ಬರಹದಂತೆ ಬದುಕು ಇರಲಿ
ಬದುಕು ಒಂದು ಅಮೃತ
ಬರಹ ಇನ್ನೊಂದು ಅದ್ಭುತ
ಬದುಕಿನ ಕೊಂಡಿಗಳನ್ನು ಹೆಣೆಯುತ್ತಾ
ಬರಹ ರೂಪದಲ್ಲಿ ಪೊಣಿಸುತ್ತಾ
ಜೀವನವೇ ಒಂದು ನಾಟಕ
ಪಾತ್ರಗಳು ಹಲವಾರು ಆಟಕ್ಕೆ
ಈ ಪಾಠ ಅಕ್ಷರಗಳ ರೂಪಕ್ಕೆ
ತಂದು ಬರೆದಿಡುವುದೇ ಮುಖ್ಯ
ಬರಹ ಲಿಖಿತ ರೂಪ ಆದರೆ
ಬದುಕು ಮೌಖಿಕ ಅದರಂತೆ ನಡೆದರೆ
ಮಾತ್ರ ಬದುಕಿನ ಭಾವನೆ ತಿಳಿದರೆ
ಬರಹಕ್ಕೆ ನೂರಾರು ಹೊಳಪು ಹೆಣೆದರೆ
ಬದುಕಿನ ಸಮಯ ಇಂತಿಷ್ಟು ಇಲ್ಲ
ಬರಹಕ್ಕೆ ಯಾವತ್ತೂ ಕೊನೆಯಿಲ್ಲ
ಬರಹ ಕಲ್ಲು ಮನಸ್ಸು ಕರಗಿಸಬಲ್ಲಪ
ಬರಹ ಭಾವನೆ ಮನಸು ಅರಳಿಸಿದೇಲ್ಲ
– ಕವಿತಾ ಎಮ್ ಮಾಲಿ ಪಾಟೀಲ ಜೇವರ್ಗಿ