Oplus_131072

ಸಕ್ಕರೆ ನಾಡಿನಲ್ಲಿ ಸಮ್ಮೇಳನ

ಕನ್ನಡ ನುಡಿಯು..ಕರುನಾಡಿನ ಕುಡಿಯು..
ಮೊಳಗಲಿ ನಿತ್ಯ ತಾಯಿಗೆ ದೀಪದ ಆರತಿಯು..

87ನೇ ಕನ್ನಡ ಸಾಹಿತ್ಯ ಸಮ್ಮೇಳನವು
ಜರುಗಲಿ ಸಂಭ್ರಮ ಸಡಗರದಿಂದಾ

ಕನ್ನಡ ಕಂಪನ್ನು ಸೂಸುವ ಕವಿ ಮಿತ್ರರೇ
ಭಾಷೆಯ ಬಳಕೆ ಆಗಲಿ ನಿತ್ಯ ಪದಪುಂಜದಂತೆ

ಹಿರಿಯ ಕಿರಿಯ ಸಾಹಿತಿ ಸಂತರೇmp
ಸಮಾಜದ ಒಡಕು ತಡಕುತ್ತಿದ್ದಿ ಬರಲಿ
ನಿಮ್ಮ ಕಾವ್ಯದ ರಸದೌತಣದಿಂದವು

ನಾನು ಕನ್ನಡಿಗ ಕನ್ನಡಕ್ಕಾಗಿ ಹುಟ್ಟಿರುವೆ
ಎನ್ನುವುದು ಮನದಲ್ಲಿದ್ದರೆ ಸಾಲದು
ಜೀವ ಇರುವ ತನಕ ಕನ್ನಡ ಸೇವೆ ಮಾಡೋಣ

ಕೈಯೆತ್ತಿ ಮುಗಿಯುವ ತಾಯಿ ಹೃದಯವೇ
ನಮ್ಮ ಈ ಭಾಷೆ ನೂರು ಭಾವದ ಕಲೆ
ಯಾರಿಗೂ ಬೇದ ತೋರದೆ ಅಪ್ಪಿಕೊಳ್ಳುವ ಮೃದು ಭಾಷೆ

ಅಕ್ಕ ತಂಗಿ ಅಣ್ಣ ತಮ್ಮರೇ ಬನ್ನಿ ಇದು ನಮ್ಮ ಸಾಹಿತ್ಯ ಸಮ್ಮೇಳನಕ್ಕೆ
ಸಕ್ಕರೆ ನಾಡಿನಲ್ಲಿ ಸಿಹಿಯಷ್ಟೇ ಮೆರಗು ತುಂಬಿದೆ ನೋಡಕ್ಕೆ

ಕವಿತಾ ಎಮ್ ಮಾಲಿಪಾಟೀಲ.ಜೇವರ್ಗಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ