Oplus_131072

ಮಾಯದ ಗಾಯ

ಮೈಯ ಗಾಯಕೆ ಮುಲಾಮು ಹಚ್ಚಬಹುದು
ಈ ಮನದ ಗಾಯಕೆ ಏನು ಹಚ್ಚಲರಿಯದು
ಆದ ಆಯುಧದ ಗಾಯ ವಾಸಿಯಾಗುವುದು
ಮಾತಿನಿಂದಾದ ಗಾಯ ಸುಲಭಮಾಯದದು .!!೧!!

ಬಲ್ಲವರ್ಹೆಳಿದರು ಮನುಷ್ಯಂಗೆ ಮಾತಿನ ಪೆಟ್ಟು
ಸತ್ಯವುದು ಪ್ರಾಣಿಗಳಿಗೆ ಬಡಿಗೆ ಬೆತ್ತದ ಏಟು
ಮಾತಿನಿಂದಲಿ ಬೀಳುವುದು ಹೃದಯಕ್ಕೆ ಗೀಟು
ನೋವಿನಿಂದ ಕಂಪಿಸುವುದು ಹೃದಯ ಕವಾಟು.!!೨!!

ಮತಿಯುಳ್ಳ ಮನುಷನಿಗೆ ಕಡು ಮಾತೆ ನೋವು
ತನ್ನತನಕ್ಕೆ ದಕ್ಕೆಯಾದರೆ ಬಂದಂತೆಯೇ ಸಾವು
ಅಲ್ಲದವರ ಮಾತುಮೆದ್ದಂತೆ ಬೆಲ್ಲವಿಲ್ಲದ ಬೇವು
ಮತಿ ಹೀನಂಗೆ ಏನಂದರೂ ಸ್ವಚ್ಛಂದದ ಠಾವು.!!೩!!

ನಾಟಿದ ಕೃಪಾಣ ಕತ್ತಿಯ ನೋವು ಸೀಮಿತವದು
ರಸನಿಯ ನೋವು ಅನುಕ್ಷಣವು ನೆನಪಿಸುವುದು
ಮಾತು ಮನಸಿನ ಮೇಲೆ ಸವಾರಿ ಗೈಯುವುದು
ಒಬ್ಬರಲಿ ಹುಟ್ಟಿ ತಾ ಮತ್ತೊಬ್ಬರಲಿ ನಾಟುವುದು.!!೪!!

ನಾಲಿಗೆ ಒಳ್ಳೆಯದಾದರೆ ನಾಡೆಲ್ಲವು ಒಳ್ಳೆಯದು
ಆಡಿ ನೋಡಿ ಅನುಭವಿಸಿಹರ ಅನುಭಾವವಿದು
ಬಲ್ಲವರ ನುಡಿಗಡಣ ಬೆಲ್ಲಕಿಂತಲು ಸವಿಯಿದು
ಮಾತಿನಪೆಟ್ಟು ಬಲ್ಲರಿಗೆ ಮಾಯದ ಗಾಯವದು.!!೫!!

✍️ಹೆಚ್ ರಾಠೋಡ (ಅಂಜನಾಸುತ)
ಶಿಕ್ಷಕರು ಸುರಪುರ 

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ