ಆ ಬೆತ್ತ
ಹನ್ನೆರಡನೆಯ ಶತಮಾನದ ಸಮಕಾಲಿನ ಶಿವಶರಣ ಸಂಗಯ್ಯ
ಮುಗ್ಧತೆಯಲ್ಲಿದ್ದ ಶರಣರ ಸಮ್ಮುಖದಲ್ಲಾದರು ಮುಗ್ಧಸಂಗಯ್ಯ
ಹೇಳುವೆ ಕೇಳಿರಿ ಇವರಲ್ಲೊಂದು ಇದ್ದ ಬಳಸಿದ ಬೆತ್ತದ ಕಥೆಯನ್ನ
ಒಮ್ಮೆ ನಡೆಯಿತು ಒಂದು ದಿನ ಆ ಬೆತ್ತಕ್ಕೆ ಬೆರಗಾದ ಘಟನೆಯನ್ನ
ಒಬ್ಬರ ಆಕಳು ಮತ್ತೊಬ್ಬರ ಹೊಲದಲಿ ಹುಲ್ಲು ತಿಂದಿರಲು ಆ ಆಕಳನ್ನ ಕೊಂದರತ್ತ
ಕೊಂದ ಆಕಳನ್ನು ಎಳೆದು ಎಳೆಯುತ್ತ ತಂದರು ಮುಗ್ಧ ಸಂಗಯ್ಯನವರ ಆಶ್ರಮದತ್ತ
ಈ ಆಕಳನ್ನು ಈ ಸಂಗಯ್ಯನೇ ಕೊಂದನೆಂದು ಆರೋಪಿಸಿದರು ಜನರು ಅವರತ್ತ.
ಆಗ ಮುಗ್ಧ ಸಂಗಯ್ಯನವರ ಕೈಯಲಿದ್ದ ಬೆತ್ತ ತಿರುವಿದರು ಆ ಆಕಳ ಸುತ್ತಮುತ್ತ
ತಕ್ಷಣ ಆಕಳಿಗೆ ಜೀವ ಬಂದು ಎದ್ದು ನಿಂತು ನೋಡತೊಡಗಿತ್ತು ಜೀವ ಕೊಟ್ಟವರತ್ತ
ಆಗವರು, ನಿನಗೆ ಕೊಂದವರ ಮನೆಯಲ್ಲಿ ಹುಲ್ಲನು ತಿಂದು ಪ್ರಾಣ ಬಿಡಬೇಕೆಂದರಂತ್ತ
ಹೇಳಿದ ಹಾಗೆ ಮಾಡಿತು ಆಕಳು ತಿಳಿಯಿತು ಜನರಿಗೆ ಮುಗ್ಧಸಂಗಯ್ಯನ ಮಹಿಮೆ ಎಷ್ಟಂತ
ಸುಳ್ಳಿನ ಸಂತೆ ಊರಲ್ಲಿ ನಾನಿರಲಾರೆನೆಂದು ಉಳಿದರು ಹುಟ್ಟಿದೂರು ಬಿಟ್ಟು ಪಕ್ಕದೂರಿನತ್ತ
ಆ ಬೆತ್ತ ಈಗಲೂ ಕಾಣುವಿರಿ ಚಿಕ್ಕಮಠ ಎಂಬ ಮನೆಮಠದಲ್ಲಿ ಇರುವದನ್ನ. ಶತಶತಮಾನದಿಂದಲೂ ಪೂಜಿಸುತ್ತ ಬರುವರು ಜಗುಲಿಯಲಿಟ್ಟು ಆ ಬೆತ್ತವನ್ನ
ಮಕ್ಕಳು ಹೊಟ್ಟೆ ನೋವು ಎನ್ನುತ್ತಿರಲು ಎಲ್ಲಿಯೂ ಹೋಗರು ಅತ್ತಿತ್ತ
ನೇರವಾಗಿ ಕರೆತರುವರು ಚಿಕ್ಕ ಮಕ್ಕಳನ್ನ ಮಠದಲ್ಲಿರುವ ಈ ಬೆತ್ತದತ್ತ
ಆ ಬೆತ್ತವು ಮೂರು ಸುತ್ತು ಸುತ್ತುತ್ತಿರಲು ಮಕ್ಕಳ ಸುತ್ತಮುತ್ತ
ಬಂದ ಜ್ವರವು ಮತ್ತೆ ಬರದಂತೆ ಹೋಗುವುದು ಓಡೋಡುತ್ತ
ಮೈತುಂಬ ಕಣ್ಣುಗಳಂತಿರುವ ಆ ಬೆತ್ತ ನೋಡಿದವರತ್ತ. ಹಸಿಖುಷಿಯಲ್ಲಾಡುವರು ಊರ ತುಂಬ ನಲಿದಾಡುತ್ತ
ಇವರ ಜನ್ಮ ಸ್ಥಳ ಗವಿ ಮಠ ಗುಡಿ ಇಂದಿಗೂ ಕಾಣುವೇವು ಬಂದರೆ ಶಿವಪೂರ ಗ್ರಾಮದತ್ತ ನೋಡ ಬನ್ನಿ ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ದಲ್ಲಿರುವ ಆ ಬೆತ್ತ
— ವೀರಶೆಟ್ಟಿ ಎಂ.ಪಾಟೀಲ,ಬಸವಕಲ್ಯಾಣ
ಹನ್ನೆರಡನೇ ಶತಮಾನದ ಶರಣ ಕುರುಹುಗಳು ಕಾಣುವುದು ತುಂಬಾ ವಿರಳ. ಹರಳ್ಯನವರ ಚಮ್ಮಾವುˌ ಮಡಿವಾಳ ಮಾಚಯ್ಯನವರ ಬಿಚ್ಚುಗತ್ತಿˌˌ ಹಡಪದ ಅಪ್ಪಣ್ಣನವರ ದೀವಟಿಗೆˌ ಮುಗ್ಧ ಸಂಗಯ್ಯನವರ ಬೆತ್ತ ಈ ನಾಲ್ಕು ವಸ್ತುಗಳು ನಾನು ಕೈಯಲ್ಲಿ ಹಿಡಿದು ನೋಡಿದ್ದೇನೆಂದು ಹೇಳಿಕೊಳ್ಳಲು ನನಗೆ ಖುಷಿ ಎನಿಸುತ್ತದೆ.
ಮುಗ್ಧ ಸಂಗಯ್ಯನವರ ಬೆತ್ತದ ಬಗ್ಗೆ ಕವನ ಬರೆದಿರುವುದು
ಇಲ್ಲಿ ಆ ಕವನ ಪ್ರಕಟಿಸಿದಕ್ಕೆ
ಸಂಪಾದಕರಿಗೆ
ತುಂಬು ಹೃದಯದ ಧನ್ಯವಾದಗಳು