Oplus_131072

 ಅರುವಿನ ಮದವು ಹೇಚ್ಚಾದಾಗ..

ಆಟ ಹುಡುಗಾಟದ ಕೋಟೆಯೊಳಗೆ/
ಪಾಠ ಮಾಡಲು ಬಂದವರ ಬಳಗ/
ಪ್ಯಾಟಿಯ ಗುಂಗಿನೊಳಗ ಹೋದರು ಒಳಗೆ /
ನೋಡಿ ನೋಡಿ ದಂಗಾದರು ಅರುವಿನ ಮರುವಿನೊಳಗ//೧//

ಗುರು ಇಲ್ಲದೆ ಗುರಿ ಇರುವುದಿಲ್ಲಾ ನಮ್ಮೊಳಗ /
ಗರಿ ಗೆದರಿವೇ ಝರಿಯಾಗಲು ಈ ಕೋಟೆಯೊಳಗ/
ಗರ್ವದೊಳಗ ದುಮುಕಿದರ ನಡೆಯುವದಿಲ್ಲಾ ಇದರೊಳಗ/
ಕೆಡವಿ ಬಿಡುತ್ತಾರೋ…ಎಚ್ಚರಿರು ಈ ಅರಮನೆಯೊಳಗ //೨//

ಮನಸಿರಲಿ ನಿನ್ನೊಳಗದು ಹಸಿಯಾಗಿರಲಿ/
ಕನಸು ಕಾಣ ಬೇಡ ಇದರೊಳಗಿದೆ ಬಲು ಹುದಲು /
ಕೂರುವದಕ್ಕೆ ಜಾಗವಿಲ್ಲಾ ನಿನಗಿಲ್ಲಿ ಈಗ ಈಗ ಅಗಲ/
ಮಾಡಿ ಕುಂತ್ತಾರ ನಿನ್ನೊಳಗಿನ ಚರ್ಮದ ತೋಗಲ//೩//

ಕಲರಗೆಡಿ ಹಂಗ ಇಳಿಯಬ್ಯಾಡ ಆಳೈತಿ ಒಳಗ/
ಕಸಬರಿಗಿ ಕಟ್ಟಿ ಬಿಟ್ಟಾರ ಜೋಕೆ ನಿನ್ನ ಕೊರಳೊಳಗ/
ಕಸುವಿದ್ದರೆ ಸಾಲದು ನಿನ್ನ ಅರುವಿನ ಮುಚ್ಚಳದೊಳಗ/
ಖುಷಿ ಎಂಬ ಹೂವು ಅರಳಿಸಿಕೊ…ನಿನ್ನ ಮನದೊಳಗ//೪//

ಮಸಿದು ಮಸಿದು ಮುಚ್ಚಬ್ಯಾಡ ನಿನ್ನೊಳಗಿರುವ ಮನಸನ್ನ/
ಹೊಸೆದು ಹೊಸೆದು ಹೊಚ್ಚಬ್ಯಾಡ ನಿನ್ನೊಳಗಿರುವ ಕನಸನ್ನ/
ಹಸಿದು ಬಂದವರ ಸಂಕಟ ನಿನಗೇಲ್ಲಿ ಕಾಣುತ್ತಿದೆ ಆ ನಿನ್ನ ಮದದೊಳಗ /
ಕಸಿದು ಕೊಂಡು ಕಳಸಬ್ಯಾಡ ಈ ಕವನ ಬರೆದ ಜಲ್ಲಿಗೇರಿ ಕವಿಯನ್ನ/
ಅವರೂರು ಹಿರೇವಡ್ಡಟ್ಟಿಯೊಳಗ//೫//

ಕಳಕಪ್ಪ ಜಲ್ಲಿಗೇರಿ
ಹಿರೇವಡ್ಡಟ್ಟಿ.ಗದಗ

 

One thought on “ಅರುವಿನ ಮದವು ಹೇಚ್ಚಾದಾಗ..”
  1. ಬಹಳ ಉತ್ತಮವಾದ ಪತ್ರಿಕೆ ಇದೆ ಇದರೊಳಗೆ ಕಥೆ ಕವನ ಲೇಖನಗಳನ್ನ ಉತ್ತಮವಾಗಿ ಬರೆಯುವ ಕವಿಗಳು ಲೇಖಕರು ಇದ್ದಾರೆ ಇನು ಮುಂದೆ ಬಹಳ ಚನ್ನಾಗಿ ಮೂಡಿ ಬರಲಿ ಈ ಕಲ್ಯಾಣ ಸಿರಿಗನ್ನಡ ಆನ್ ಲೈನ್ ಪತ್ರಿಕೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ