುಂ
–ಕವಿತಾ ಎಮ್. ಮಾಲಿ ಪಾಟೀಲ್