Oplus_131072

 

ಪರಿಸರಕ್ಕೆ ನಮ್ಮ ಕೊಡುಗೆ ಏನು ?

ಮನುಷ್ಯನು ಪ್ರತಿ ಹಂತದಲ್ಲೂ ಪ್ರಕೃತಿಯಿಂದ ಒಂದಲ್ಲ ಒಂದು ಸಹಾಯ ಇರುವುದಂತೂ ನಿಜ. ನಾವು ಜೀವಿಸುವ ಈ ಭೂಮಿಗೆ ಹೊರೆಯಾಗಿ ಗಿಡ ಮರಗಳಿಂದ ಬೆಳಕನ್ನು ಪಡೆಯುವುದರ ಜೊತೆಗೆ ನಮಗೆ ಅಗತ್ಯವಾದ ವಸ್ತುಗಳನ್ನು ಅವುಗಳಿಂದಲೇ ತಯಾರಿಸಿ ಬದುಕು ಕಟ್ಟಿಕೊಂಡು ಬದುಕುತ್ತಿರುದಂತೂ ನಿಜ .

ಈ ಭೂಮಿಯ ಮೇಲೆಯ ಪ್ರತಿ ಒಂದು ಜೀವಿಗೂ ಈ ಪ್ರಕೃತಿಯ ಮಡಿಲಲ್ಲಿ ಬೆಳೆಯುವ ಹಕ್ಕನ್ನು ಪಡೆದಿದೆ. ಆದರೆ ನಾವು ಮನುಷ್ಯರು ಮಂಗನಿಂದ ಮಾನವನಾಗಿ ಬದಲಾಗಿ ತನ್ನ ಬುದ್ಧಿವಂತಿಕೆಯಿಂದ ಸಕಲ ಜೀವಚರಗಳನ್ನು ತನ್ನ ಅಡಿ ಆಳಂತೆ ನಡೆಸಿಕೊಂಡು ಜೀವಿಸುತ್ತಿರುವುದು ಸತ್ಯ .
ಈಗ ಮನುಷ್ಯನು ಬೆಳೆಯುತ್ತಾ ಪ್ರತಿ ಕ್ಷಣದಲ್ಲಿ ಈ ಭೂಮಿಯನ್ನು ತನ್ನದೆಂಬ ಅಹಂಕಾರದಿ ಮನೆ ಕಟ್ಟುವುದರಲ್ಲಿ ಎಲ್ಲದರಲ್ಲೂ ಈ ಪರಿಸರವನ್ನೇ ಆಲಂಬಿಸಿ ಕೊನೆಗೆ ಬೇಕಾದ ಕೊನೆಯ ಘಟ್ಟದಲ್ಲೂ ಅವನ ಉಸಿರು ನಿಂತ ಮೇಲು ಸಹ ಪರಿಸರದಿಂದ ಮಣ್ಣಿನಲ್ಲಿ ಅವನ ದೇಹವು ಮಣ್ಣಾಗುವುದು ಅಥವಾ ಸುಡುವುದಾದರೆ ಒಂದು ಮರದ ಕಟ್ಟಿಗೆಯಿಂದಲೇ ಸುಡಬೇಕು. ಅದಕ್ಕೆ ಮರವೇ ಬೇಕಾಗಿತ್ತದೆ. ಗಾಳಿ ಬೆಳಕು ನೀರು ಎಲ್ಲವೂ ನಾವು ಪರಿಸರದಿಂದಲೇ ಪಡೆಯಲೇಬೇಕು.

ಈ ಪರಿಸರದಲ್ಲಿ ಅನೇಕ ಜೀವಿಗಳು ಮತ್ತು ಸಣ್ಣ ಪುಟ್ಟ ಪ್ರಾಣಿ ಪಕ್ಷಿಗಳು ಜೀವ ಜಲಗಳು ಬದುಕನ್ನು ಕಟ್ಟಿಕೊಂಡು ಸಾರ್ಥವಿಲ್ಲದೆ ಬದುಕು ನಡೆಸುತ್ತಿರುವಾಗ ಈ ಮನುಷ್ಯ ಎಂಬ ಪ್ರಾಣಿಯು ತಾನೇ ಬುದ್ಧಿವಂತನೆಂದು ಮೆರೆಯುತ್ತಾ ತನ್ನ ಹಕ್ಕನ್ನು ಇತರ ಎಲ್ಲಾ ಪ್ರಾಣಿ ಪಕ್ಷಿಗಳ ಮೇಲೆ ಚಲಾಯಿಸುತ್ತಾ ಅವುಗಳನ್ನು ಬದುಕಲು ಜಾಗವಿಲ್ಲದ ಹಾಗೆ ಮಾಡುತ್ತಿದ್ದಾನೆ.

ಗಿಡಮರಗಳನ್ನು ನಾಶಪಡಿಸಿ ದೊಡ್ಡ ದೊಡ್ಡ ಮನೆ ಹೋಟೆಲ್ ಕಾರ್ಖಾನೆ ಪ್ರವಾಸಿ ತಾಣಗಳು ಮುಂತಾದವುಗಳನ್ನು ನಿರ್ಮಿಸಿ ಹಣಕ್ಕಾಗಿ ಎಂತಹ ಕೃತ್ಯವನ್ನು ಮಾಡುವುದಕ್ಕೆ ರೆಡಿಯಾಗಿದ್ದಾನೆ.
ಅದೇ ಹಣವನ್ನು ತಯಾರಿಸುವುದೇ ಇದೇ ಪ್ರಕೃತಿಯ ದತ್ತವಾಗಿ ಬೆಳೆದ ಮರಗಳಿಂದ ಅರಿತರೂ ಅದಕ್ಕೆ ದ್ರೋಹ ಬಗೆಯುತ್ತಿರುವುದಂತೂ ನಿಜ . ಅದಲ್ಲದೆ ಗಾಳಿ ನೀರು ಬೆಳಕು ಎಲ್ಲ ತನ್ನ ಸ್ವತ್ತು ಎಂದು ಎಲ್ಲ ರೀತಿಯಲ್ಲೂ ಉಪಯೋಗಿಸಿಕೊಳ್ಳವುದರ ಜೋತೆ ಆಕಾಶದ ಸೂರ್ಯ, ಚಂದ್ರ ನಕ್ಷತ್ರಗಳನ್ನು ಬಿಡದೆ ಬೆನ್ನು ಹತ್ತಿದ್ದಾನೆ . ಎಂದರೆ ಮನುಷ್ಯ ಪ್ರಾಣಿಯು ಎಷ್ಟು ಬುದ್ಧಿವಂತ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ.

ಆ ಜೀವಗಳನ್ನು ಬಿಡದೆ ಅವುಗಳನ್ನು ತಿನ್ನುವುದಲ್ಲದೆ ಅವುಗಳನ್ನು ಔಷಧಿಗಳನ್ನು ತಯಾರಿಸಿ ತನ್ನ ಆರೋಗ್ಯ ಕಾಪಾಡಿಕೊಳ್ಳುವುದಲ್ಲದೆ ಹೆಚ್ಚೆಚ್ಚುಗಳಿಂದ ಲಾಭ ಪಡೆಯುತ್ತಾನೆ .

ಇಷ್ಟೆಲ್ಲ ಮಾಡಿ ಏನು ಪ್ರಯೋಜನ ? ಕಡೆಗೆ ಈ ಜೀವವನ್ನು ಭೂಮಿಯಲ್ಲಿ ಮಣ್ಣಾಗಿ ಹೋಗೋದಂತು ನಿಜ. ಪ್ರಕೃತಿಯಿಂದ ಪರಿಶುದ್ಧವಾದ ಗಾಳಿಯು ಇದ್ದರೂ ತನ್ನದೇ ಆದ ರೀತಿಯಲ್ಲಿ ಯಂತ್ರವನ್ನು
ರೂಪಿಸಿಕೊಂಡಿದ್ದಾನೆ.

ನೈಸರ್ಗಿಕವಾಗಿ ಬೆಳಕಿನ ಜೊತೆಗೆ ನೀರಿನಿಂದ ವಿದ್ಯುತ್ ತಯಾರಿಸಿ ಅದರಿಂದ ಬೆಳಕನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾನೆ .
ಆಮೇಲೆ ಸ್ವಾರ್ಥದಿಂದ ಮಾರುವ ಹಂತಕ್ಕೆ ಬಂದಿದ್ದಾನೆ .
ತನಗೆ ಬೇಕಾದ ಆಹಾರವನ್ನು ಈ ಪರಿಸರದಲ್ಲಿ ಪಡೆದು ಅದನ್ನು ಅತಿಯಾಗಿ ಶೇಖರಿಸಿ ಕೊಳ್ಳಲು ಅತಿ ಆಸೆಯ ಹಿಂದೆ ಬಿದ್ದಿದ್ದಾನೆ .
ಆಸ್ತಿಯ ಹೆಸರಿನಲ್ಲಿ ಭೂಮಿಯನ್ನು ಅಗೆದು ಅದರಿಂದ ಬರುವ ಖನಿಜ ಮುಂತಾದ ಅನಿಲ ತ್ಯಾಜ್ಯ ವಸ್ತುಗಳೆಂದು ಸಾಕಷ್ಟು ಲಾಭಗಳಿಸಿ ಮುಂದೆ ಬಂದರೂ ಇನ್ನೂ ಬೇಕು ಎನ್ನುವ ಜೀವಿಯಂತೆ ಬದುಕುತ್ತಿದ್ದಾನೆ.

ಉದಾಹರಣೆ : ಒಂದು ಮರವು ಅವನು ತೂಗುವ ತೊಟ್ಟಿನಿಂದ ಹಿಡಿದು ಅವನ ಪ್ರತಿಯೊಂದು ಬೇಕು ಬೇಡುಗಳನ್ನು ಪಡೆದು ಅದರಿಂದ ಉಸಿರಾಡುವುದು.
ಹಾಗೆ ಸೂರ್ಯ ಚಂದ್ರ ನಕ್ಷತ್ಗಳನ್ನು ಹಿಡಿಯಲು ಪ್ರಯತ್ನಿಸಿ, ಇಷ್ಟೆಲ್ಲಾ ಆದರೂ ಈ ಮನುಷ್ಯ ಪ್ರಾಣಿಯು ಪ್ರಕೃತಿಗೆ ತಾನು ಏನು ನೀಡಿದ್ದೇನೆ ? ಅನ್ನೊದೆ ಮರೆತುಬಿಟ್ಟಿದ್ದಾನೆ .
ತನ್ನದೇ ಬುದ್ಧಿವಂತಿಕೆಯಿಂದ ಈ ಪ್ಲಾಸ್ಟಿಕ್ ಮುಂತಾದ ಬೇಡದ ವಸ್ತುಗಳನ್ನು ತಯಾರಿಸಿ ಪ್ರಕೃತಿಗೆ ಎಷ್ಟು ಹಾನಿ ಉಂಟು ಮಾಡಿದ್ದಾನೆ. ಎಂದರೆ ಅದು ಎಷ್ಟು ಹೇಳಿದರು ಸಾಲದು .

ಅದರಂತೆ ಕಾರ್ಖಾನೆಗಳಿಂದ ಬರುವ ಹಾಗೆ ದಟ್ಟವಾದ ವಾತಾವರಣವನ್ನು ಈ ಪರಿಸರಕ್ಕೆ ಅಲ್ಲದೆ ಪ್ರಾಣಿ ಪಕ್ಷಿಗಳಿಗೂ ತುಂಬಾ ಹಾನಿ ಉಂಟಾಗುತ್ತದೆ .ಎಂದರೆ ಕರಗಿಸಲು ಸಾಧ್ಯವೇ ಇಲ್ಲ ಎನ್ನುವ ಹಾಗಿದೆ .

ತನ್ನ ಬೆಳವಣಿಗೆ ಸುತ್ತಮುತ್ತಲಿನ ಗಿಡ ಮರಗಳನ್ನು ಕಡೆದು ಕಾಲ ಕಾಲಕ್ಕೆ ಮಳೆಯ ಬಾರದಂತಹ ಮತ್ತು ನೀರಿಗಾಗಿ ಭೂಮಿಯನ್ನು ಕೊರೆದು ಅಂತರ್ಜಲವು ಕುಸಿಯುವಂತೆ ಮಾಡಿದ್ದಾನೆ.
.ಬೇಸಿಗೆಯಲ್ಲಿ ಹಳ್ಳ ಕೊಳ್ಳಗಳು ಬತ್ತಿ, ಕಡೆಗೆ ಪ್ರಾಣಿ-ಪಕ್ಷಗಳು ಜೀವಜಲಚರಗಳಿಗೆ ನೀರಿಲ್ಲದಂತಾಗುತ್ತಿದೆ.

ಆಕಾಶಕ್ಕೆ ಏಣಿ ಹಾಕುವ ಎಂಬ ಆಸೆಯಲ್ಲಿ ನೆಲವು ಕುಸಿಯುತ್ತಿರುವುದು ಅವನಿಗೆ ಅರಿವಾಗುತ್ತಿಲ್ಲ. ಅದಲ್ಲದೆ ಸಾಕು ಪ್ರಾಣಿಗಳ ಚರ್ಮದಿಂದ ತನಗೆ ಬೇಕಾದ ವಸ್ತುಗಳನ್ನು ತಯಾರಿಸಿ ಅವುಗಳ ಸಂತತಿಯೇ ಬರೆದಾಗುವಂತೆ ಮಾಡಿದ್ದಾನೆ.

ಹೀಗೆ ಮುಂದಿನ ದಿನಗಳಲ್ಲಿ ನಾವು ಹಲವಾರು ಪ್ರಾಣಿ ಪಕ್ಷಿಗಳನ್ನು ಬರೆ ಚಿತ್ರಗಳಲ್ಲಿ ನೋಡಿ ಖುಷಿ ಪಡುವ ಕಾಲ ಬಂದರು ಬರಬಹುದು .
ಹೀಗೆ ಪ್ರಕೃತಿ ಮಾತೆಗೆ ವಿರುದ್ಧವಾಗಿ ಹೋಗಿದ್ದಕ್ಕೆ ಪ್ರಕೃತಿಯೇ ಕೆಲವೊಂದು ಬಾರಿ ಮುನಿಸಿಕೊಂಡು ಮಳೆಯ ಆಗದಂತ ತಡೆಯುತ್ತದೆ.
ಭೂಕಂಪವು ದಂತಹ ಘಟನೆಗಳು ಜರುಗುತ್ತವೆ. ಮತ್ತೆ ತೀರಾ ವಿಕೋಪಕ್ಕೆ ಹೋಗಿ ಸುನಾಮಿ ಬಿರುಗಾಳಿಯಂತಹ ಘಟನೆಗಳು ಸಂಭವಿಸಿ ಮಳೆ ಹನಿ ಜಲಹಾನಿ ಉಂಟು ಮಾಡಿ ಮನುಷ್ಯನಿಗೆ ಅದರಿಂದ ತೊಂದರೆ ಅನುಭವಿಸುವುದಂತು ಸತ್ಯ
ಹಾಗೆ ಮಾನವ ತನಗೆ ಅರಿವಿಲ್ಲದೆ ರೋಗರೂಜನಗಳನ್ನು ತಂದುಕೊಂಡಿದ್ದಾನೆ.
ಇತ್ತೀಚಿನ ದಿನಗಳಲ್ಲಿ ಜನಸಂಖ್ಯೆ ಅತಿಯಾಗಿ, ಅರಣ್ಯಗಳನ್ನು ನಾಶ ಮಾಡಿ ವಸತಿ ಸಲುವಾಗಿ ಪರಿಪಾಠಲು ಪಡುತ್ತಿರುವುದಂತೂ ನಿಜ.

ಮನುಷ್ಯ ತಾನು ಮಾಡಿದ ತಪ್ಪಿಗೆ ತಾನೇ ಶಿಕ್ಷೆ ಅನುಭವಿಸುವುದಲ್ಲದೆ . ಪ್ರಾಣಿ ಪಕ್ಷಿಗಳು ಸಕಲ ಜೀವರಾಶಿಗಳು ತೊಂದರೆ ಕೊಡುತ್ತಿರುವಂತೆ ನಿಜ. ಈಗ ನಾವು ಮನುಷ್ಯರಾಗಿ ಏನು ಕರ್ತವ್ಯ ಮಾಡಬೇಕು ? ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು.

ನಮ್ಮ ಜನಸಂಖ್ಯೆ ಹೆಚ್ಚಾಗುತ್ತಿರುವುದನ್ನು ಮೊದಲು ಕಡಿಮೆ ಮಾಡಿಕೊಳ್ಳಬೇಕು .

ಮತ್ತೆ ನಮಗೆ ಎಷ್ಟು ಹಕ್ಕು ಇದೆಯೋ ಅಷ್ಟೇ ಹಕ್ಕು ಎಲ್ಲ ಪ್ರಾಣಿ ಪಕ್ಷಿಗಳಿಗೂ ಇದೆ ಎಂಬುದನು ತಿಳಿದು ಪ್ರಾಣಿ ಪಕ್ಷಿಗಳು ಪ್ರತಿಯೊಂದು ಜೀವಿಗೂ ಆ ಹಕ್ಕುಗಳು ಇವೆ ಎಂಬುದನ್ನು ಅರಿತುಕೊಳ್ಳಬೇಕು.

ಪ್ರಕೃತಿಯಿಂದ ಮೊದಲಿಂದಲೂ ನಾವು ಏನು ಪಡೆದಿದ್ದೇವೆ ಅದಕ್ಕೆ ಪ್ರತಿಯಾಗಿ ನಾವು ಏನು ಕೊಡಬೇಕು ಎಂಬುದನ್ನು ಅರಿತುಕೊಳ್ಳಬೇಕು. ಮೊದಲು ಪ್ಲಾಸ್ಟಿಕ್ ನಿಂದ ತಯಾರಿಸಿದ ಎಲ್ಲಾ ವಸ್ತುಗಳನ್ನು ನಾಶಪಡಿಸಬೇಕು. ಆಮೇಲೆ ಅದಲ್ಲದೆ ನಾವು ತಯಾರಿಸಿದ ವಸ್ತುಗಳಿಂದ ಈ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ತಯಾರಿಸಿಕೊಳ್ಳಬೇಕು.

ರಸ್ತೆ ಅಕ್ಕಪಕ್ಕದಲ್ಲಿ ಗಿಡಗಳನ್ನು ನೆಡಬೇಕು . ಪ್ರಾಣಿ ಪಕ್ಷಿಗಳಿಗೆ ದಾಹ ತಣಿಸುವ ಸಲುವಾಗಿ ಅಲ್ಲಲ್ಲಿ ಅರಣ್ಯದಲ್ಲಿ ಹಳ್ಳ ಕೊಳ್ಳಗಳನ್ನು ಕೃತಕವಾಗಿ ನಿರ್ಮಿಸಿದಬೇಕು .
ನಾವು ಗೌರವದಿಂದ ನಡೆದುಕೊಂಡರೆ ಪ್ರಕೃತಿಯು ನಮಗೆ ಹೆಚ್ಚು ಹೆಚ್ಚು ಸಲಹುವುದು
ಎಂಬುದನ್ನು ಪ್ರತಿಯೊಬ್ಬ ಮಾನವನು ಅರಿತು ಅರಿಸಿಕೊಂಡು ತನ್ನ ಕರ್ತವ್ಯವನ್ನು ನಿಭಾಯಿಸಬೇಕು.

ಪ್ರಕೃತಿಯ ಮಡಿಲು ನಮ್ಮೆಲ್ಲರನ್ನು ಸಲುವ ತಾಯಿಯಂತೆ ಆ ತಾಯಿಯನ್ನು ನಾವು ಹೇಗೆ ಕಾಪಾಡಿಕೊಳ್ಳಬೇಕು ಎಂಬುದನ್ನು ಕಲಿಯಬೇಕು. ಶಾಲೆಯ ಪಠ್ಯಪುಸ್ತಕದಲ್ಲಿ ಪರಿಸರದ ಅರಿವನ್ನು ಮಕ್ಕಳಿಗೆ ಕಲಿಸಿದರೆ ಅವರು ದೊಡ್ಡವರಾದ ಮೇಲೆ ಅವರಲ್ಲಿ ಪರಿಸರದ ಬಗ್ಗೆ ಅರಿವು ಮತ್ತು ಗೌರವ ಪ್ರೀತಿ ಬೆಳೆಯುತ್ತದೆ . ಮತ್ತೆ ಪರಿಸರವನ್ನು ಪ್ರಕೃತಿಯನ್ನು ನಾವು ಹೇಗೆ ಪ್ರೀತಿಸಬೇಕು ಎಂದು ಕಲಿಯುತ್ತಾರೆ .

ಪ್ರಕೃತಿಯ ಮಡಿಲಲ್ಲಿ ನಾವೆಲ್ಲರೂ ಕೂಡ ಮಕ್ಕಳೇ ಅಲ್ಲವೆ ? ಹಾಗಾಗಿ ಪರಿಸರವನ್ನು ಉಳಿಸೋಣ ಮತ್ತು ಅದನ್ನು ನಾಶವಾಗದಂತೆ ಮುಂದಿನ ಪಿಳಿಗೆಗಳಿಗಾಗಿ ರಕ್ಷಿಸೋಣ .

ರಾಧಾ ಹನುಮಂತಪ್ಪ ಟಿ ಹರಿಹರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ