ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ .
ಭಾರತದ ಸಂವಿಧಾನ ಶಿಲ್ಪಿ ಡಾ. ಬಿಆರ್ ಅಂಬೇಡ್ಕರ್ !
ನಿನಗೆ ಮನುಕುಲದ ಸಹಸ್ರ ಕೋಟೆಯ ನಮಸ್ಕಾರ !
ನಿನ್ನ ಅರ್ಹತೆಗೆ ಒದಗಿ ಬಂದಿವೆ ನೂರಾರು ಪುರಸ್ಕಾರ ! ಮಾನವ ಜನಾಂಗವು ಕಲಿಯಬೇಕು ನಿನ್ನ ನೋಡಿ ಸಂಸ್ಕಾರ !
ಕಡು ಬಡತನದಲ್ಲಿ ಜನಿಸಿ ಬೆಳೆದೆ ನೀನು ಜೈ ಭೀಮ ! ಇರುವುದಕ್ಕೆ ಸಿಗಲಿಲ್ಲ ನಿನಗೆ ಒಳ್ಳೆಯ ವಸತಿಧಾಮ !
ನೀ ಹುಟ್ಟಿದಾಗ ಸಮಾಜದಲ್ಲಿ ಹೆಚ್ಚು ಕಾಡುತ್ತಿತ್ತು ಜಾತಿ ಕೋಮ !
ಒಂದು ದಿನವಾದರೂ ಸುಖವಾಗಿ ಇರಲಿಲ್ಲ ನೀನು ಕ್ಷೇಮ !
ನೀನು ಕೂಡುವುದಕ್ಕೆ ಶಾಲೆಯಲ್ಲಿ ಹರಕು ಗೋಣಿಚೀಲ !
ನೀರಡಕ್ಕೆಗೆ ಹಾಕುತ್ತಿದ್ದರು ಸುರಿದು ನೀರು ಮ್ಯಾಲ !
ನೀನು ಒಂದು ಸಲವಾದರೂ ಕುಡಿಯಲಿಲ್ಲ ಸಕ್ಕರೆ ಹಾಲ!
ಇದಕ್ಕೆಲ್ಲ ಕಾರಣ ಕಿತ್ತು ತಿನ್ನುವ ಬಡತನ ಮೂಲ !
ಹಗಲು ರಾತ್ರಿ ಎನ್ನದೆ ಓದಿ ಬರೆದು ನೀನು ಜಾಣನಾದೆ ! ಯಾರು ಪಡೆಯದ ಪದವಿ ಪಡೆದುಕೊಂಡು ನೀನು ಶ್ರೇಷ್ಠನಾದೆ !
ದೇಶ-ವಿದೇಶಗಳ ಸಂವಿಧಾನ ಓದಿ ನೀ ತಾಳೆ ನೋಡಿದೆ ! ಭಾರತದ ಸಂವಿಧಾನ ಬರೆದು ನೀ ಬಾಳು ಜೇನು ಮಾಡಿದೆ !
– ರವಿ ಎಸ್.ಮೋಘಾ .ಕಿಣ್ಣಿ ಸಡಕ್ ತಾ.ಕಮಲಾಪುರ ಜಿ.ಕಲಬುರಗಿ