Oplus_131072

1. ಮದುವೆಯಲ್ಲಿ ಕಾಶೀಯಾತ್ರೆಗೆ ಶಾಸ್ತ್ರ ಮಾಡಲು ಕಾರಣವೇನು ?

ಹಿಂದಿನ ಕಾಲದಲ್ಲಿ ಮದುವೆ ಸಂಪ್ರದಾಯದ ಪದ್ಧತಿ ಪ್ರಕಾರಗಳಲ್ಲಿ ವರನು ಮದುವೆಯಲ್ಲಿ ಕಾಶೀ ಯಾತ್ರೆಗೆ ಹೋಗುವೆನು ಎಂದು ವಧುವಿನ ತಂದೆಗೆ ಹೇಳುವುದು ಪದ್ಧತಿಗಳಲ್ಲಿ ಒಂದಾಗಿದೆ.ಇದು ಮದುವೆ ಮುನ್ನ ಅರಿಶಿನ ಶಾಸ್ತ್ರ ಮಾಡಿದ ಮೇಲೆ ಇನ್ನು ಕನ್ಯಾದಾನ ಮಾಡಬೇಕು ಎನ್ನುವ ಸಮಯದಲ್ಲಿ ವರನು ಹೀಗೆ ಹೇಳುತ್ತಾನೆ.ಅದಕ್ಕೆ ಕಾರಣವೇನು ಎಂದರೆ ಹಿಂದೆ ಎಲ್ಲ ಗಂಡು ಮಕ್ಕಳು ಈ ವಿದ್ಯಾಭ್ಯಾಸಕ್ಕಾಗಿ ಕಾಶೀಗೆ ಹೋಗಿ ಬಂದ ಮೇಲೆ ಅವನಿಗೆ ಮದುವೆ ನಿಶ್ಚಯ ಮಾಡುತ್ತಿದ್ದರು.ಆಗ ವಧುವಿನ ತಂದೆ ಹೆಣ್ಣು ಕೊಟ್ಟ ಮದುವೆ ಮಾಡಲು ಒಪ್ಪಿಗೆ ಸೂಚಿಸುವ ಸಲುವಾಗಿ ವರನು ನೀವು ಹೆಣ್ಣು ಕೊಟ್ಟರೆ ನಾನು ನಿಮ್ಮ ಮಗಳನ್ನು ಮದುವೆ ಮಾಡಿಕೊಳ್ಳವೆ.

ಇಲ್ಲಂದ್ರೆ ನಾನು ಕಾಶೀ ಯಾತ್ರೆಗೆ ಪುನಃ ಹೋಗುವೆ ಎಂದಾಗ ವಧುವಿನ ತಂದೆ “ಬೇಡಪ್ಪ, ನೀನು ಈಗ ಎಲ್ಲ ವಿದ್ಯೆಯನ್ನು ಕಲಿತು ಯೋಗ್ಯನಾಗಿರುವೆ . ಎಲ್ಲಿಗೂ ಹೋಗಬೇಡಿ ಬಾ ನನ್ನ ಮಗಳನ್ನು ಕೊಟ್ಟು ಮದುವೆ ಮಾಡುವೆ ” ಎನ್ನುತ್ತಾ ವರನು ನಾರಾಯಣ ಸ್ವರೂಪಿ ಎಂದು ಅವನ ಪಾದ ತೊಳೆದು ಪೂಜೆ ಮಾಡಿ ಲಕ್ಷ್ಮಿ ಸ್ವರೂಪವಾದ ತನ್ನ ಮಗಳನ್ನು ಕೊಟ್ಟು ಕನ್ಯಾದಾನ ಮಾಡಿ ಗುರು ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಿ ಇಬ್ಬರನ್ನು ಆಶೀರ್ವಾದಿಸಿ ಹಾರೈಸುತ್ತಾರೆ.ಹೀಗೆ ಮದುವೆಯ ಸಂಪ್ರದಾಯದಲ್ಲಿ ಇನ್ನೂ ಹಲವು ವಿಶಿಷ್ಟ ರೀತಿಯ ಪದ್ಧತಿಯಾಗಿವೆ.

*****************

2. ಮುತ್ತೈದೆತನ ಸೌಂದರ್ಯಕ್ಕೆ ಮೆರುಗು

 

ಹೆಣ್ಣು ಮಕ್ಕಳು ಸೌಂದರ್ಯಕ್ಕೆ ಮೆರುಗು ಅದರಲ್ಲಿ ಮುತ್ತೈದೆ ಭಾಗ್ಯವು ಅವರ ಅಂದವನ್ನು ಇನ್ನಷ್ಟು ಹೆಚ್ಚಿಸುವುದು.ಮುತ್ತೈದೆ ಎಂದರೆ ತಾಳಿ . ಕುಂಕುಮ.ಬಳೆ.ಕಾಲುಂಗರ.ಮೂಗುತಿ.ಈ ಐದು ಮುತ್ತನ್ನು ಹಾಕಿದವರು ಅಂದರೆ ವಿವಾಹಿತೆಯನ್ನು ಮುತ್ತೈದೆ ಎನ್ನುವರು.ಇನ್ನೂಂದು ರೀತಿಯಲ್ಲಿ ಹೇಳುವುದಾದರೆ ನಯ.ವಿನಯ.ಅನುಕಂಪ.ತ್ಯಾಗ.ಲಜ್ಜಿಯನ್ನು ಹೊಂದಿರುವಳೇ ಹಾಗೆ ಈ ಪೂಜೆ.ಸಭೆ.ಸಮಾರಂಭಗಳಲ್ಲಿ ಕನ್ನಿಕೆಯನ್ನು ಮುತ್ತೈದೆಯಂದು ಕರೆದು ಬಾಗಿನ ಕೊಡವರು.ಹೆಣ್ಣು ಚಂಚಲೆ . ಕಡಿಮೆ ಮಾಡಲು ಕುಂಕುಮವು ಭೂಷಣ.ಮೂಗುತಿಯು ವಾಯು ಬಂಧನ.ಕಾಲುಂಗರ ಗರ್ಭಕೋಶಕ್ಕೆ ಆರೋಗ್ಯಕರವಾಗಿದೆ.ಬಳೆ ಧರಿಸುವುದರಿಂದ ರಕ್ತ ಪರಿಚಲನೆ ಹೆಚ್ಚಿಸುತ್ತದೆ.ಅವಳ ಪತಿಯು ದೀರ್ಘಾಯುಷ್ಯವನ್ನು ಸೂಚಿಸುತ್ತದೆ.ವಿವಾಹ ತಾಳಿ ಕಟ್ಟುವ ಮುನ್ನ ಅದನ್ನು ಎಲ್ಲ ಗುರುಹಿರಿಯರ ಸಮ್ಮುಖದಲ್ಲಿ ಕಟ್ಟುವುದರಿಂದ ಹಿರಿಯರ ಆಶೀರ್ವಾದವು ಪತಿ ಪತ್ನಿ ಇಬ್ಬರಿಗೂ ಸದಾ ರಕ್ಷದಾರವಾಗಿದೆ.ಅದರಲ್ಲಿ ಕರಿಮಣಿ ದೃಷ್ಟಿಯಾಗದಂತೆ ಕಾಯುವುದು.

ಈ ಐದು ಮುತ್ತುಗಳು ಒಟ್ಟಿನಲ್ಲಿ ಹೆಣ್ಣಿಗೆ ಭೂಷಣವು.

ರಾಧಾ ಹನುಮಂತಪ್ಪ ಟಿ ಹರಿಹರ

One thought on “ಎರಡು ಹಿಂದೂ ಸಂಪ್ರದಾಯ ಪದ್ದತಿಗಳು.”

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ