ವಿವೇಕಾನಂದರು.
ಭುವನೇಶ್ವರಿ ವಿಶ್ವನಾಥದತ್ತರ ನೆಚ್ಚಿನ ಕುವರರು
ಶಾರದಾಂಬೆ ಪರಮ ಹಂಸರ ಮಾನಸ ಪುತ್ರರು
ಕಲ್ಕತ್ತದಲಿ ಕುಮಾರ ನರೇಂದ್ರರು ಜನಿಸಿದರು
ಭಾರತಾಂಬೆಯ ಬಲು ಮುದ್ದಿನ ಕಂದರಿವರು
ಸ್ವಾಮಿ ವಿವೇಕಾನಂದರು ಬಾಂಧವ್ಯ ಬೆಸೆದರು
ಸಹೋದರ ಸಹೋದರಿಯರೆನ್ನುತ ನಡೆದವರು
ಚಿಕಾಗೊದಲಿ ಭಾರತದ ಧ್ವನಿ ಮೊಳಗಿಸಿಹರು
ಸಂಸ್ಕೃತಿ ಸಂಸ್ಕಾರಕೆ ಹೊಸ ಭಾಷ್ಯ ಬರೆದಿಹರು
ಎದ್ದೇಳಿ ಎಲ್ಲರೆನ್ನತ ಜನರ ಜಾಗೃತ ಗೊಳಿಸಿಹರು
ಮಾನಿನಿ ದೀನರೊಳು ಉಲ್ಲಾಸ ತುಂಬಿಹರು
ನಾಡಲಕ್ಕೂ ಸಂಚರಿಸಿ ಭಾರತೀಯತೆ ಬಿತ್ತಿಹರು
ಸಾಮರಸ್ಯಕ್ಕೊಂದು ನವ ವ್ಯಾಖ್ಯಾನ ಮಾಡಿಹರು
ಪಾಲಿಸುವ ತರುಣ ಸನ್ಯಾಸಿಯ ಬೋಧನೆಗಳು
ಆನಂದಮಯ ಗೊಳಿಸುವವು ನಮ್ಮೆಲ್ಲರ ಬಾಳು
ಜನಿಸಲಿ ವಿವೇಕರಂತಹ ನೂರಾರು ಕಲಿಗಳು
ಸ್ನೇಹ ಮಮತೆ ಕಾರುಣ್ಯ ಬೀರಲೆಮ್ಮ ಕಂಗಳು.
– ಮಾಣಿಕ ನೇಳಗಿ ತಾಳಮಡಗಿ.