Oplus_131072

ನಮ್ಮ ಕಾನೂನು ನಮ್ಮ ಶಕ್ತಿ

“ಕಾನೂನು ಎಂಬುದು ಎಲ್ಲ ಭಾರತೀಯ ಪ್ರಜೆಗಳಿಗೆ ಅತ್ಯವಶ್ಯಕವಾದದ್ದು”. ಕಾನೂನನ್ನು ಹೊರತು ಪಡಿಸಿ ಯಾರು ಕೂಡ ನೆಮ್ಮದಿಯ ಜೀವನ ನಡೆಸುವುದು ಬಲು ಕಠಿಣವಾಗಿದೆ. ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ ಏನೆಂದು ನೋಡುವುದಾದರೇ ಯಾರಿಗೆ ಕಾನೂನಿನ ಅರಿವು ಇರುವುದಿಲ್ಲವೋ ಅವರಿಗೆ ಕಾನೂನು ಅರಿವು ಮೂಡಿಸುವ ಕ್ರಿಯೆಯಲ್ಲಿ ನಿರಂತರವಾಗಿದೆ ಎಂದು ಹೇಳಬಹುದು. ಅಂದರೆ ಜನ ಸಾಮಾನ್ಯರಿಗೆ ಕಾನೂನಿನ ಅರಿವು ಇರುವುದಿಲ್ಲ ಅಂತಹ ಸಂದರ್ಭದಲ್ಲಿ ಕಾನೂನಿನ ಅರಿವು ಮೂಡಿಸುವ ಜವಾಬ್ದಾರಿಯನ್ನು ಕಾನೂನು ಸೇವಾ ಪ್ರಾಧಿಕಾರಗಳು ಹೊಂದಿರುತ್ತವೆ.

“ಕಾನೂನು ಸೇವಾ ಪ್ರಾಧಿಕಾರ” ಭಾರತದಲ್ಲಿ  1987 ರಲ್ಲಿ ಜಾರಿಗೆ ಬಂದಿರುತ್ತದೆ. ಅದೇ ರೀತಿ ಕರ್ನಾಟಕದಲ್ಲಿ  1995 ರಲ್ಲಿ ಜಾರಿಗೆ ಬಂದಿರುತ್ತದೆ. ಮತ್ತು ಕಾನೂನು ಸೇವಾ ಪ್ರಾಧಿಕಾರವು ಮಾನ್ಯ  ‘ ಸರ್ವೋಚ್ಚ ನ್ಯಾಯಾಲಯ’ದಿಂದ ಹಿಡಿದು ತಾಲೂಕ ಮಟ್ಟದ ನ್ಯಾಯಾಲಯದವರೆಗೆ ತನ್ನ ಕಾರ್ಯವನ್ನು ನಿರ್ವಹಿಸುಸುತ್ತದೆ. ರಾಷ್ಟ್ರ ಮಟ್ಟದಲ್ಲಿ ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ಮತ್ತು ರಾಜ್ಯ ಮಟ್ಟದಲ್ಲಿ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ಮತ್ತು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಜೊತೆಗೆ ತಾಲೂಕ ಮಟ್ಟದಲ್ಲಿ ತಾಲೂಕ ಕಾನೂನು ಸೇವಾ ಸಮಿತಿಯು ಕಾನೂನು ಅರಿವನ್ನ ಮೂಡಿಸುತ್ತದೆ.

ಪೋಕ್ಸೊ ಕಾಯ್ದೆ.

ಇದು ಮಕ್ಕಳ ಮೇಲಿನ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ್ದಾಗಿದ್ದು ಎಂದು ಹೇಳಲಾಗುತ್ತದೆ. ಮತ್ತು ಮಕ್ಕಳನ್ನು ಲೈಂಗಿಕ ಕಿರುಕಳದಿಂದ ರಕ್ಷಿಸಲು *2012* ರಲ್ಲಿ ಪೋಕ್ಸೊ ಕಾಯಿದೆಯನ್ನು ಜಾರಿಗೆ ತರಲಾಯಿತು. ನಂತರ *2019* ರಲ್ಲಿ ಇದನ್ನು ತಿದ್ದುಪಡಿ ಮಾಡಿ ಲೈಂಗಿಕ ಅಪರಾಧಗಳಿಗೆ ಮರಣದಂಡನೆಯನ್ನು ನೀಡಲಾಗಿದೆ.
ಅಪ್ರಾಪ್ತ ವಯಸ್ಕರ ನಡುವೆ ಸಮ್ಮತಿಯ ಲೈಂಗಿಕ ಕ್ರಿಯೆಯೂ ಕೂಡ ಅಪರಾಧವಾಗಿದೆ. ಆದ್ದರಿಂದ ಲೈಂಗಿಕ ಅಪರಾಧಗಳಿಗೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.

ಸಾರ್ವತ್ರಿಕ ವಯಸ್ಕ ಮತದಾನ ಪದ್ಧತಿ’

ನಮ್ಮ ಭಾರತದ ಸಂವಿಧಾನದ ಮೂಲಕ 18 ವರ್ಷ ತುಂಬಿದ ಎಲ್ಲಾ ವಯಸ್ಕ ಗಂಡು, ಹೆಣ್ಣು, ಜಾತಿ, ಮತ, ಜನಾಂಗ, ಬಡವ-ಶ್ರೀಮಂತ ಯಾವುದೇ ತಾರತಮ್ಯ ವಿಲ್ಲದೇ ಸಾರ್ವತ್ರಿಕ ಮತದಾನ ಮಾಡುವ ಹಕ್ಕನ್ನು ನಮ್ಮ ಸಂವಿಧಾನ ಒದಗಿಸಿದೆ ಎಂದು ಹೇಳಬಹುದು.

ನೀವು ಮಾತದಾರರಾದರಷ್ಟೆ ಪ್ರಯೋಜನವಿಲ್ಲ.
ಕಾನೂನನ್ನು ರೂಪಿಸುವರು ಆಗಬೇಕು.
ಇಲ್ಲವಾದರೆ ಕಾನೂನನ್ನು ರೂಪಿಸಬಲ್ಲರು
ಮತದಾರರ ಮೇಲೆ ಸವಾರಿ ಮಾಡಬಲ್ಲರು”

        – ಡಾ. ಬಿ.ಆರ್.ಅಂಬೇಡ್ಕರ.

 

ಮದಕರಿ ಕಾಂಬಳೆ
ಕುಂಚನೂರು.
ತಾ – ಜಮಖಂಡಿ.ಜಿ.ಬಾಗಲಕೋಟೆ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ