ಮಸಣದ ಆತ್ಮ.
–ಎಚ್.ಎಸ್.ಬೇನಾಳ
ನೆರಳ ಬೆನ್ನುತ್ತಿದ್ದವನೊಬ್ಬ ಭೂಪ
ದೇಶ ಕಟ್ಟುತ್ತೇನೆ, ಸುಭದ್ರವಾಗಿ
ಹೀಗೆ ಹೇಳಿ ಹೋದವನ
ಆತ್ಮ ನನ್ನನೂರು
ಮಸ್ಯಾಣದ ಮುಂದೆ ನಗುತ್ತಿದೆ.
ಸುನಾಮಿ ಬಂದು ಊರ ಹರಕೊಂಡು ಹೆಣಗಳು ತೇಲುತ್ತಿವೆ
ಅರೆ ಬರೆ ಕೊಳೆತು
ದುರ್ವಾಸನೆ ಬೀರುತ್ತಿವೆ
ಸೌಗಂಧವೆಂದು ಸೇವಿಸುವ
ಬಂಡ ಆತ್ಮಗಳು
ನನ್ನನೂರು ಮಸ್ಯಾಣದ
ಮುಂದೆ ಕುಣಿಯುತ್ತಿವೆ.
ರಾಷ್ಟ್ರ ಕಾಯುವ
ಸೈನಿಕನ ರಕ್ತದಲ್ಲಿ
ಹೊಕಳಿ ಆಡುತ್ತಾ
ದೇಶ ಕಟ್ಟು ನೆಪದಲ್ಲಿ ಆತ್ಮಗಳು
ನನ್ನನೂರಿನ ಮಸ್ಯಾಣದ ಮುಂದೆ
ಮಧು ಚಂದ್ರದ ಕನಸು ಕಾಣುತ್ತಿವೆ.
– ಎಚ್.ಎಸ್.ಬೇನಾಳ
ಕಲಬುರಗಿ.