Oplus_131072

ರೈತ

ರೈತ

ರೈತ ರೈತ ರೈತ ನೀನು
ದೈವ ಕಾಣಣ್ಣ
ಅನ್ನ ಬೆಳೆದು ದೇಶ ಕಾಯುವ
ದೇವರು ನೀನಣ್ಣ

ನೇಗಿಲೇ ನಿನ್ನ ಶಕ್ತಿಯಣ್ಣ
ಎತ್ತುಗಳೆರಡು ಗೆಳೆಯರಣ್ಣ
ರಟ್ಟೆಯ ಕಸುವನೇ ನಂಬಿ ನೀನು
ಮಣ್ಣಲಿ ಬೆವರನು ಬಸಿಯುವೆಯಣ್ಣ

ಮಳೆಗಾಳಿ ಚಳಿಗೆ ನಡುಗದೇ ನೀನು
ವರುಷ ಪೂರ್ತಿ ದುಡಿಯುವೆಯಣ್ಣ
ಆ ರಜೆ ಈ ರಜೆ ಎಲ್ಲವ ಮರೆತು
ದುಡಿತದಿ ದೇವರ ಕಾಣುವೆಯಣ್ಣ

ನಿನ್ನಯ ಸಾವು ತರುವುದು ನೋವು
ಉರುಳಿಗೆ ಕೊರಳ ಕೊಡಬೇಡಣ್ಣ
ಸಾಲದ ಬಾಧೆ ಇರುವುದೇ ಎಂದಿಗೂ
ನಾಳೆಗಾದರೂ ತೀರುವುದಣ್ಣ

ಸಾವಿನ ಬಾಯಿಗೆ ಸಿಗಲೇಬೇಡ
ನಿನ್ನನು ನಂಬಿ ಜಗವಿಹುದಣ್ಣ
ನಿನ್ನಯ ಬೆವರಿನ ಫಲವಿದೆ ಜಗಕೆ
ಅನ್ನದ ಧಣಿಯು ನೀನೆಮಗಣ್ಣ

ಸುರೇಶ ಕಲಾಪ್ರಿಯ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ