Oplus_131072

ಮುಗ್ಧ ನಗು.

ಮುಗ್ಧ ಮನಸಿನ ಶುದ್ಧ ನಗು ಎಷ್ಟು ಚಂದ,
ಆ ನಗುವೆ ಮುಗ್ಧಗೆ ಕೊಡುವುದು ಅಂದ,
ನಗುವಿನಿಂದ ಹರಡಿದೆ ಎಲ್ಲೆಲ್ಲು ಗಂಧ,
ಇದುವೆ ನೋಡಿ ಬಡ ಮಕ್ಕಳ ಅನುಬಂಧ.

ತುತ್ತು ಅನ್ನಕ್ಕಾಗಿ ಅರಸಿ ಬಂದ ಕೂಸು,
ನಸುನಕ್ಕು ಸೆಳೆದಳು ಎಲ್ಲರ ಮನಸು,
ಅಮಾಯಕ ಹುಡುಗಿಯ ನಗು ಬಲು ಸೊಗಸು,
ಯಾರೆಂನೆಂದರು ಮಾಡಿಕೊಳ್ಳಳು ಮುನಿಸು.

ನಗುವಿನ ಆಭರಣ ತೊಟ್ಟು ಪುಟ್ಟ ಪೋರಿ,
ಆ ಸೌಂದರ್ಯದಿ ಜಗವ ಗೆದ್ದ ಸುಕುಮಾರಿ,
ಇಷ್ಟದರೂ ಏನು ಅರಿಯದ ಅಲೆಮಾರಿ,
ನಗುವನ್ನೇ ಗೆದ್ದ ಭುವನೈಕ ಸುರಸುಂದರಿ.

ಈ ನಗುವಿಗೆ ಕೋಟಿ ಕೋಟಿ ಅಭಿಮಾನಿಗಳು,
ಅವಳ ಸೊಬಗು ಕಂಡು ಸೋತ ಮನಗಳು,
ಅವಳಂತೆ ಐಶ್ವರ್ಯ ಪಡೆಯಲು ಕಾದ ಜನಗಳು,
ಎಂಥ ಅದ್ಭುತ ನಿನ್ನ ನಗುಮೊಗದ ಕಣ್ಣುಗಳು.

– ಕಸ್ತೂರಿಬಾಯಿ ಬಿ ರಾಜೇಶ್ವರ.

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ