ಸೃಜನಾತ್ಮಕ ಕ್ರಿಯಾಶೀಲ ಸಾಹಿತಿ ; ಬಾಲಾಜಿ ಕುಂಬಾರ.
ಬೀದರ ಜಿಲ್ಲೆಯ ಉದಯೋನ್ಮುಖ ಯುವ ಬರಹಗಾರರ ಸಮೂಹದಲ್ಲಿ ಎದ್ದು ಕಾಣುವ ಮತ್ತೊಂದು ಹೆಸರೆಂದರೆ ಬಾಲಾಜಿ ಕುಂಬಾರ ಅವರದು.
ಇವರು ಬೀದರ ಜಿಲ್ಲೆಯ ಔರಾದ ತಾಲೂಕಿನ ಚಟ್ನಾಳ ಗ್ರಾಮದ ಅಮೃತ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ 5-7-1990 ರಲ್ಲಿ ಜನಿಸಿದ್ದಾರೆ.
ವಿಜ್ಞಾನ ಶಿಕ್ಷಣದಲ್ಲಿ ಬಿ.ಎಸ್ಸಿ.ಕಂಪ್ಯೂಟರ್ ಪದವಿಧರರಾದ ಇವರ ಮಾತೃಭಾಷೆ ತೆಲುಗುವಾದರು, ವ್ಯಾವಹಾರಿಕ ಭಾಷೆ ಮಾತ್ರ ಕನ್ನಡವಾಗಿದೆ .
ಆದರೆ ಇವರು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ಪೂರೈಸಿ ತ್ರೈಬಾಷಾ ಪ್ರವಿಣರಾಗಿ ಗುರುತಿಸಿ ಕೊಂಡಿದ್ದಾರೆ.
ಕಾಲೇಜು ದಿನಗಳಲ್ಲಿಯೇ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡ ಇವರು ‘ ಪ್ರೀತಿ ಹುಟ್ಟುವ ಹೊತ್ತು ‘ ಎನ್ನುವ ಒಂದು ಕವನ ಸಂಕಲನವನ್ನು ಪ್ರಕಟಿಸಿದ್ದಾರೆ. ಹಾಗೂ ಸುಮಾರು 50 ಕಿಂತಲೂ ಹೆಚ್ಚು ಶರಣರ ವಚನ ವಿಶ್ಲೇಷಣೆ ಮಾಡಿ ಅವುಗಳು ಪುಸ್ತಕ ರೂಪದಲ್ಲಿ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ.
ಅಲ್ಳದೆ ‘ ಇವನಮ್ಮವ ಎಂದೇನಿಸಯ್ಯಾ ‘ ಎಂಬ ಸಂಪಾದಿತ ಕೃತಿ ಸೇರಿದಂತೆ ಇನ್ನೂ
ಎರಡು ಕವನ ಸಂಕಲನಗಳು ಅಪ್ರಕಟಿತವಾಗಿವೆ.
ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕನ್ನೆಳ್ಳಿ ಗ್ರಾಮದಲ್ಲಿ
ಜರುಗಿದ ಕಾರ್ಯಕ್ರಮದಲ್ಲಿ
‘ ಸಗರನಾಡು ಯುವ ಚೇತನ ‘ ಪ್ರಶಸ್ತಿ, ಮತ್ತು ಬೀದರ ಜಿಲ್ಲೆಯ ‘ಯುವ ಸಾಹಿತಿ’ ಪ್ರಶಸ್ತಿ ಪಡೆದಿದ್ದಾರೆ.
ಅಷ್ಟೇಯಲ್ಲದೆ ಇವರ ಬರಹಗಳು
‘ ಉದಯಕಾಲ,ಬಿಂದಾಸ ಬೀದರ, ಕಣ್ಣಿದ್ದು ಕುರುಡ,ನ್ಯಾಯಪಥ,
ಜಾಗೃತಿ ನ್ಯೂಜ್.
ಮೊದಲಾದವುಗಳಲ್ಲಿ ಇವರ ಲೇಖನ ಬರಹಗಳು ಪ್ರಕಟವಾಗಿವೆ.
ಇವರು ಔರಾದ ತಾಲೂಕಿನ ಸಂತಪೂರ ವಲಯದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಕಲಬುರಗಿಯಲ್ಲಿ ನಡೆದ ‘ ಕಾವ್ಯ ಕಮ್ಮಟದಲ್ಲಿ ಭಾಗವಹಿಸಿದ್ದಾರೆ .
ವಿವಿಧ ತಾಲೂಕು, ಜಿಲ್ಲೆ ರಾಜ್ಯಮಟ್ಟದ ಸಮ್ಮೇಳನದಲ್ಲಿ ಉಪನ್ಯಾಸ ನೀಡಿ ಕವಿ ಗೊಷ್ಠಿಯಲ್ಲಿಯೂ ಪಾಲ್ಗೊಂಡಿದ್ದಾರೆ.
ಹೀಗೆ ಇವರು ಕ್ರಿಯಾಶೀಲ ಸೃಜನಾತ್ಮಕ ಬರಹಗಳ ಮೂಲಕ ಬೀದರ ಜಿಲ್ಲೆಯ ಬರಹಗಾರರಾಗಿ ಕಂಗೋಳಿಸುತ್ತಾರೆ.
ಸದ್ಯ ಇವರು ಖಾಸಗಿ ಶಾಲೆಯೊಂದರ ಮುಖ್ಯ ಶಿಕ್ಷಕರಾಗಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮತ್ತು ಇತ್ತೀಚೆಗೆ ಈ ದಿನ.ಕಾಮ್ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
– ಮಚ್ಚೇಂದ್ರ ಪಿ ಅಣಕಲ್.
ಕೃಪೆ : ‘ಬೀದರ ಜಿಲ್ಲಾ ಸಾಹಿತಿಗಳ ಪರಿಚಯ’ ಎಂಬ ಪುಸ್ತಕ ದಿಂದ ಆರಿಸಿಕೊಳ್ಳಲಾಗಿದೆ.