ಮಾತು ಜಾರಿದ ಮೇಲೆ
ಮಾತಿಗಿಂತ ಮೌನಲೇಸು
ಮೌನದಿಂದ ಮಥಿಸು
ಆಡಿ ಕೆಡಬೇಡ ಆಡದೆ ಇರಬೇಡ
ಹುಸಿ ನುಡಿಯ ಆಡಬೇಡ//
ಮಾತಿನಲ್ಲಿ ತೂಕವಿರಲಿ
ಕೃತಿಯಲ್ಲಿ ಕಂಡುಬರಲಿ
ನುಡಿಯಲ್ಲಿ ನಯವಿರಲಿ
ನಡತೆ ಸತ್ಯ ಶುದ್ಧವಿರಲಿ//
ಇತರರನ್ನು ಇರಿಯದಿರಲಿ
ತನ್ನ ತಾನು ಬಣ್ಣಿಸದಿರಲಿ
ಮನಕೆ ಮದ್ದಾಗುವಂತಿರಲಿ
ಬಾಳಿಗೆ ಚಂಬೆಳಕಾಗಿರಲಿ//
ಆಡಿದ ಮಾತು ಮತ್ತೇಬರದು
ಆಡುವ ಮುಂಚೆ ಜಾಗ್ರತೆ ಬೇಕು
ಒಡೆದ ಮುತ್ತು ಆಡಿದ ಮಾತು
ಮತ್ತೇ ಜೋಡಿಸಲಾಗದು ಎಂದೆಂದು
ಕೊಟ್ರೇಶ ಜವಳಿ
ಹಿರೇವಡ್ಡಟ್ಟಿ